More

    1959ರಲ್ಲಿ 1 ಗ್ರಾಂ ಚಿನ್ನದ ಬೆಲೆ ಎಷ್ಟಿತ್ತು ಗೊತ್ತಾ? ಹಳೆಯ ಬಿಲ್​ ನೋಡಿದ್ರೆ ಹುಬ್ಬೇರೋದು ಖಚಿತ!

    ನವದೆಹಲಿ: ಇತ್ತೀಚೆಗ ಚಿನ್ನದ ದರ ಗಗನಮುಖಿಯಾಗುತ್ತಿದೆ. ಅತ್ಯಮೂಲ ಹಳದಿ ಲೋಹ ಗ್ರಾಹಕರ ಜೇಬು ಸುಡುತ್ತಿದೆ. ಸದ್ಯ ಚಿನ್ನದ ಬೆಲೆ ಜಿಎಸ್​ಟಿ ಸೇರಿದಂತೆ 22 ಕ್ಯಾರಟ್​ನ ಚಿನ್ನದ ಬೆಲೆ 10 ಗ್ರಾಂಗೆ 62 ಸಾವಿರ ರೂ. ದಾಟಿದೆ. ಹೀಗೆ ಬೆಲೆ ಏರಿದರೆ ಮುಂದೆ ಹೇಗಪ್ಪಾ ಅಂತಾ ಗ್ರಾಹಕರು ಚಿಂತಿಸುತ್ತಿರುವುದರ ನಡುವೆಯೇ 50 ದಶಕದ ಚಿನ್ನದ ಬಿಲ್​ ಒಂದು ವೈರಲ್​ ಆಗಿದ್ದು, ಗ್ರಾಹಕರ ಹುಬ್ಬೇರುವಂತೆ ಮಾಡಿದೆ.

    ಅಂದಹಾಗೆ ಚಿನ್ನದ ಬೆಲೆ ಪ್ರತಿನಿತ್ಯ ಬದಲಾಗುತ್ತಿರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಸೇರಿದಂತೆ ಅನೇಕ ವಿಷಯಗಳು ಬೆಲೆ ಬದಲಾವಣೆಯಲ್ಲಿ ಪ್ರಭಾವ ಬೀರುತ್ತದೆ. 1959ರಲ್ಲಿ 10 ಗ್ರಾಂ ಚಿನ್ನದ ಬೆಲೆ ಕೇವಲ 113 ರೂಪಾಯಿ ಇತ್ತು ಅಂದರೆ ಒಂದು ಕ್ಷಣ ನಂಬುವುದಕ್ಕೂ ಅಸಾಧ್ಯ. ಇದರ ಪ್ರಕಾರ ಒಂದು ಗ್ರಾಂ ಚಿನ್ನದ ಬೆಲೆ ಕೇವಲ 10 ರೂಪಾಯಿ!

    Gold Rate 1

    ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಚಿನ್ನದ ಹಳೆಯ ರಶೀದಿ (ಬಿಲ್)ಯು ಆ ದಿನದಲ್ಲಿ ಚಿನ್ನ ಎಷ್ಟು ಅಗ್ಗವಾಗಿದೆ ಎಂಬುದನ್ನು ತೋರಿಸುತ್ತದೆ. ಬಿಲ್ ಸುಮಾರು 64 ವರ್ಷ ಹಳೆಯದು. ಪ್ರಸ್ತುತ ದಿನಗಳಲ್ಲಿ ಬ್ರಾಂಡೆಡ್ ಚಾಕೊಲೇಟ್‌ನ ಬೆಲೆಯೇ ತುಂಬಾ ದುಬಾರಿ. ವೈರಲ್ ಚಿತ್ರದ ಪ್ರಕಾರ 1959ರ ಮಾರ್ಚ್ 3ರಂದು ಬಿಲ್​ ಮಾಡಲಾಗಿದೆ. ಈ ಬಿಲ್​ ಮಹಾರಾಷ್ಟ್ರದ ವಾಮನ್ ನಿಂಬಾಜಿ ಅಷ್ಟೇಕರ್ ಎಂಬ ಚಿನ್ನದ ಅಂಗಡಿಗೆ ಸೇರಿದೆ.

    ರಶೀದಿ ಮೇಲಿನ ಗ್ರಾಹಕನ ಹೆಸರು ಶಿವಲಿಂಗ ಆತ್ಮಾರಾಮ್. ಬಿಲ್‌ನಲ್ಲಿ ಶಿವಲಿಂಗ ಅವರು ಅಂಗಡಿಯಿಂದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಖರೀದಿಸಿದ್ದಾರೆಂದು ಬಿಲ್​ ತೋರುತ್ತದೆ. ಎರಡರ ಒಟ್ಟು ಬೆಲೆ 909 ರೂಪಾಯಿ. ಪ್ರಸ್ತುತ 10 ಗ್ರಾಂ ಚಿನ್ನಕ್ಕೆ 62 ಸಾವಿರ ರೂ. ಇರುವುದನ್ನು ಹೋಲಿಕೆ ಮಾಡಿ ನೋಡಿ ನೆಟ್ಟಿಗರು ಹೌಹಾರಿದ್ದಾರೆ. (ಏಜೆನ್ಸೀಸ್​)

    1965ರಲ್ಲಿ ಎರಡು ಇಡ್ಲಿ, ಒಂದು ಮಸಾಲೆ ದೋಸೆ ಬೆಲೆ ಎಷ್ಟಿತ್ತು ಗೊತ್ತಾ? ದರ ಪಟ್ಟಿ ನೋಡಿದ್ರೆ ಹುಬ್ಬೇರೋದು ಖಚಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts