More

    ಕೋಲಿ ಸಮಾಜ ವಿರಾಟ ಸಮಾವೇಶ ಚಿತ್ತಾಪುರದಲ್ಲಿ ಮೇ 3 ರಂದು ಆಯೋಜನೆ

    ಬಿಜೆಪಿ ಪ್ರಮುಖರಾದ ಮ್ಯಾಕೇರಿ ತಳವಾರ ಬಾಣಿ ನಾಟೀಕಾರ ಅನಪುರ ಹೇಳಿಕೆ | ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ

    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ಕೋಲಿ ಸಮಾಜದ ಕಲಬುರಗಿ ವಿಭಾಗ ಮಟ್ಟದ  ವಿರಾಟ ಸಮಾವೇಶವನ್ನು ಮೇ ೩ ರಂದು ಚಿತ್ತಾಪುರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ, ಪ್ರಮುಖರಾದ ಶರಣಪ್ಪ ತಳವಾರ,ಶೋಭಾ ಬಾಣಿ, ಲಲಿತಾ ಅನಪುರ ಮತ್ತು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟೀಕಾರ ತಿಳಿಸಿದರು.
    ಸಮಾವೇಶದಲ್ಲಿ ರಾಷ್ಟಿçÃಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಸುಮಾರು ೫೦ ಸಾವಿರಕ್ಕೂ ಹೆಚ್ಚು ಸಮಾಜ ಬಾಂಧವರು ಪಾಲ್ಗೊಳ್ಳಲಿದ್ದಾರೆ. ಅದಕ್ಕಾಗಿ ಅಗತ್ಯವಿರುವ ತಯಾರಿ ಆರಂಭಿಸಲಾಗಿದೆ  ಎಂದು ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಕೋಲಿ ಸಮಾಜದವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿಕೊಂಡು ಬಂದಿದೆ. ಗುರುಮಠಕಲ್ ಮತ್ತು ಚಿತ್ತಾಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಐದು ದಶಕಗಳ ಕಾಲ ಕೋಲಿ ಸಮಾಜದವರನ್ನು ಮುಂದಿರಿಸಿಕೊAಡು ರಾಜಕೀಯ ಮಾಡಿಕೊಂಡು ಬಂದರೆ ವಿನಹಃ ಸಮಾಜವನ್ನು ಎಸ್ಟಿಗೆ ಸೇರಿಸಲು ಪ್ರಯತ್ನ ಮಾಡಲಿಲ್ಲ. ಸಂಸದ ಡಾ.ಉಮೇಶ ಜಾಧವ ಅವರು ಸಂಸತ್ತಿನಲ್ಲಿ ೯ ಸಲ ಈ ವಿಷಯ ಪ್ರಸ್ತಾಪಿಸಿ ನಮ್ಮವರ ಪರ ಧ್ವನಿ ಎತ್ತಿದರು. ಆದರೆ, ಖರ್ಗೆಯವರು ಒಂದು ಮಾತು ಆಡಲಿಲ್ಲ ಎಂದು ಕಿಡಿಕಾರಿದರು. ಅವರಿಗೆ ಕೋಲಿ ಸಮಾಜ ಅಭಿವೃದ್ಧಿ ಆಗಬಾರದು ಎಂಬ ಈ ಸಮಾವೇಶ ಮೂಲಕ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲು ನಿರ್ಧರಿಸಲಾಗುವುದು ಎಂದು ಮ್ಯಾಕೇರಿ ತಿಳಿಸಿದರು.
    ಗಂಗಾಮತಸ್ಥರು ಎಂದು ಹೋಗಿದ್ದರಿಂದ  ಎಸ್‌ಟಿ ಸೇರ್ಪಡೆಗೆ ಹಿನ್ನೆಡೆಯಾಗಿದೆ. ಕೋಲಿ ಸಮಾಜದ ಎಲ್ಲ ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಶೇ.೯೦ ರಷ್ಟು ಕೆಲಸ ಪೂರ್ಣಗೊಂಡಿದೆ. ಬಾಕಿ ಉಳಿದ ಕೆಲಸವನ್ನು ಬಿಜೆಪಿಯೇ ಮಾಡಲಿದೆ.ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲು  ಮತ್ತು ಕೋಲಿ ಸಮಾಜದವರನ್ನು ರಾಷ್ಟçಪತಿಯನ್ನು ಮಾಡಿದ ಅವರಿಗೆ ಗೌರವ ಸಲ್ಲಿಸಲು ಈ ಸಲ ಕೋಲಿ ಸಮಾಜದವರು ಬಿಜೆಪಿ ಬೆಂಬಲಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದರು.
    ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸಿದ್ದು ಬಾನರ್, ರವಿರಾಜ ಕೊರವಿ, ಬಸವರಾಜ ಸಪ್ಪನಗೋಳ, ಶಾಂತಪ್ಪ ಕೂಡಿ ಮೊದಲಾದವರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts