ಕಾರ್ಯಕ್ರಮ ಆಯೋಜಕರ ಮಹಾ ಎಡವಟ್ಟು: ವೇದಿಕೆ ಮೇಲೆಯೇ ಕಣ್ಣೀರಿಟ್ಟ ನವ್ಯಾ ನಾಯರ್​!

Navya Nair

ಕೊಚ್ಚಿ: ನಟಿ ನವ್ಯಾ ನಾಯರ್​ ಬಗ್ಗೆ ಕನ್ನಡಿಗರಿಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ನಟ ದರ್ಶನ್​ ಅಭಿನಯದ ಸೂಪರ್​ ಹಿಟ್​ ಗಜ ಸಿನಿಮಾದ ಮೂಲಕ ಕನ್ನಡಿಗರಿಗೆ ಪರಿಚಿತರಾಗಿದ್ದಾರೆ. ಅಲ್ಲದೆ, ನಮ್ಮೆಜಮಾನ್ರು, ಭಾಗ್ಯದ ಬಳೆಗಾರ, ಬಾಸ್​ ಹಾಗೂ ದೃಶ್ಯ 1 ಮತ್ತು 2 ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೆ ತುಂಬಾ ಹತ್ತಿರವಾಗಿದ್ದಾರೆ.

ತಾಜಾ ಸಂಗತಿ ಏನೆಂದರೆ, ನವ್ಯಾ ನಾಯರ್​ ಅವರು ವೇದಿಕೆ ಮೇಲೆಯೇ ಕಣ್ಣೀರಾಕಿದ್ದಾರೆ. ಅದಕ್ಕೆ ಕಾರಣ ಅವರ ಕುಟುಂಬದ ಬಗ್ಗೆ ಕಾರ್ಯಕ್ರಮದ ಆಯೋಜಕರು ನೀಡಿರುವ ತಪ್ಪು ಮಾಹಿತಿ. ತಪ್ಪು ಮಾಹಿತಿಯನ್ನು ಸರಿಪಡಿಸುವಂತೆ ಕಾರ್ಯಕ್ರಮದ ಆಯೋಜಕರನ್ನು ನವ್ಯಾ ನಾಯರ್​ ಪ್ರಶ್ನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನಾನು ನಿಮಗೊಂದನ್ನು ಹೇಳಲು ಬಯಸುತ್ತೇನೆ. ನಾನು ಇಲ್ಲಿರುವ ಬುಕ್​ಲೆಟ್ ಅನ್ನು​ ನೋಡಿದೆ. ಅದರಲ್ಲಿ ನನಗೆ ಇಬ್ಬರು ಮಕ್ಕಳಿದ್ದಾರೆ ಎಂದು ಬರೆಯಲಾಗಿದೆ. ಇದನ್ನು ನೋಡಿ ನನ್ನ ತಾಯಿ ಯೋಚಿಸುವುದಿಲ್ಲವೇ? ಮತ್ತು ನನ್ನ ಕುಟುಂಬವು ಸಹ ಈ ಬಗ್ಗೆ ಚಿಂತಿಸುವುದಿಲ್ಲವೇ? ಈ ಬಗ್ಗೆ ನಿಮಗೆ ಅರಿವಿಲ್ಲವೇ? ನನಗೆ ಯಮಿಕಾ ಹೆಸರಿನ ಮಗಳಿದ್ದಾಳೆ ಎಂದು ಬುಕ್​ಲೆಟ್​ನಲ್ಲಿ ಬರೆಯಲಾಗಿದೆ. ಆದರೆ, ನನಗಿರುವುದು ಒಬ್ಬನೇ ಮಗ. ಈ ವಿಚಾರ ಅನೇಕರಿಗೆ ತಿಳಿದಿದೆ. ನೀವು ಈ ರೀತಿ ತಪ್ಪು ಮಾಹಿತಿ ಕೊಟ್ಟರೆ ಜನರು ನನ್ನ ಬಗ್ಗೆ ತಪ್ಪು ತಿಳಿದುಕೊಳ್ಳುವುದಿಲ್ಲವೇ ಎಂದು ನವ್ಯಾ ನಾಯರ್​ ಆಕ್ರೋಶ ಹೊರಹಾಕಿದ್ದಾರೆ.

ಈ ರೀತಿಯ ವಿಷಯಗಳನ್ನು ಬರೆಯುವಾಗ ದಯವಿಟ್ಟು ಊಹಿಸಬೇಡಿ. ಎಲ್ಲ ಮಾಹಿತಿಗಳು ವಿಕಿಪೀಡಿಯಾದಲ್ಲಿ ಸುಲಭವಾಗಿ ಲಭ್ಯವಿವೆ. ಅತಿಥಿಗಳನ್ನು ಆಹ್ವಾನಿಸುವಾಗ, ಅವರ ಬಗ್ಗೆ ನಿಖರವಾದ ಮಾಹಿತಿಯನ್ನು ಬರೆಯಿರಿ ಎಂದು ಕಾರ್ಯಕ್ರಮದ ಆಯೋಜಕರನ್ನು ನವ್ಯಾ ನಾಯರ್​ ತರಾಟೆಗೆ ತೆಗೆದುಕೊಂಡರು.

ಇನ್ನೂ ಬುಕ್​ಲೆಟ್​ನಲ್ಲಿ ನಾನು ನಟಿಸದ ಕೆಲವು ಚಿತ್ರಗಳನ್ನು ಉಲ್ಲೇಖಸಲಾಗಿದೆ. ಇದನ್ನು ಬೇಕಾದರೆ ಪಾಸಿಟಿವ್​ ಆಗಿ ತೆಗೆದುಕೊಳ್ಳಬಹುದು. ಆದರೆ, ಮಗುವಿನ ವಿಷಯದಲ್ಲಿ ತಪ್ಪು ಮಾಹಿತಿಯನ್ನು ಸಹಿಸಲಾಗದು. ಆದರೂ ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ ಎಂದು ನವ್ಯಾ ನಾಯರ್ ಹೇಳಿದ್ದಾರೆ. (ಏಜೆನ್ಸೀಸ್​)

ಪ್ರಜ್ವಲ್​​ ರೇವಣ್ಣ ಕೇಸ್​: ಬಿಜೆಪಿ ಹೊಣೆ ಹೊರಬೇಕೆಂದು ಒತ್ತಾಯಿಸುವುದು ಹಾಸ್ಯಾಸ್ಪದ ಎಂದ ನಟ ಚೇತನ್

ಟೀಂ ಇಂಡಿಯಾದಲ್ಲಿ ಧೋನಿ ಸ್ಥಾನವನ್ನು ಈತ ತುಂಬಲಿದ್ದಾನೆ: ಯುವ ಸ್ಟಾರ್​​ ಆಟಗಾರನ ಮೇಲೆ ಸಿದ್ದು ಭರವಸೆ

Share This Article

A. P. J. Abdul Kalam ಅವರ ಈ ಟ್ರಿಕ್ಸ್​​ಗಳನ್ನು ವಿದ್ಯಾರ್ಥಿಗಳು ಓದುವಾಗ ಮಿಸ್​ ಮಾಡ್ದೆ ಅನುಸರಿಸಿ

ಮಿಸೈಲ್ ಮ್ಯಾನ್ ಎಂದೇ ಖ್ಯಾತರಾಗಿರುವ ಭಾರತದ ಮಹಾನ್ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್…

ಹೊಳೆಯುವ ಮುತ್ತಿನಂತಹ ಹಲ್ಲುಗಳಿಗೆ ಈ ಟಿಪ್ಸ್ ಫಾಲೋ ಮಾಡಿ..! Home Remedies

ಬೆಂಗಳೂರು: ಪ್ರತಿಯೊಬ್ಬರೂ ತಮ್ಮ ಹಲ್ಲುಗಳು ಮುತ್ತಿನಂತೆ ಬಿಳಿ ಮತ್ತು ಹೊಳೆಯುವಂತೆ ಕಾಣಬೇಕೆಂದು ಬಯಸುತ್ತಾರೆ. ಏಕೆಂದರೆ.. ನಮ್ಮ…

ಮೊದಲು ತಲೆಗೆ ನೀರು ಹಾಕ್ತೀರಾ? ಸ್ನಾನ ಮಾಡುವ ಸರಿಯಾದ ವಿಧಾನ ಯಾವುದು? ಇಲ್ಲಿದೆ ಉಪಯುಕ್ತ ಮಾಹಿತಿ | Bathing

Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…