More

    1965ರಲ್ಲಿ ಎರಡು ಇಡ್ಲಿ, ಒಂದು ಮಸಾಲೆ ದೋಸೆ ಬೆಲೆ ಎಷ್ಟಿತ್ತು ಗೊತ್ತಾ? ದರ ಪಟ್ಟಿ ನೋಡಿದ್ರೆ ಹುಬ್ಬೇರೋದು ಖಚಿತ!

    ನವದೆಹಲಿ: ಪಾಕೆಟ್​ ಸ್ನೇಹಿ ಹಾಗೂ ತುಂಬಾ ಅಗ್ಗವಾಗಿ ಬಾಯಲ್ಲಿ ನೀರೂರಿಸುವಂತಹ ರುಚಿಕರ ಆಹಾರವನ್ನು ಸವಿಯುತ್ತಿದ್ದ ಕಾಲ ಎಂದೋ ಮುಗಿಯಿತು. ಇಂದು ಎಲ್ಲವು ದುಬಾರಿಯಾಗಿದೆ. ಏನಾದರೂ ತಿನ್ನಬೇಕು ಅನಿಸಿದರೂ ಮೊದಲು ಪಾಕೆಟ್​ ಚೆಕ್​ ಮಾಡಿಕೊಳ್ಳಬೇಕು. ಏಕೆಂದರೆ ಎಲ್ಲ ಬೆಲೆಗಳು ಜೇಬು ಸುಡುವಂತಿದೆ. ಅದರಲ್ಲೂ ಜಿಎಸ್​ಟಿ ಮತ್ತು ಸಿಜಿಎಸ್​ಟಿ ತೆರಿಗೆಯಿಂದಾಗಿ ತಿಂಡಿ, ತಿನಿಸು ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಗಗನಮುಖಿಯಾಗಿವೆ. ಅಂದಿನಿಂದ ಇಂದಿನವರೆಗೂ ಆಗಿರುವ ಬದಲಾವಣೆಯ ಬಗ್ಗೆ ಈ ಹಿಂದಿನ ಜನರಿಗೆ ತುಂಬಾ ಅರಿವಿದೆ.

    ಕೀಪ್ಯಾಡ್​ ಮೊಬೈಲ್​ ಫೋನ್​ಗಳಿಂದ ಸ್ಮಾರ್ಟ್​ ಫೋನ್​ವರೆಗೆ ಮತ್ತು ಸಿಆರ್​ಟಿ ಟಿವಿಯಿಂದಿಡಿದು ಸ್ಮಾರ್ಟ್​ ಟಿವಿಯವರೆಗೂ ಆದ ಎಲ್ಲ ಬದಲಾವಣೆಗಳನ್ನು ಹಿಂದಿನ ಕಾಲದ ಮಕ್ಕಳಿಗೆ ತುಂಬಾ ಚೆನ್ನಾಗಿ ಗೊತ್ತಿದೆ. ಇದೀಗ 1965ನೇ ಇಸವಿಯ ಹೋಟೆಲ್​ ಒಂದರ ತಿಂಡಿ-ತಿನಿಸುಗಳ ದರ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆಂಧ್ರ ಪ್ರದೇಶದ ರೆಪಲ್ಲೆ ಪಟ್ಟಣದ ಹೋಟೆಲ್​ ಒಂದರ ದರ ಪಟ್ಟಿ ಇದಾಗಿದೆ. ದರಪಟ್ಟಿಯಲ್ಲಿ 1965, ನವೆಂಬರ್​ 1 ಎಂದು ನಮೂದಿಸಲಾಗಿದೆ. ದರಪಟ್ಟಿಯಲ್ಲಿ ಇಡ್ಲಿ, ವಡೆ ಬೆಲೆ ನೋಡಿ ನೆಟ್ಟಿಗರು ಬೆರಗಾಗಿದ್ದಾರೆ.

    ಅಚ್ಚರಿಯೇನೆಂದರೆ ವೈರಲ್​ ಆಗಿರುವ ದರ ಪಟ್ಟಿಯು ಆಗಿನ ಕಾಲದಲ್ಲಿ ಬೆಲೆ ಏರಿಕೆ ನಂತರ ಪ್ರಕಟಿಸಿದ ದರ ಪಟ್ಟಿಯಾಗಿದೆ. ಹೋಟೆಲ್​ಗೆ ಬರುವವರಿಗೆ ದರ ಏರಿಕೆಯ ಬಗ್ಗೆ ಅರಿವು ಮೂಲಕ ಅಳವಡಿಸಲಾಗಿತ್ತು. ಆ ಕಾಲದಲ್ಲಿ ಎರಡು ಇಡ್ಲಿಯ ಬೆಲೆ ಕೇವಲ 15 ಪೈಸೆಯಾಗಿತ್ತು. ಉಪ್ಪಿಟ್ಟು ಕೂಡ 15 ರೂಪಾಯಿ. ಮಸಾಲೆದೋಸೆ ಬೆಲೆಯಂತೂ ಕೇವಲ 20 ಪೈಸೆಯಾಗಿತ್ತು.

    ಕಾಫಿ ಮತ್ತು ಟೀ ಬೆಲೆ 15 ರೂಪಾಯಿ. ಅರ್ಧ ಕಪ್​ ಟೀ, ಕಾಫಿ ಬೆಲೆ 12 ಪೈಸೆಯಾಗಿತ್ತು. ಇದೀಗ ನೆಟ್ಟಿಗರು ಈ ಬೆಲೆ ಪಟ್ಟಿಯನ್ನು ನೋಡಿ ಹುಬ್ಬೇರಿಸಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಈಗ ಹೇಗೆ ಹೆಚ್ಚುತ್ತಿದೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಮೇಲಾಗಿ ಈಗಿರುವ ಹೊಟೇಲ್, ರೆಸ್ಟೊರೆಂಟ್​ಗಳಲ್ಲಿ ಆಹಾರ ಹೇಳಿಕೊಳ್ಳುವಷ್ಟು ಆರೋಗ್ಯಯುತವಾಗಿಯೂ ಇಲ್ಲ. ಅವು ಕೂಡ ದಿನದಿಂದ ದಿನಕ್ಕೆ ಕಲುಷಿತಗೊಳ್ಳುತ್ತಿವೆ. ಹೀಗಾಗಿಯೇ ಹೋಟೆಲ್​ನಲ್ಲಿ ಊಟ ಮಾಡಬೇಡಿ ಎಂದು ಹಿರಿಯರು ಹೇಳುವುದನ್ನು ನೀವು ಕೇಳಿರುತ್ತೀರಿ.

    AP Hotel

    ಆದರೂ ಜನರಿಂದು ಹೊರಗಡೆ ತಿನ್ನುವ ಚಟಕ್ಕೆ ಬಿದ್ದಿದ್ದಾರೆ. ಕೆಲವರಿಗೆ ಇದೇ ದಿನಚರಿಯಾಗಿಬಿಟ್ಟಿದೆ. ಇದರೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ 1965ರ ಟಿಫಿನ್ ದರ ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಅಲ್ಲದೆ, ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್​ಗಳ ರೂಪದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಬಹುದು. (ಏಜೆನ್ಸೀಸ್​)‘

    ಏಳು ತಿಂಗಳ ಗರ್ಭಿಣಿ ಮಾಡೋ ಕೆಲಸನಾ ಇದು? ನಟಿ ಅಮಲಾ ಪೌಲ್​ಗೆ ನೆಟ್ಟಿಗರ ತರಾಟೆ

    ಮಹೇಶ್​ ಬಾಬು ಮುಂದೆಯೇ ವಿಜಯ್​ಗೆ ಅವಮಾನ ಮಾಡಿದ ಸಮಂತಾ? ಅಭಿಮಾನಿಗಳ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts