More

  ಏಳು ತಿಂಗಳ ಗರ್ಭಿಣಿ ಮಾಡೋ ಕೆಲಸನಾ ಇದು? ನಟಿ ಅಮಲಾ ಪೌಲ್​ಗೆ ನೆಟ್ಟಿಗರ ತರಾಟೆ

  ಚೆನ್ನೈ: ಬಹುಭಾಷಾ ನಟಿ ಅಮಲಾ ಪೌಲ್​ ಬಗ್ಗೆ ಕನ್ನಡಿಗರಿಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ನಟ ಕಿಚ್ಚ ಸುದೀಪ್​ ಅಭಿನಯದ ಸೂಪರ್​ ಹಿಟ್​ ಹೆಬ್ಬುಲಿ ಸಿನಿಮಾ ನೋಡಿದವರಿಗೆ ಅಮಲಾ ಪೌಲ್​ ಪರಿಚಯ ಇದ್ದೇ ಇರುತ್ತದೆ. ಕೇರಳ ಮೂಲದ ಅಮಲಾ, ನೀಲತಾಮರನ್​ ಹೆಸರಿನ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗ ಪದಾರ್ಪಣೆ ಮಾಡಿದರು. ಆದರೆ, ಕಾಲಿವುಡ್​ನ “ಮೈನಾ” ಚಿತ್ರ​ದ ಬಳಿಕ ಅಮಲಾ ಅದೃಷ್ಟವೇ ಬದಲಾಯಿತು. ವಿಜಯ್​, ವಿಕ್ರಮ್​, ಸೂರ್ಯ, ಆರ್ಯ, ಜಯಂ ರವಿ, ಧನುಷ್​ ಸೇರಿದಂತೆ ಕಾಲಿವುಡ್​ ಸೂಪರ್​ಸ್ಟಾರ್​ಗಳ ಜೊತೆ ನಟಿಸಿದ್ದಾರೆ.

  ಸದ್ಯ ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿರುವ ಅಮಲಾ, ಗೆಳೆಯ ಜಗತ್ ದೇಸಾಯಿ ಜೊತೆ ಸಾಂಸಾರಿಕ ಜೀವನ ಸಾಗಿಸುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಅಮಲಾ ಅವರ ತಮ್ಮ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಒಂದನ್ನು ನೀಡಿದ್ದರು. ಬೇಬಿ ಬಂಪ್​ ಫೋಟೋ ಶೇರ್​ ಮಾಡುವುದರ ಜತೆಗೆ 1+1 ನಿನ್ನೊಂದಿಗೆ 3 ಆಗಿದೆ ಎಂಬುದು ನನಗೀಗ ತಿಳಿದಿದೆ ಅಂತಾ ಬರೆದುಕೊಂಡು ಗರ್ಭಿಣಿಯಾಗಿರುವ ಸಂಗತಿಯನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಮಲಾ ಗರ್ಭಿಣಿಯಾಗಿರುವ ಸುದ್ದಿ ತಿಳಿಯುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದರು.

  ತಾಜಾ ಸಂಗತಿ ಏನೆಂದರೆ, 7 ತಿಂಗಳ ಗರ್ಭಿಯಾಗಿರುವ ಅಮಲಾ ಪಾರ್ಟಿಯಲ್ಲಿ ಪತಿಯ ಜತೆ ಡಾನ್ಸ್​ ಮಾಡಿರುವ ವಿಡಿಯೋ ವೈರಲ್​ ಆಗಿದ್ದು, ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಮಗು ಹೆರುವುದು ಅಂದರೆ ಸುಮ್ಮನೇ ಅಲ್ಲ. ಪ್ರತಿ ಮನೆಯಲ್ಲಿ ಗರ್ಭಿಣಿಯರನ್ನು ತುಂಬಾ ಜೋಪಾನವಾಗಿ ನೋಡಿಕೊಳ್ಳಲಾಗುತ್ತದೆ. ಭಾರವನ್ನು ಹೊರುವುದಾಗಲಿ ಅಥವಾ ಕಠಿಣ ಕೆಲಸಗಳನ್ನಾಗಲಿ ಮಾಡಿಸುವುದಿಲ್ಲ. ಅದರಲ್ಲೂ ಹೆರಿಗೆಗೆ ಹತ್ತಿರ ಇರುವ ಸಮಯದಲ್ಲಂತೂ ತಂಬಾ ಸೂಕ್ಷ್ಮವಾಗಿ ನೋಡಿಕೊಳ್ಳಾಗುತ್ತದೆ.

  ಆದರೆ, ಅಮಲಾ ಅವರು ಕ್ಲಬ್​ ಒಂದರಲ್ಲಿ ಗಂಡನೊಂದಿಗೆ ಹಿಗ್ಗಾಮುಗ್ಗಾ ಡಾನ್ಸ್​ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಕೆಲ ನೆಟ್ಟಿಗರು ಇದನ್ನು ಖಂಡಿಸಿದ್ದಾರೆ. ನಿಮ್ಮ ಹೊಟ್ಟೆಯಲ್ಲಿ ಮಗು ಇಟ್ಟುಕೊಂಡು ನೀವು ಈ ರೀತಿ ಮಾಡಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಅಮಲಾಗೆ ಬೆಂಬಲ ವ್ಯಕ್ತಪಡಿಸಿದ್ದು, ನಿಮಗೆ ಒಳ್ಳೆಯದಾಗಲಿ, ನಿಮ್ಮ ಜೀವನ ಹೀಗೆ ಪ್ರತಿಕ್ಷಣ ಸಂತಸದಿಂದ ಕೂಡಿರಲಿ ಎಂದು ಹಾರೈಸಿದ್ದಾರೆ.

  View this post on Instagram

  A post shared by Amala Paul (@amalapaul)

  ಇನ್ನೂ ಸಿನಿಮಾ ವಿಚಾರಕ್ಕೆ ಬಂದರೆ, ಮಲಯಾಳಂ ನಟ ಪೃಥ್ವಿರಾಜ್​ ಸುಕುಮಾರ್ ಅವರ ಆಡಿಜೀವಿಥಂ ಸಿನಿಮಾದಲ್ಲಿ ಅಮಲಾ ನಾಯಕಿಯಾಗಿದ್ದು, ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾ ಟ್ರೈಲರ್​ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಪಡೆದುಕೊಂಡಿದೆ. (ಏಜೆನ್ಸೀಸ್​)

  ಅದು ಬೇಕು ಅನಿಸಿದಾಗ ಮದುವೆ ಆಗುತ್ತೇನೆ! ಖ್ಯಾತ ನಟಿ ಕೌಶಲ್ಯ ಓಪನ್​ ಟಾಕ್​

  VIDEO | ಲೈವ್​ಗೆ ಬಂದು ಕಣ್ಣೀರಾಕಿದ ಅನು ಅಕ್ಕ; ಅಸಭ್ಯ ಕಮೆಂಟ್​ ಮಾಡೋರಿಗೆ ವಿನಯ್ ಖಡಕ್​​ ವಾರ್ನಿಂಗ್​​!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts