More

    ಅದು ಬೇಕು ಅನಿಸಿದಾಗ ಮದುವೆ ಆಗುತ್ತೇನೆ! ಖ್ಯಾತ ನಟಿ ಕೌಶಲ್ಯ ಓಪನ್​ ಟಾಕ್​

    ಚೆನ್ನೈ: ಮಾಜಿ ಸಚಿವ ಹಾಗೂ ನಟ ಸಿ.ಪಿ. ಯೋಗೇಶ್ವರ್ ನಟನೆಯ ಬದ್ರಿ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಿತರಾಗಿರುವ ನಟಿ ಕೌಶಲ್ಯ 90ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ಕನ್ನಡದಲ್ಲಿ ನಟಿಸಿದ್ದು ಬೆರಳೆಣಿಕೆ ಸಿನಿಮಾಗಳಷ್ಟೇ. ಯಾವ ಸಿನಿಮಾವೂ ಅಷ್ಟೊಂದು ಕೈಹಿಡಿಯಲಿಲ್ಲ. ಆದರೆ, ತಮಿಳಿನಲ್ಲಿ ವಿಜಯ್​ ಸೇರಿದಂತೆ ಸ್ಟಾರ್ ನಟರ ಜತೆ ನಟಿಸಿದ್ದಾರೆ.

    ಕೌಶಲ್ಯ ಅವರು ತಮಿಳು, ಕನ್ನಡ ಮಾತ್ರವಲ್ಲದೆ, ತೆಲುಗು ಮತ್ತು ಮಲಯಾಳಂನಲ್ಲಿಯೂ ನಟಿಸಿದ್ದಾರೆ. ತಮ್ಮ ನಟನೆಯಿಂದಲೇ ಎಲ್ಲರ ಗಮನ ಸೆಳೆದಿರುವ ಕೌಶಲ್ಯಗೆ ಅವರದೇಯಾದ ಅಭಿಮಾನಿಗಳ ಬಳಗವೂ ಸಹ ಇದೆ. ವರ್ಷಗಳು ಕಳೆದಂತೆ ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾದ ಬಳಿಕ ಬೆಳ್ಳಿ ಪರದೆಯ ಹಿಂದೆ ಸರಿದ ಕೌಶಲ್ಯ, ಇದೀಗ ಧಾರಾವಾಹಿಗಳಲ್ಲಿ ಬಿಜಿಯಾಗಿದ್ದಾರೆ.

    ಅವಕಾಶಗಳು ಕಡಿಮೆಯಾದ ಬಳಿಕ ದೇಹದಲ್ಲಿ ಬೊಜ್ಜು ಬೆಳೆಸಿಕೊಂಡು ದಪ್ಪಗಾಗಿದ್ದ ಕೌಶಲ್ಯ ದಿಢೀರ್​ ತೂಕ ಇಳಿಸಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು ಮತ್ತು ಸುದ್ದಿಯೂ ಆಗಿದ್ದರು. ಸದ್ಯ ಕೌಶಲ್ಯ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಒಟ್ಟಾರೆ 50ಕ್ಕೂ ಅಧಿಕ ಸಿನಿಮಾಗಳಲ್ಲಿ ಕೌಶಲ್ಯ ನಟನೆ ಮಾಡಿದ್ದಾರೆ. ಬದ್ರಿ ಸಿನಿಮಾದ “ಕೋಗಿಲೆ ಕುಹು ಹಾಡಿದೇ ಈ ದಿನ” ಹಾಡು ಇಂದಿಗೂ ಜನಮಾನಸದಲ್ಲಿ ಉಳಿದಿದೆ.

    ಅಂದಹಾಗೆ ಕೌಶಲ್ಯ ಅವರಿಗೆ 44 ವರ್ಷ ವಯಸ್ಸಾಗಿದ್ದರೂ ಇನ್ನೂ ಮದುವೆಯಾಗಿಲ್ಲ. ಹೀಗಾಗಿ ಅವರು ಎಲ್ಲೆ ಹೋದರು ಅಭಿಮಾನಿಗಳು ಕೇಳುವ ಒಂದೇ ಒಂದು ಪ್ರಶ್ನೆ ನೀವಿನ್ನು ಯಾಕೆ ಮದುವೆ ಆಗಿಲ್ಲ ಎಂಬುದು. ಇದೇ ಪ್ರಶ್ನೆಯನ್ನು ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಕೌಶಲ್ಯ ಅವರಿಗೆ ಕೇಳಲಾಯಿತು. ಈ ವೇಳೆ ಉತ್ತರಿಸಿದ ಅವರು ಸದ್ಯಕ್ಕೆ ಮದುವೆ ಅವಶ್ಯಕತೆ ಇಲ್ಲ ಅನಿಸಿದೆ. ನನ್ನ ಜೀವನ ಹೀಗೆ ಸಾಗಲಿ ಎಂದು ಹೇಳಿದ್ದಾರೆ.

    ಜೀವನದಲ್ಲಿ ಒಂದು ಗಂಡಿನ ರಕ್ಷಣೆ ಬೇಕು ಎಂದು ಯಾವಾಗ ಯೋಚಿಸುತ್ತೀರಾ? ಎಂಬ ಪ್ರಶ್ನೆಗೆ ಉತ್ತರ ನೀಡಿದ ಕೌಶಲ್ಯ, ಮದುವೆ ಬಗ್ಗೆ ಯೋಚನೆ ಮಾಡುವುದನ್ನು ನಾನು ಸಂಪೂರ್ಣ ನಿಲ್ಲಿಸಿಲ್ಲ. ಅವಶ್ಯಕತೆ ಅನಿಸಿದಾಗ ಮದುವೆ ಆಗುತ್ತೇನೆ. ಸದ್ಯಕ್ಕೆ ನನ್ನ ಜೀವನ ಇದೇ ರೀತಿ ಸಾಗಲಿ ಎಂದರು.

    ಕೌಶಲ್ಯ ಮಾತುಗಳನ್ನು ಕೇಳಿದ ಅಭಿಮಾನಿಗಳು ಎಷ್ಟು ಸಾಧ್ಯವೋ ಅಷ್ಟು ಬೇಗ ಮದುವೆ ಮಾಡಿಕೊಳ್ಳಿ ಎಂದು ಸಲಹೆ ನೀಡುತ್ತಿದ್ದಾರೆ. ನಿಮ್ಮ ರಕ್ಷಣೆಗಾಗಿ ಮದುವೆ ಆಗಿ ಎನ್ನುತ್ತಿದ್ದಾರೆ. ಮದುವೆ ಬಗ್ಗೆ ಕೌಶಲ್ಯ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಅವರು ಖಂಡಿತ ಮದುವೆಯನ್ನು ಘೋಷಿಸುತ್ತಾರೆ ಎಂದು ಅನೇಕ ಅಭಿಮಾನಿಗಳು ನಂಬಿದ್ದಾರೆ. (ಏಜೆನ್ಸೀಸ್​)

    50 ಸೆಕೆಂಡ್​ ಜಾಹೀರಾತಿಗೆ 5 ಕೋಟಿ ರೂಪಾಯಿ! ಬಾಲಿವುಡ್​ ನಟಿಯರನ್ನೂ ಮೀರಿಸಿದ ಮಲಯಾಳಂ ಬ್ಯೂಟಿ

    ಲವ್​​​ ಮ್ಯಾರೇಜ್​ ಆದ ಮೂರೇ ತಿಂಗಳಿಗೆ ಘೋರ ದುರಂತ: ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts