50 ಸೆಕೆಂಡ್​ ಜಾಹೀರಾತಿಗೆ 5 ಕೋಟಿ ರೂಪಾಯಿ! ಬಾಲಿವುಡ್​ ನಟಿಯರನ್ನೂ ಮೀರಿಸಿದ ಮಲಯಾಳಂ ಬ್ಯೂಟಿ

Nayanathara
Published on

ಚೆನ್ನೈ: ಕೋಟಿ ಸಂಭಾವನೆ ಪಡೆಯುವ ಅನೇಕ ನಾಯಕಿಯರಿದ್ದಾರೆ. ಅವರಲ್ಲಿ ಲೇಡಿ ಸೂಪರ್​ಸ್ಟಾರ್​ ನಯನತಾರ ಕೂಡ ಒಬ್ಬರು. ಚಿತ್ರರಂದಲ್ಲಿ ಶ್ರೀಮಂತ ನಟಿಯರಲ್ಲಿ ನಯನಾತಾರ ಹೆಸರು ಮುಂಚೂಣಿಯಲ್ಲಿದೆ.

ದಕ್ಷಿಣ ಭಾರತದ ಖ್ಯಾತ ನಟಿಯಾಗಿರುವ ನಯನತಾರಾ ಕಳೆದ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರವು ಭಾರೀ ಹಿಟ್ ಆಗಿದ್ದು, ಬಾಕ್ಸ್ ಆಫೀಸ್ ಅಂದಾಜಿನ ಪ್ರಕಾರ, ಚಿತ್ರವು 1000 ಕೋಟಿ ಕಲೆಕ್ಷನ್ ಮಾಡಿತು.

ಸಿನಿಮಾ ಇಂಡಸ್ಟ್ರಿಗೆ ಬರುವ ಮುನ್ನ ಮಾಡೆಲ್​ ಹಾಗೂ ಕಿರುತೆರೆ ಕಲಾವಿದೆ ಆಗಿದ್ದ ನಯನತಾರಾ, ಇಂದು ಲೇಡಿ ಸೂಪರ್​ಸ್ಟಾರ್​ ಆಗಿ ಬೆಳೆದಿದ್ದಾರೆ. 30 ವರ್ಷ ದಾಟುತ್ತಿದ್ದಂತೆ ಅವಕಾಶಗಳು ಕಡಿಮೆಯಾಗಿ, ನಿಧಾನಕ್ಕೆ ಪರದೆಯ ಹಿಂದೆ ಸರಿಯುವ ನಟಿಯರ ನಡುವೆ 39 ವರ್ಷವಾದರೂ ನಯನತಾರಾ ಅವರು ಸ್ಟಾರ್ ನಟಿಯ​ ಪಟ್ಟ ಉಳಿಸಿಕೊಂಡಿದ್ದಾರೆ. ಇಂದಿಗೂ ಸಾಲು ಸಾಲು ಸಿನಿಮಾಗಳಲ್ಲಿ ನಯನತಾರಾ ಬಿಜಿಯಾಗಿದ್ದಾರೆ.

ತಾಜಾ ಸಂಗತಿ ಏನೆಂದರೆ, 50 ಸೆಕೆಂಡ್​ ಟಾಟಾ ಸ್ಕೈ ಜಾಹೀರಾತು ನೀಡಲು ಬರೋಬ್ಬರಿ 5 ಕೋಟಿ ರೂಪಾಯಿ ಚಾರ್ಜ್​ ಮಾಡಿದ್ದಾರೆಂದು ತಿಳಿದುಬಂದಿದೆ. ಕೇವಲ ಎರಡೇ ದಿನದಲ್ಲಿ ಶೂಟಿಂಗ್​ ಮುಕ್ತಾಯವಾಗಿದ್ದು, ಈ ಜಾಹೀರಾತು ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಿದೆ.

ದಕ್ಷಿಣ ಭಾರತದಾದ್ಯಂತ ಸಿನಿ ಅಭಿಮಾನಿಗಳನ್ನು ಹೊಂದಿರುವ ನಯನತಾರಾ ಒಂದು ಚಿತ್ರಕ್ಕೆ ಸುಮಾರು 10 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ತಮಿಳು ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ವಿವಾಹವಾಗಿದ್ದಾರೆ. ಈ ತಾರಾ ದಂಪತಿ ನಾಲ್ಕು ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ಉಯಿರ್ ಮತ್ತು ಉಳಗ್ ಹೆಸರಿನ ಇಬ್ಬರು ಪುತ್ರರಿದ್ದಾರೆ. ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿರುವ ನಯನತಾರಾ ಖಾಸಗಿ ಜೆಟ್ ಕೂಡ ಹೊಂದಿದ್ದಾರೆ.

ನಟಿ ನಯನತಾರಾ ಕಳೆದ ವರ್ಷ ಶಾರುಖ್ ಖಾನ್ ಅಭಿನಯದ 'ಜವಾನ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಜವಾನ್​ ಚಿತ್ರದಲ್ಲಿನ ತಮ್ಮ ಅಭಿನಯಕ್ಕಾಗಿ ವ್ಯಾಪಕ ಮೆಚ್ಚುಗೆಯನ್ನು ಪಡೆದರು. ನಯನತಾರಾ ಕೊನೆಯ ಬಾರಿಗೆ ತಮಿಳು ಚಿತ್ರ 'ಅನ್ನಪೂರಿ: ದಿ ಗಾಡೆಸ್ ಆಫ್ ಫುಡ್' ನಲ್ಲಿ ಕಾಣಿಸಿಕೊಂಡರು. ಸದ್ಯ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net