More

    ಲವ್​​​ ಮ್ಯಾರೇಜ್​ ಆದ ಮೂರೇ ತಿಂಗಳಿಗೆ ಘೋರ ದುರಂತ: ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆ

    ಇತ್ತೀಚೆಗೆ ರಸ್ತೆ ಅಪಘಾತಗಳು ವಿಪರೀತವಾಗಿ ಹೆಚ್ಚುತ್ತಿವೆ. ಅಪಘಾತಗಳಿಂದಲೇ ಮೃತಪಡುತ್ತಿರುವವ ಸಂಖ್ಯೆ ಅಧಿಕವಾಗುತ್ತಲೇ ಇದೆ. ಒಬ್ಬ ಮನುಷ್ಯ ರಸ್ತೆಯ ಮೇಲೆ ಬಂತೆಂದರೆ ಆತ ಮನೆಗೆ ಹಿಂತಿರುಗುವವರೆಗೂ ಕುಟುಂಬಸ್ಥರ ಎದೆಯಲ್ಲಿ ಭಯ ಇದ್ದೇ ಇರುತ್ತದೆ. ಚಾಲಕರ ತಪ್ಪುಗಳಿಂದಾಗಿ ಅನೇಕ ಜೀವಗಳು ಬಲಿಯಾಗುತ್ತಿವೆ. ಅನೇಕ ಕುಟುಂಬಗಳು ಅನಾಥವಾಗಿ ಉಳಿದಿವೆ. ಅತಿ ವೇಗ, ನಿರ್ಲಕ್ಷ್ಯ, ಅರಿವಿನ ಕೊರತೆ, ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿವೆ.

    ರಸ್ತೆ ಅಪಘಾತಗಳನ್ನು ತಡೆಯಲು ಎಷ್ಟೇ ಕಠಿಣ ನಿಯಮಗಳನ್ನು ಜಾರಿಗೆ ತಂದರೂ ಅಪಘಾತಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇದೀಗ ಮತ್ತೊಂದು ದುರ್ಘಟನೆ ಸಂಭವಿಸಿದೆ. ಮದುವೆಯಾದ ಮೂರೇ ತಿಂಗಳಿಗೆ ವಿವಾಹಿತ ಮಹಿಳೆಯೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆದರೆ, ಸಾವಿನಲ್ಲೂ ಮಹಿಳೆ ಸಾರ್ಥಕತೆ ಮೆರೆದಿದ್ದಾರೆ. ಮಹಿಳೆಯ ತ್ಯಾಗವು ಮೂರು ಜೀವಗಳನ್ನು ಉಳಿಸಿದೆ.

    ಇತ್ತೀಚೆಗೆ ತೆಲಂಗಾಣದ ನಲ್ಗೊಂಡದಲ್ಲಿ ದಾರುಣ ಘಟನೆ ನಡೆದಿದೆ. ಭೀಕರ ಅಪಘಾತದಲ್ಲಿ ಹನುಮಂತನಗರದ ಪಿಟ್ಲೋ ಮಹೇಶ್ವರಿ (24) ದುರಂತ ಸಾವಿಗೀಡಾಗಿದ್ದಾರೆ. ಎಂಬಿಎಯಲ್ಲಿ ಚಿನ್ನದ ಪದಕ ಪಡೆದಿದ್ದ ಮಹೇಶ್ವರಿ, ಚಾರ್ಟೆಡ್​ ಅಕೌಂಟೆಂಟ್​ ಆಗಿ ಕೆಲಸ ಮಾಡುತ್ತಿದ್ದರು. ಮೂರು ತಿಂಗಳ ಹಿಂದಷ್ಟೇ ಲವ್​ ಮ್ಯಾರೇಜ್​ ಆಗಿದ್ದರು. ಭವಿಷ್ಯದ ಜೀವನದ ಬಗ್ಗೆ ಸುವರ್ಣ ಕನಸುಗಳನ್ನು ಹೊಂದಿದ್ದರು. ಆದರೆ, ಆ ಕನಸುಗಳು ಕನಸಾಗಿಯೇ ಉಳಿದಿವೆ.

    ಮಾರ್ಚ್​ 12ರಂದು ಮಹೇಶ್ವರಿ ಅವರು ತಮ್ಮ ಪತಿ ರಾಜೇಶ್ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದರು. ಕೂಡಲೇ ಆಕೆಯನ್ನು ಹೈದರಾಬಾದ್‌ನ ಮಲಕ್ ಪೇಟಾ ಯಶೋದಾ ಆಸ್ಪತ್ರೆಗೆ ರವಾನಿಸಲಾಯಿತು. ಎರಡು ದಿನ ಚಿಕಿತ್ಸೆ ನೀಡಿದರೂ ಫಲಿಸಲಿಲ್ಲ. ಮಹೇಶ್ವರಿ ಬ್ರೈನ್ ಡೆಡ್ ಆಗಿರುವುದನ್ನು ವೈದ್ಯರು ದೃಢಪಡಿಸಿದರು. ಈ ಸುದ್ದಿ ಕೇಳಿ ಪತಿ ರಾಜೇಶ್​ ಒಂದು ಕ್ಷಣ ಕುಸಿದುಬಿದ್ದರು.

    ವರ್ಷಗಳ ಪ್ರೀತಿಗೆ ಮೂರು ತಿಂಗಳ ಹಿಂದಷ್ಟೇ ಮದುವೆ ಎಂಬ ಬಂಧನವಾಗಿತ್ತು. ಹೊಸ ಜೀವನ ಆರಂಭಿಸಿದ ಕೆಲವೇ ತಿಂಗಳಲ್ಲಿ ಹೆಂಡತಿ ದುರಂತ ಅಂತ್ಯ ಕಂಡಿದ್ದು ಮಾತ್ರ ರಾಜೇಶ್​ಗೆ ಬಹುದೊಡ್ಡ ಆಘಾತವಾಗಿದೆ. ನಮ್ಮ ಜೀವನದಲ್ಲಿ ವಿಧಿಯಾಟ ಈ ರೀತಿ ಪ್ರಭಾವ ಬೀರುತ್ತೆ ಎಂದು ಭಾವಿಸಿರಲಿಲ್ಲ ಎಂದು ರಾಜೇಶ್​ ದುಃಖದಲ್ಲಿ ಕಣ್ಣೀರಿಡುತ್ತಿದ್ದಾರೆ.

    ಮಹೇಶ್ವರಿ ಅವರ ಕುಟುಂಬದ ಸದಸ್ಯರು ತೀವ್ರ ದುಃಖದಲ್ಲಿ ಮುಳುಗಿದ್ದರು. ಬ್ರೈನ್ ಡೆಡ್ ವಿಚಾರ ತಿಳಿದಾಗ ಜೀವನ್ ದಾನ್ ವೈದ್ಯರ ತಂಡ, ಮಹೇಶ್ವರಿ ಅವರ ಪತಿ ರಾಜೇಶ್ ಹಾಗೂ ಕುಟುಂಬದ ಸದಸ್ಯರನ್ನು ಕರೆತಂದು ಅಂಗಾಂಗ ದಾನದ ಬಗ್ಗೆ ತಿಳುವಳಿಕೆ ನೀಡಿದರು. ದುಃಖದ ನಡುವೆಯೂ ಮಹೇಶ್ವರಿಯ ಅಂಗಾಂಗಗಳನ್ನು ದಾನ ಮಾಡಲು ಕುಟುಂಬಸ್ಥರು ಮುಂದಾದರು. ಮಹೇಶ್ವರಿಯ ಎರಡು ಕಿಡ್ನಿ ಮತ್ತು ಯಕೃತ್ತನ್ನು ಸಂಗ್ರಹಿಸಿ ಮೂವರು ತೀವ್ರ ಅಸ್ವಸ್ಥ ರೋಗಿಗಳಿಗೆ ಕಸಿ ಮಾಡಿ ಜೀವ ಉಳಿಸಲಾಯಿತು. (ಏಜೆನ್ಸೀಸ್​)

    6 ಚಿನ್ನದ ಪದಕ, 2 ಕ್ಯಾಶ್​ ಪ್ರೈಜ್​! ಆನ್​ಲೈನ್​ ಕ್ಲಾಸ್​ಗೆ ಮೊಬೈಲ್​ ಕೊಳ್ಳಲು ಕಾಸಿರದ ಬಡ ಯುವತಿಯ ಯಶೋಗಾಥೆ

    ಎಲೆಕ್ಟೋರಲ್​ ಬಾಂಡ್ಸ್​: ಲಾಭಕ್ಕಿಂತ 6 ಪಟ್ಟು ಹೆಚ್ಚು ದೇಣಿಗೆ! ದೊಡ್ಡವರೇ ತಮ್ಮ ಶಕ್ತಿ ಮೀರಿ ಹಣ ಕೊಟ್ಟಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts