

ಮುಂಬೈ: ಬಹುಭಾಷಾ ನಟಿ ಸಾಯಿ ಪಲ್ಲವಿಯವರ ಪ್ರತಿಭೆ ಬಗ್ಗೆ ಯಾರಿಗೂ ವಿಶೇಷವಾಗಿ ಹೇಳಬೇಕಿಲ್ಲ. ದಕ್ಷಿಣ ಭಾರತ ಸಿನಿರಂಗ ಮಾತ್ರವಲ್ಲದೆ ಬಾಲಿವುಡ್ನಲ್ಲೂ ತಮ್ಮದೇಯಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಯಾವುದೇ ಭಾಷೆಯಿರಲಿ ಸಾಯಿ ಪಲ್ಲವಿ ಅವರ ಸಹಜ ನಟನೆಗೆ ಎಲ್ಲರೂ ಫಿದಾ ಆಗುತ್ತಿದ್ದಾರೆ. ಹೀಗಾಗಿಯೇ ಅವರಿಗೆ ಎಲ್ಲ ಸಿನಿ ಇಂಡಸ್ಟ್ರಿಗಳಿಂದ ಆಫರ್‌ಗಳ ಮೇಲೆ ಆಫರ್‌ಗಳು ಬರುತ್ತಿವೆ. ಸದ್ಯ ಬಾಲಿವುಡ್‌ನಲ್ಲಿ ಬಹುಕೋಟಿ ವೆಚ್ಚದಲ್ಲಿ ರಾಮಾಯಣ ಸಿನಿಮಾ ತಯಾರಾಗುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಜತೆ ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರಕ್ಕೆ ಸಂಬಂಧಿಸಿದ ಕೆಲವು ಫೋಟೋಗಳು ಸೋರಿಕೆಯಾಗಿ ವೈರಲ್ ಕೂಡ ಆಗಿವೆ. ಫೋಟೋಗಳನ್ನು ನೋಡಿ ಸಾಯಿ ಪಲ್ಲವಿ ವಿರುದ್ಧ ಟ್ರೋಲಿಂಗ್ ಸಹ ನಡೆಯುತ್ತಿವೆ.
ಸಾಮಾನ್ಯವಾಗಿ ಬಾಲಿವುಡ್ ಸಿನಿ ಇಂಡಸ್ಟ್ರಿ ಅಂದರೆ ಜಗತ್ತಿನಲ್ಲಿ ದೊಡ್ಡ ಹೆಸರು ಇದೆ. ಆದರೆ, ಈಗ ಅಲ್ಲಿ ನಡೆಯುತ್ತಿರುವ ರಾಜಕೀಯದ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಬಾಲಿವುಡ್‌ನಲ್ಲಿನ ಅರಾಜಕತೆ, ಸ್ವಜನಪಕ್ಷಪಾತ, ಗಾಡ್‌ಫಾದರ್ ಸಿದ್ಧಾಂತ, ಹೊರಗಿನವರ ವಿರುದ್ಧ ಪಕ್ಷಪಾತದ ಧೋರಣೆ ಬಗ್ಗೆ ಈಗಾಗಲೇ ಸಾಕಷ್ಟು ಕೇಳಿದ್ದೇವೆ. ಈ ಬಗ್ಗೆ ಅನೇಕರು ಧ್ವನಿ ಸಹ ಎತ್ತಿದ್ದಾರೆ.
ಅನೇಕ ಸ್ಟಾರ್ ಡೈರೆಕ್ಟರ್ಗಳು, ಹೀರೋಗಳು, ಹೀರೋಯಿನ್ಗಳು ತಮಗಾದ ಅವಮಾನಗಳ ಬಗ್ಗೆ, ತಮ್ಮ ವಿರುದ್ಧ ನಡೆದ ಷಡ್ಯಂತ್ರಗಳ ಬಗ್ಗೆ ಈಗಾಗಲೇ ಹಲವು ಬಾರಿ ಹೇಳಿಕೊಂಡಿದ್ದಾರೆ. ತೆಲುಗಿನ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ಇತ್ತೀಚೆಗೆ ಬಾಲಿವುಡ್ ಬಗ್ಗೆ ಮಾಡಿದ ಕಾಮೆಂಟ್‌ಗಳನ್ನು ನಾವು ಕೇಳಿದ್ದೇವೆ. ಅಂತಹ ಬಾಲಿವುಡ್ ಈಗ ಮತ್ತೊಮ್ಮೆ ತಮ್ಮ ವಕ್ರ ಬುದ್ದಿಯನ್ನು ತೋರಿದೆ. ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಸೂಕ್ತವಲ್ಲ ಎಂದು ಟ್ರೋಲ್ಗಳನ್ನು ಮಾಡಲಾಗುತ್ತಿದೆ. ಇದರ ಹಿಂದೆ ಪಿತೂರಿ ಇದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ರಣಬೀರ್ ಕಪೂರ್ ಅವರು ರಾಮನಾಗಿ ಮತ್ತು ಸಾಯಿ ಪಲ್ಲವಿ ಸೀತೆಯಾಗಿ ಒಟ್ಟಿಗೆ ಇರುವ ಫೋಟೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿ ಭಾರಿ ಸಂಚಲನ ಮೂಡಿಸಿವೆ. ಇಬ್ಬರನ್ನು ಪೌರಾಣಿಕ ಪಾತ್ರಗಳಲ್ಲಿ ನೋಡಿ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ. ಆದರೆ, ಬಾಲಿವುಡ್ನ ಒಂದು ವಿಭಾಗ ಸಾಯಿ ಪಲ್ಲವಿಯನ್ನು ಗುರಿಯಾಗಿಸಿ ಟ್ರೋಲ್ ಮಾಡಲು ಪ್ರಾರಂಭಿಸಿದೆ. ಸೀತೆಯ ಮೂಲ ಪಾತ್ರಕ್ಕೆ ಸಾಯಿ ಪಲ್ಲವಿ ಸೂಕ್ತವಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ನೂರಕ್ಕೆ ನೂರರಷ್ಟು ನ್ಯಾಯ ಒದಗಿಸಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅಂದಹಾಗೆ ಸಾಯಿ ಪಲ್ಲವಿಗೆ ಇಷ್ಟು ದೊಡ್ಡ ಪಾತ್ರ ಸಿಕ್ಕಿರುವುದನ್ನು ಕೆಲವರು ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಸಾಯಿ ಪಲ್ಲವಿ ವಿರುದ್ಧ ಮಾತನಾಡುತ್ತಿದ್ದಾರೆ. ಅದರಲ್ಲೂ ಸಾಯಿ ಪಲ್ಲವಿ ಅಭಿನಯದ ಬಗ್ಗೆ ಯಾರು ಕೂಡ ಎರಡು ಮಾತನಾಡುವಂತಿಲ್ಲ. ಏಕೆಂದರೆ, ಶ್ಯಾಮ್ ಸಿಂಘರಾಯ್ ಚಿತ್ರಕ್ಕೆ ಹಿಂದಿ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆಕೆಯ ನಟನೆ, ಹಾವಭಾವ, ನೃತ್ಯ ಎಲ್ಲವೂ ಉತ್ತಮ ಅಂಕಗಳನ್ನು ಪಡೆದಿವೆ. ಆದರೆ, ಈಗ ಮಾಡುತ್ತಿರುವ ಟ್ರೋಲ್ ಅನ್ನು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆ. ಸಾಯಿ ಪಲ್ಲವಿ ವಿರುದ್ಧ ಬಾಲಿವುಡ್‌ನಲ್ಲಿ ಷಡ್ಯಂತ್ರ ನಡೆಯುತ್ತಿದೆ ಎಂದು ಅಭಿಮಾನಿಗಳು ಕೂಡ ಕಾಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಗಳು ಹೇಳಿದಂತೆ ಸಾಯಿ ಪಲ್ಲವಿ ವಿರುದ್ಧ ಬಾಲಿವುಡ್‌ನಲ್ಲಿ ಸಂಚು ನಡೆಯುತ್ತಿದೆಯೇ? ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ರೂಪದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್)