More

    ಎಲೆಕ್ಟೋರಲ್​ ಬಾಂಡ್ಸ್​: ಲಾಭಕ್ಕಿಂತ 6 ಪಟ್ಟು ಹೆಚ್ಚು ದೇಣಿಗೆ! ದೊಡ್ಡವರೇ ತಮ್ಮ ಶಕ್ತಿ ಮೀರಿ ಹಣ ಕೊಟ್ಟಿಲ್ಲ

    ನವದೆಹಲಿ: ಸುಪ್ರೀಂಕೋರ್ಟ್​ ಆದೇಶದಂತೆ ಚುನಾವಣಾ ಆಯೋಗವು ಎಲೆಕ್ಟೋರಲ್​ ಬಾಂಡ್ಸ್​ ಕುರಿತಾದ ಮಾಹಿತಿಗಳನ್ನು ತನ್ನ ವೆಬ್​ಸೈಟ್​ನಲ್ಲಿ ಅಪ್​ಲೋಡ್​ ಮಾಡಿದ ಬೆನ್ನಲ್ಲೇ, ಅದರಲ್ಲಿರುವ ಸ್ಫೋಟಕ ಮಾಹಿತಿಗಳು ರಾಷ್ಟ್ರ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿ ಮಾಡಿದೆ. ಗಮನಾರ್ಹ ಸಂಗತಿ ಏನೆಂದರೆ, ಫ್ಯೂಚರ್​ ಗೇಮಿಂಗ್​ ಅಂಡ್​ ಹೋಟೆಲ್​ ಸರ್ವೀಸ್​ ಪ್ರೈವೆಟ್​ ಕಂಪನಿ ಇತರೆ ಕಂಪನಿಗಳಿಗಿಂತ 2019ರ ಏಪ್ರಿಲ್​ 12ರಿಂದ 2024ರ ಜನವರಿ 12ರವರೆಗೆ ಎಲೆಕ್ಟೋರಲ್​ ಬಾಂಡ್ಸ್​ ಮೂಲಕ ಅತಿ ಹೆಚ್ಚು ದೇಣಿಗೆ ನೀಡಿದ ಕಂಪನಿಯಾಗಿದೆ.

    ಫ್ಯೂಚರ್​ ಗೇಮಿಂಗ್​ ಅಂಡ್​ ಹೋಟೆಲ್​ ಸರ್ವೀಸ್​ ಪ್ರೈವೆಟ್​ ಕಂಪನಿಯು ಬರೋಬ್ಬರಿ 1,368 ಕೋಟಿ ರೂ. ಕೊಡುಗೆ ಕೊಟ್ಟಿದೆ. ಆದರೆ, ಅದಕ್ಕಿಂತಲೂ ಅಚ್ಚರಿಯ ಸಂಗತಿ ಏನೆಂದರೆ, ತನ್ನ ಕಂಪನಿಯ ಒಟ್ಟು ನಿವ್ವಳ ಲಾಭಕ್ಕಿಂತ ಐದು ಪಟ್ಟು ಹೆಚ್ಚಿಗೆ ನೀಡಿದೆ. ಲಭ್ಯವಿರುವ ಕಳೆದ ಮೂರು ವರ್ಷಗಳ ಡೇಟಾ ಪ್ರಕಾರ ಕಂಪನಿಯ ಒಟ್ಟು ನಿವ್ವಳ ಲಾಭ 215 ಕೋಟಿ ರೂ. ಆದರೆ, ಅದಕ್ಕಿಂತಲೂ ಐದು ಪಟ್ಟು ಹೆಚ್ಚು ದೇಣಿಗೆ ನೀಡಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಕಳೆದ ಐದು ವರ್ಷಗಳ ಅವಧಿಯಲ್ಲಿ ಎಲೆಕ್ಟೋರಲ್ ಬಾಂಡ್‌ಗಳ ಮೂಲಕ 50 ಕೋಟಿ ರೂ.ಗೂ ಅಧಿಕ ದೇಣಿಗೆ ನೀಡಿರುವ ಕಾರ್ಪೊರೇಟ್ ಕಂಪನಿಗಳ ಪಟ್ಟಿಯಲ್ಲಿ ತಮ್ಮ ಲಾಭಕ್ಕಿಂತಲೂ ಹೆಚ್ಚಿನ ಹಣವನ್ನು ಕೊಡುಗೆ ನೀಡಿರುವ ಕೆಲವರನ್ನು ಸಹ ಒಳಗೊಂಡಿದೆ. ಕೆಲವರು ತಮ್ಮ ಗಳಿಕೆಯ ಗಣನೀಯ ಭಾಗವನ್ನು ಬಿಟ್ಟುಕೊಟ್ಟಿರುವಂತೆ ಕಾಣುತ್ತದೆ. ಉದಾಹರಣೆಗೆ, ಐಎಫ್​ಬಿ ಆಗ್ರೋ ಇಂಡಸ್ಟ್ರೀಸ್ 2019-20 ರಿಂದ 2022-23 ರವರೆಗೆ 175 ಕೋಟಿ ರೂ. ನಿವ್ವಳ ಲಾಭವನ್ನು ಪಡೆಯಿತು. ಇದರಲ್ಲಿ 92 ಕೋಟಿ ರೂ. ಅಂದರೆ, ಶೇ.53ರಷ್ಟು ದೇಣಿಗೆ ನೀಡಿದೆ. ಅದೇ ರೀತಿ, ಹಲ್ದಿಯಾ ಎನರ್ಜಿಯು ಸಹ 37 ರಷ್ಟು ತನ್ನ ಲಾಭದಲ್ಲಿ ದೇಣಿಗೆ ಕೊಟ್ಟಿದೆ.

    ಇನ್ನು ಎಲ್ಲ ದೊಡ್ಡ ದಾನಿಗಳೂ ಕೂಡ ತಮ್ಮ ಶಕ್ತಿ ಮೀರಿ ಹಣ ನೀಡಿಲ್ಲ. ಪಟ್ಟಿಯಲ್ಲಿನ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ, ದೈತ್ಯ ಮೈನಿಂಗ್​ ಅಂಡ್​ ಮೆಟಲ್​ ಕಂಪನಿಗಳಾದ ವೇದಾಂತ ಅಥವಾ ಜಿಂದಾಲ್ ಸ್ಟೀಲ್, ಪವರ್ ಮತ್ತು ಫಾರ್ಮಾ ಪ್ರಮುಖ ಕಂಪನಿಗಳಾದ ಡಾ. ರೆಡ್ಡಿ ಮತ್ತು ಟೊರೆಂಟ್ ಫಾರ್ಮಾಸ್ಯುಟಿಕಲ್ಸ್ 50 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚಿನ ಕೊಡುಗೆ ನೀಡಿವೆ. ಈ ದೇಣಿಗೆಗಳು ತಮ್ಮ ನಿವ್ವಳ ಲಾಭದ 1% ಕ್ಕಿಂತ ಕಡಿಮೆಯಾಗಿದೆ.

    ಎಲೆಕ್ಟೋರಲ್​ ಬಾಂಡ್ಸ್​ ಪಟ್ಟಿಯಲ್ಲಿ ಅನೇಕ ದೊಡ್ಡ ದಾನಿಗಳು ಮೂಲಸೌಕರ್ಯ, ಗಣಿಗಾರಿಕೆ ಮತ್ತು ಔಷಧೀಯ ಕ್ಷೇತ್ರದವರಾಗಿದ್ದಾರೆ. (ಏಜೆನ್ಸೀಸ್​)

    6 ಚಿನ್ನದ ಪದಕ, 2 ಕ್ಯಾಶ್​ ಪ್ರೈಜ್​! ಆನ್​ಲೈನ್​ ಕ್ಲಾಸ್​ಗೆ ಮೊಬೈಲ್​ ಕೊಳ್ಳಲು ಕಾಸಿರದ ಬಡ ಯುವತಿಯ ಯಶೋಗಾಥೆ

    ಡಾ. ಸಿ.ಎನ್. ಮಂಜುನಾಥ್ ರಾಜಕಾರಣ ಪ್ರವೇಶಿಸಿದ್ದು ದುರದೃಷ್ಟಕರ: ನಾಗತಿಹಳ್ಳಿ ಚಂದ್ರಶೇಖರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts