More

    ತೆಲಂಗಾಣದಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತ, ಮದುವೆಗೆ ಹೊರಟಿದ್ದ 65 ಮಂದಿ ಪ್ರಾಣಾಪಾಯದಿಂದ ಪಾರು!

    ಹೈದರಾಬಾದ್: ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯಲ್ಲಿ ಮನೈರ್ ನದಿಗೆ ಅಡ್ಡಲಾಗಿ ನಿರ್ಮಾಣ ಹಂತದಲ್ಲಿರುವ ಸೇತುವೆಯ ಒಂದು ಭಾಗ ಕುಸಿದಿದೆ. ಬಲವಾದ ಗಾಳಿಗೆ ಸೇತುವೆಯ ಎರಡು ಸಿಮೆಂಟ್ ಗರ್ಡರ್‌ಗಳು ಉರುಳಿ ಬಿದ್ದಿವೆ. ಮಧ್ಯರಾತ್ರಿ ಈ ಘಟನೆ ನಡೆದಿದ್ದರಿಂದ ಅನಾಹುತ ತಪ್ಪಿದೆ.

    ಇದನ್ನೂ ಓದಿ: ಬಿಜೆಪಿಗೆ ಮತ ನೀಡಿ, ಮಮತಾ ಬ್ಯಾನರ್ಜಿ ಗೂಂಡಾಗಳನ್ನು ತಲೆ ಕೆಳಗಾಗಿ ನೇತು ಹಾಕ್ತೀವಿ: ಅಮಿತ್ ಷಾ

    ಮಂಗಳವಾರ ನಡೆದ ಘಟನೆ ಕುರಿತು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಸ್‌ ಪ್ರಯಾಣಿಸಿದ ಸ್ವಲ್ಪ ಹೊತ್ತಲ್ಲೇ ಸೇತುವೆ ಕುಸಿದು ಬಿದ್ದಿದೆ.
    ಮೈನರ್​ ನದಿಗೆ ಅಡ್ಡಲಾಗಿರುವ ಸುಮಾರು ಒಂದು ಕಿಲೋಮೀಟರ್ ಸೇತುವೆಯನ್ನು 2016 ರಲ್ಲಿ ಅಂದಿನ ತೆಲಂಗಾಣ ವಿಧಾನಸಭಾ ಸ್ಪೀಕರ್ ಎಸ್ ಮಧುಸೂಧನ ಚಾರಿ ಮತ್ತು ಸ್ಥಳೀಯ ಶಾಸಕ ಪುಟ್ಟ ಮಧು ಅವರು ಚಾಲನೆ ನೀಡಿದ್ದರು. 49 ಕೋಟಿ ರೂ, ಮೌಲ್ಯದ ಈ ಯೋಜನೆ ನಿರ್ಮಾಣ ಹಂತದಲ್ಲೇ ಕುಸಿದಿದೆ.

    2016 ರಲ್ಲಿ ಶಂಕುಸ್ಥಾಪನೆಗೊಂಡು ಒಂದು ವರ್ಷದೊಳಗೆ ಪೂರ್ಣಗೊಳ್ಳಬೇಕಿದ್ದ ಸೇತುವೆಯ ಅಂದಾಜು ವೆಚ್ಚ 46 ಕೋಟಿ ರೂ.. ಗುತ್ತಿಗೆದಾರರು ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದರಿಂದ ಎಂಟು ವರ್ಷ ಕಳೆದರೂ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಯಶಂಕರ್ ಭೂಪಾಲಪಲ್ಲಿ ಜಿಲ್ಲೆಯ ಗರ್ಮಿಲ್ಲಪಲ್ಲಿ, ಒಡೆಡೆಡುವಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿತ್ತು. ಮಂಥನಿ, ಪರಕಲ್ ಮತ್ತು ಜಮ್ಮುಕುಂಟಾ ಪಟ್ಟಣಗಳ ನಡುವಿನ ಅಂತರವನ್ನು 50 ಕಿ.ಮೀಗಳಷ್ಟು ಕಡಿಮೆ ಮಾಡಲಿದೆ. ಗುತ್ತಿಗೆದಾರರ ಬದಲಾವಣೆ, ಹಣದ ಕೊರತೆ ಮತ್ತು ಇತರ ಕಾರಣಗಳಿಂದ ನಿರ್ಮಾಣ ಕಾಮಗಾರಿ ವಿಳಂಬವಾಗಿದೆ. ಹೀಗಾಗಿ ಸೇತುವೆಯ ಕೆಳಗಿರುವ ತಾತ್ಕಾಲಿಕ ರಸ್ತೆಯನ್ನು ಸ್ಥಳೀಯರು ಸಂಚಾರಕ್ಕೆ ಬಳಸುತ್ತಾರೆ.

    ಕಿರ್ಗಿಸ್ತಾನ್​ನ ಜಲಪಾತದಲ್ಲಿ ಸಿಲುಕಿ ಭಾರತೀಯ ವಿದ್ಯಾರ್ಥಿ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts