More

  ಕರ್ನಾಟಕದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಬಳಿಕ ರಿಯಲ್​ ಎಸ್ಟೇಟ್​ ಉದ್ಯಮ ಕುಸಿದಿದೆ: ಸಚಿವ ಕೆಟಿಆರ್

  ಹೈದರಾಬಾದ್: ಮುಂದಿನ ಕೆಲವೇ ದಿನಗಳಲ್ಲಿ ಮತದಾನ ನಡೆಯಲಿರುವ ತೆಲಂಗಾಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಆಡಳಿತರೂಢ ಬಿಆರ್​ಎಸ್​, ಕಾಂಗ್ರೆಸ್​ ಹಾಗೂ ಬಿಜೆಪಿ ನಡುವಿನ ವಾಕ್ಸಮರ ಮುಗಿಲು ಮುಟ್ಟಿದೆ. ಇದೀಗ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಪುತ್ರ, ಸಚಿವ ಕೆಟಿಆರ್​ ಕರ್ನಾಟಕದಲ್ಲಿನ ರಿಯಲ್​ ಎಸ್ಟೇಟ್​ ಉದ್ಯಮದ ಕುರಿತು ಮಾತನಾಡುವ ಮೂಲಕ ಸುದ್ದಿಯಾಗಿದ್ದಾರೆ.

  ಹೈದರಾಬಾದಿನಲ್ಲಿ ನಡೆದ ರಿಯಲ್​ ಎಸ್ಟೇಟ್​ ಸಮ್ಮಿಟ್​ ಉದ್ಧೇಶಿಸಿ ಮಾತನಾಡಿದ ಕೆಟಿಆರ್​ ಕರ್ನಾಟಕದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದ ನಂತರ ಅಲ್ಲಿನ ರಿಯಲ್​ ಎಸ್ಟೇಟ್​ ಉದ್ಯಮ ಕುಸಿದಿದ್ದು, ಬೆಂಗಳೂರಿನಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಜನರು ಗಮನಿಸಬೇಕು. ಆ ನಂತರ ನಿಮಗೆ ಇದರ ಬಗ್ಗೆ ತಿಳಿಯುತ್ತದೆ ಎಂದಿದ್ದಾರೆ.

  ಕರ್ನಾಟಕದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಬಳಿಕ ರಿಯಲ್​ ಎಸ್ಟೇಟ್​ ಹಾಗೂ ಕನ್ಸ್​​ಟ್ರಕ್ಷನ್​ ಉದ್ಯಮದಲ್ಲಿ ಶೇ. 28ರಷ್ಟು ಕುಸಿತ ಕಂಡಿದೆ. ಸ್ಥಿರ ಸರ್ಕಾರ ಮತ್ತು ಸಮರ್ಥ ನಾಯಕತ್ವ ಮಾತ್ರ ಪ್ರಗತಿಯನ್ನು ಸಾಧಿಸಬಹುದಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಇದೇ ಗರಿಯಾಗುತ್ತದೆ. ಆದ್ದರಿಂದ ಎಲ್ಲರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಸರ್ಕಾರವನ್ನು ಬೆಂಬಲಿಸಿ ಎಂದು ವಿನಂತಿಸಿದ್ದಾರೆ.

  ಇದನ್ನೂ ಓದಿ: ನಟಿ ತ್ರಿಶಾ ಕುರಿತು ಅಸಭ್ಯ ಕಾಮೆಂಟ್; ಕೊನೆಗೂ ಕ್ಷಮೆಯಾಚಿಸಿದ ನಟ ಮನ್ಸೂರ್ ಅಲಿ

  ಆಂಧ್ರಪ್ರದೇಶ ಹಾಗೂ ತೆಲಂಗಾಣ ಕಂಡಿರುವ ಮುಖ್ಯಮಂತ್ರಿಗಳ ಪೈಕಿ ಕೆಸಿಆರ್ ಉತ್ತಮ ಹಾಗೂ ಸಮತೋಲಿತ ಆಡಳಿತವನ್ನು ನೀಡಿದ್ದಾರೆ. ದೇಶದಲ್ಲಿ ತೆಲಂಗಾಣ ಮಾಡೆಲ್​ ಹೆಚ್ಚು ಪ್ರಸಿದ್ದಿ ಪಡೆದಿದ್ದು, ವಿಪಕ್ಷಗಳು ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿವೆ. ನಾವು ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ ಹೊರತು ಯಾರೋ ಕೆಲವರನ್ನು ಉದ್ದಾರ ಮಾಡಲು ಅಲ್ಲ ಎಂದು ರಿಯಲ್​ ಎಸ್ಟೇಟ್​ ಸಮ್ಮಿಟ್​ನಲ್ಲಿ ಸಚಿವ ಕೆಟಿಆರ್​ ಹೇಳಿದ್ದಾರೆ.

  ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂದಬರು ಲೋಕಸಭೆ ಎಲೆಕ್ಷನ್​ಗೆ ಸೆಮಿಫಿನಾಲೆ ಎಂದೇ ಹೇಳಲಾಗಿದೆ. 119 ಸದಸ್ಯಬಲದ ತೆಲಂಗಾಣ ವಿಧಾನಸಭೆಗೆ ನವೆಂಬರ್ 30ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts