More

    ಡಿಕೆಶಿ ವಿರುದ್ಧದ ಸಿಬಿಐ ಕೇಸ್​ ವಾಪಸ್; ಸಿದ್ದರಾಮಯ್ಯ ಮಾಡಿರುವ ಈ ಕೆಲಸ ಅಕ್ಷಮ್ಯ ಅಪರಾಧ ಎಂದ ಬಿಎಸ್​ವೈ

    ಬೆಂಗಳೂರು: ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ವಿರುದ್ಧ ಕೇಂದ್ರಿಯಾ ತನಿಖಾ ಸಂಸ್ಥೆ(CBI) ನಡೆಸುತ್ತಿರುವ ತನಿಖೆಯನ್ನು ಹಿಂಪಡೆಯಲು ಮುಂದಾಗಿರುವ ರಾಜ್ಯ ಕಾಂಗ್ರೆಸ್​ ಸರ್ಕಾರದ ಕ್ರಮಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕಿಡಿಕಾರಿದ್ದಾರೆ.

    ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಅವರು, ಪರೋಕ್ಷವಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಸಹಾಯ ಮಾಡಲು ಈ ರೀತಿಯ ಕಾನೂನುಬಾಹಿರ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.

    2019ರಲ್ಲಿ ನಾವು ಅಡ್ವೊಕೇಟ್ ಜನರಲ್ ಅವರಿಂದ ಕಾನೂನು ಅಭಿಪ್ರಾಯ ಪಡೆದ ನಂತರವೇ ಸಿಬಿಐ ತನಿಖೆಗೆ ವಹಿಸುವ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದೇವೆ. ಹೈಕೋರ್ಟ್ ಕೂಡ ನಮ್ಮ ನಿರ್ಧಾರವನ್ನು ಎತ್ತಿ ಹಿಡಿದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರಿಲೀಫ್​ ನೀಡಿಲ್ಲ. ಸಿಎಂ ಸಿದ್ದರಾಮಯ್ಯನವರು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್​ ಅವರಿಗೆ ಸಹಾಯ ಮಾಡಲು ಈ ರೀತಿಯ ಕಾನೂನುಬಾಹಿರ ಕ್ರಮಕ್ಕೆ ಮುಂದಾಗಿದ್ದಾರೆ. ಈ ರೀತಿಯ ಕ್ರಮವನ್ನು ನಾವು ಖಂಡಿಸುತ್ತೇವೆ ಮತ್ತು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದ್ದೇವೆ.

    ಇದನ್ನೂ ಓದಿ: ಪರಿಶ್ರಮ ಪಿಯು ಕಾಲೇಜು ಆರಂಭ; 2024-25ನೇ ಶೈಕ್ಷಣಿಕ ವರ್ಷಕ್ಕೆ ಚಾಲನೆ: ಪ್ರದೀಪ್ ಈಶ್ವರ್ ನೇತೃತ್ವ

    ಡಿಕೆಶ ಶಿವಕುಮಾರ್​ ಅವರನ್ನು ಸಿಬಿಐ ಕೇಸ್​ನಿಂದ ರಕ್ಷಿಸಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಸಿದ್ದರಾಮಯ್ಯ ಮಾಡಿದ ಕೆಲಸ ಅಕ್ಷಮ್ಯ ಅಪರಾಧ. ಕಾನೂನು ಬಾಹಿರವಾಗಿ ಡಿಕೆ ಶಿವಕುಮಾರ್​ ಅವರನ್ನು ಉಳಿಸಲು ಈ ಕೆಲಸವನ್ನು ಸಿಎಂ ಮಾಡಬಾರದಾಗಿತ್ತು. ಈಗಲಾದರೂ ಸರ್ಕಾರ ತನ್ನ ನಿರ್ಣಯ ವಾಪಸ್ ಪಡೆಯಲಿ, ರಾಜ್ಯದ ಜನ ಇದನ್ನು ಕ್ಷಮಿಸಲ್ಲ.

    ಸಿದ್ದರಾಮಯ್ಯ ರಾಜ್ಯದ ಜನರ ಬಳಿ ಕ್ಷಮೆ ಕೇಳಿ ನಿರ್ಣಯ ವಾಪಸ್ ಪಡೆಯಲಿ. ನಾವು ಎಜಿ ಅಭಿಪ್ರಾಯ ಪಡೆದು, ಕಾನೂನು ಚೌಕಟ್ಟಿನಲ್ಲೇ ಪ್ರಕರಣ ಸಿಬಿಐಗೆ ಕೊಟ್ಟಿದ್ದೇವು. ಈಗ ಹಿಂಬಾಗಿಲ ಮೂಲಕ ಪ್ರಕರಣದ ಅನುಮತಿ ವಾಪಸ್ ಪಡೆದಿದ್ದು ಅಕ್ಷಮ್ಯ ಅಪರಾಧ, ಅವರ ಅಪರಾಧದಲ್ಲಿ ಸಿದ್ದರಾಮಯ್ಯ ಕೂಡ ಶಾಮೀಲಾಗಲು ಹೊರಟಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ.

    ಶನಿವಾರ ಪ್ರತಿಭಟನೆ

    ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಬಿಎಸ್‌ ವೈ ಸರ್ಕಾರ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದ ನಡೆಯನ್ನು ಖಂಡಿಸಿ ಶನಿವಾರ ಬಿಜೆಪಿ ಪ್ರತಿಭಟನೆ ನಡೆಸಲಿದೆ.

    ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಪ್ರಮುಖ ನಾಯಕರುಗಳು ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts