More

    ನಟಿ ತ್ರಿಶಾ ಕುರಿತು ಅಸಭ್ಯ ಕಾಮೆಂಟ್; ಕೊನೆಗೂ ಕ್ಷಮೆಯಾಚಿಸಿದ ನಟ ಮನ್ಸೂರ್ ಅಲಿ

    ಚೆನ್ನೈ: ‘ಲಿಯೋ’ ಚಿತ್ರದಲ್ಲಿ ರೇಪ್ ಸೀನ್ ಇರಬೇಕಿತ್ತು, ನಟಿ ತ್ರಿಷಾ ಜೊತೆ ಬೆಡ್ ರೂಮ್ ಸೀನ್ ಹಂಚಿಕೊಳ್ಳಲು ಆಗಲಿಲ್ಲ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ ಮನ್ಸೂರ್ ಅಲಿ ಖಾನ್ ಕೊನೆಗೂ ತಾವು ಆಡಿದ ಮಾತುಗಳಿಗೆ ಕ್ಷಮೆಯಾಚಿಸಿದ್ದಾರೆ.

    ನಟಿ ತ್ರಿಷಾ ಬಗ್ಗೆ ನೀಡಿದ್ದ ಈ ಹೇಳಿಕೆಗೆ ಸಂಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಚೆನ್ನೈ ಪೊಲೀಸರು ಮನ್ಸೂರ್ ಅವರನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ದರು. ಈ ಬೆನ್ನಲ್ಲೇ ಮನ್ಸೂರ್ ಅಲಿ ಖಾನ್ ಅವರು ಕ್ಷಮೆಯಾಚಿಸಿದ್ದಾರೆ.

    ಈ ಕುರಿತು ಪ್ರಕಟಣೆ ಹೊರಡಿಸಿರುವ ನಟ ಮನ್ಸೂರ್ ಅಲಿ ಖಾನ್​, ಮಹಿಳೆಯರ ಪಾತ್ರ ಸಮಾಜದಲ್ಲಿ ಪ್ರಮುಖವಾಗಿದ್ದು, ಇದು ಶ್ಳಾಘನೀಯ ವಿಚಾರವಾಗಿದೆ. ನಾನು ತ್ರಿಶಾ ಅವರ ಮದುವೆಯಲ್ಲಿ ಮುಂದೆ ನಿಂತು ಆರ್ಶೀವದಿಸುವ ಅವಕಾಶ ಕೊಡುವಂತೆ ಆ ದೇವರಲ್ಲಿ ಕೇಳಿಕೊಂಡಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ನಟ ಮನ್ಸೂರ್​ ಅಲಿ ಖಾನ್​ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ: ಕೆಲವು ಕಹಿ ಘಟನೆಗಳಿಂದ ನಾನು ಖಿನ್ನತೆಗೆ ಒಳಗಾಗಿದ್ದೆ ಎಂದು ಖ್ಯಾತ ನಿರ್ದೇಶಕ

    ಲೋಕೇಶ್​ ಕನಗರಾಜ್​ ನಿರ್ದೇಶನದ, ದಳಪತಿ ವಿಜಯ್​ ನಟನೆಯ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ತ್ರಿಷಾ ಅವರು ವಿಜಯ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಮನ್ಸೂರ್​ ಅಲಿ ಖಾನ್​ ವಿಲನ್​ ಆಗಿ ನಟಿಸಿದ್ದರು. ಈ ಕುರಿತು ಇತ್ತೀಚಿನ ಸಂದರ್ಶನ ಒಂದರಲ್ಲಿ ಮಾತನಾಡುವ ವೇಳೆ ನಟನ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

    ತ್ರಿಷಾ ಜೊತೆ ನಟಿಸುತ್ತೇನೆ ಎಂದಾಗ ಬೆಡ್​ರೂಂ ದೃಶ್ಯ ಇರಬಹುದು ಎಂದು ನಾನು ಭಾವಿಸಿದೆ. ಈ ಮೊದಲ ಸಿನಿಮಾಗಳಲ್ಲಿ ನಟಿಯರನ್ನು ಬೆಡ್​ರೂಂಗೆ ಕರೆದುಕೊಂಡು ಹೋಗುವ ದೃಶ್ಯ ಇತ್ತು. ಈ ಸಿನಿಮಾದಲ್ಲೂ ಹಾಗೆಯೇ ಇರಬಹುದು ಎಂದುಕೊಂಡಿದ್ದೆ. ನಾನು ಹಲವು ರೇಪ್ ದೃಶ್ಯಗಳನ್ನು ಮಾಡಿದ್ದೇನೆ. ಅದು ನನಗೆ ಹೊಸದಲ್ಲ. ಆದರೆ, ಈ ಚಿತ್ರದಲ್ಲಿ ಅವರನ್ನು ನೋಡಲೂ ಅವಕಾಶ ಕೊಡಲಿಲ್ಲ ಎಂದಿದ್ದರು ಮತ್ತು ಸಾಕಾಷ್ಟು ಖಂಡನೆ ವ್ಯಕ್ತವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts