More

    ಕೆಲವು ಕಹಿ ಘಟನೆಗಳಿಂದ ನಾನು ಖಿನ್ನತೆಗೆ ಒಳಗಾಗಿದ್ದೆ ಎಂದು ಖ್ಯಾತ ನಿರ್ದೇಶಕ

    ಮುಂಬೈ: ಚಿತ್ರರಂಗದಲ್ಲಿನ ತಮ್ಮ ಕೆಲಸಗಳಿಂದಲೇ ಹೆಸರುವಾಸಿಯಾಗಿರುವ ನಿರ್ದೇಶಕರಲ್ಲಿ ಒಬ್ಬರಾದ ಅನುರಾಗ್​ ಕಶ್ಯಪ್. ಫಿಲ್ಮ್​ಫೇರ್​​ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿರುವ ಅವರು ಇತ್ತೀಚಿಗೆ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯೊಂದನ್ನು ವಿವರಿಸಿದ್ದಾರೆ.

    ಖಾಸಗಿ ಸುದ್ದಿ ಸಂಸ್ಥಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು ಖಿನ್ನತೆಗೆ ಒಳಗಾದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಫ್ಲಾಟ್​ಫಾರ್ಮ್​ಗಳು ಅಳವಡಿಸಿಕೊಂಡಿರುವ ಸೆನ್ಸಾರ್​ಶಿಪ್​​ ವಿರುದ್ಧ ಕಿಡಿಕಾರಿದ್ದಾರೆ.

    ನಾಣು ನೆಟ್​ಫ್ಲಿಕ್ಸ್​ಗಾಗಿ ವೆಬ್​ ಸರಣಿ ಒಂದನ್ನು ನಿರ್ದೇಶಿಸಿದ್ದೆ. ಆದರೆ, ಕಾರಣಾಂತರಗಳಿಂದ ಅದರ ಬಿಡುಗಡೆಯನ್ನು ರದ್ದುಗೊಳಿಸಲಾಯಿತು. ನೆಟ್​ಫ್ಲಿಕ್ಸ್​ಗಾಗಿ ನಾನು ನಿರ್ದೇಶಿಸಿದ್ದ ಮ್ಯಾಕ್ಸಿಮಮ್​ ಸಿಟಿ ನನ್ನ ಜೀವನದ ಒಂದು ಅತ್ಯುತ್ತಮ ಮತ್ತು ಪ್ರಾಮಾಣಿಕ ಎಂದೇ ಹೇಳಬಹುದಾಗಿದೆ. ಕೆಲವು ಸೂಕ್ಷ್ಮ ವಿಚಾರಗಳು ಇರುವ ಕಾರಣ ಬಿಡುಗಡೆ ಮಾಡಲಾಗಲಿಲ್ಲ.

    ಇದನ್ನೂ ಓದಿ: ಚೀನಾದಲ್ಲಿ ದಿನದಿಂದ ದಿನಕ್ಕೆ ನ್ಯುಮೋನಿಯಾ ಹೆಚ್ಚಳ; ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗಳು ಭರ್ತಿ

    ಈ ವಿಚಾರ ನನ ಗಮನಕ್ಕೆ ಬಂದ ನಂತರ ನಾನು ಮೂರು ವರ್ಷಗಳ ಕಾಲ ಖಿನ್ನತೆಗೆ ಒಳಗಾಗಿದ್ದೆ ಮತ್ತು ಅತಿಯಾಗಿ ಮದ್ಯಪಾನ ಮಾಡುತ್ತಿದ್ದೆ. ಇದು ಎರಡು ಬಾರಿ ಹೃದಯಾಘಾತಕ್ಕೆ ಕಾರಣವಾಗಿದೆ. ನಾನು ನನ್ನ ನಿರ್ದೇಶನದ ನ್ಯಾಕ್ಸಿಮಮ್​ ಸಿಟಿ ಮೇಲೆ ಸಂಪೂರ್ಣವಾಗಿ ನಂಬಿಕೆಯನ್ನು ಇಟ್ಟಿದ್ದೆ. ಆದರೆ, ಅದು ಬಿಡುಗಡೆಯಾಗದೇ ಇದ್ದಾಗ ಅದರಿಂದ ಆದ ನೋವು ಸಾಕಷ್ಟು ನೋವುಂಟು ಮಾಡಿತ್ತು.

    ಇದಲ್ಲದೆ ಪೌರತ್ವ ತಿದ್ದುಪಡಿ ಕಾಯ್ದೆ ಸಂದರ್ಭದಲ್ಲಿ ಮಾತನಾಡಿದಾಗ ತಮ್ಮ ಮಗಳ ಮೇಲೆ ಅತ್ಯಾಚಾರ ಎಸಗುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಬರಲು ಆರಂಭಿಸಿದ್ದವು. ಇದರಿಂದ ನಾವು ದೇಶ ತೊರೆಯಬೇಕಾಯಿತು ಎಂದು ನಿರ್ದೇಶಕ ಅನುರಾಗ್​ ಕಶ್ಯಪ್ ತಾವು ಖಿನ್ನತೆಗೆ ಜಾರಿದ ಬಗ್ಗೆ ಮಾತನಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts