More

    ಚೀನಾದಲ್ಲಿ ದಿನದಿಂದ ದಿನಕ್ಕೆ ನ್ಯುಮೋನಿಯಾ ಹೆಚ್ಚಳ; ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗಳು ಭರ್ತಿ

    ನವದೆಹಲಿ: ಈಗಷ್ಟೇ ಕೋವಿಡ್​-19 ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳುತ್ತಿರುವ ಚೀನಾಗೆ ರೋಗಗಳ ಭೀತಿ ಕಾಡುತ್ತಲೇ ಇದೇ. ಇದೀಗ ನ್ಯುಮೋನಿಯಾ ಕಾಯಿಲೆ ದಿನದಿಂದ ದಿನಕ್ಕೆ ಹೆಚ್ಚಳವಾಗ ತೊಡಗಿದ್ದು, ಉಸಿರಾಟದ ಸಮಸ್ಯೆಯಿಂದಾಗಿ ಅನೇಕರು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ನಿಗೂಢ ನ್ಯುಮೋನಿಯಾ ಸಾಂಕ್ರಾಮಿಕವು ಚೀನಾ ಶಾಲೆಗಳನ್ನು ಆವರಿಸಿದೆ. ಇದರಿಂದ ಅನಾರೋಗ್ಯಕ್ಕೆ ತುತ್ತಾದ ಮಕ್ಕಳಿಂದ ಅಸ್ಪತ್ರೆಗಳು ತುಂಬಿಕೊಂಡಿವೆ. ಇದು ಜಾಗತಿಕ ಆರೋಗ್ಯ ತಜ್ಞರಲ್ಲಿ ಕಳವಳ ಮೂಡಿಸಿದೆ.

    pneumonia outbreak

    ಇದನ್ನೂ ಓದಿ: ಕ್ರೀಡಾ ಅಕಾಡೆಮಿ ಸ್ಥಾಪಿಸುವುದಾಗಿ ವಂಚನೆ; ಕ್ರಿಕೆಟಿಗ ಶ್ರೀಶಾಂತ್ ವಿರುದ್ಧ ಪ್ರಕರಣ ದಾಖಲು

    ಬೀಜಿಂಗ್ ಮತ್ತು ಲಿಯಾನಿಂಗ್ ಪ್ರಾಂತ್ಯಗಳು ಸಾಂಕ್ರಾಮಿಕದ ಮೂಲ ಕೇಂದ್ರಗಳಾಗಿವೆ. ಇಲ್ಲಿನ ಶಿಶು ವೈದ್ಯ ಆಸ್ಪತ್ರೆಗಳಲ್ಲಿ ಲೆಕ್ಕವಿಲ್ಲದಷ್ಟು ಅಸ್ವಸ್ಥ ಮಕ್ಕಳು ದಾಖಲಾಗಿದ್ದಾರೆ. ಸಮಸ್ಯೆಯ ಗಂಭೀರತೆಯನ್ನು ಅರಿತ ಅನೇಕ ಶಾಲೆಗಳು ತರಗತಿಗಳನ್ನು ರದ್ದುಗೊಳಿಸಿವೆ. ವಿದ್ಯಾರ್ಥಿಗಳಲ್ಲದೆ, ಶಿಕ್ಷಕರು ಕೂಡ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

    ಬೀಜಿಂಗ್​ನಲ್ಲಿ ಈಗಾಗಲೇ ಚಳಿಗಾಲ ಆರಂಭವಾಗಿದ್ದು, ನ್ಯುಮೋನಿಯಾ ಮತ್ತಷ್ಟು ಹರಡಬಹುದು ಎಂದು ಹೇಳಲಾಗಿದೆ. ಸೋಂಕು ತಗುಲಿರುವ ಮಕ್ಕಳಲ್ಲಿ ವಿಪರೀತ ಜ್ವರ ಹಾಗೂ ಶ್ವಾಸಕೋಶದ ಉರಿಯೂತ ಪ್ರಮುಖ ಲಕ್ಷಣವಾಗಿದೆ. ಆದರೆ ಫ್ಲೂ ಅಥವಾ ಆರ್‌ಎಸ್‌ವಿಯಂತಹ ಉಸಿರಾಟ ಸಂಬಂಧಿ ವೈರಸ್ ಕಾಯಿಲೆಗಳಲ್ಲಿ ಸಾಮಾನ್ಯವಾಗಿ ಉಂಟಾಗುವ ಕೆಮ್ಮು ಅವರಲ್ಲಿ ಕಾಣಿಸಿಕೊಂಡಿಲ್ಲ. ಇದರ ತೀವ್ರತೆಯಲ್ಲಿ ವ್ಯತ್ಯಾಸವಿದ್ದು, ಕೆಲವರು ಆಸ್ಪತ್ರೆಗೆ ದಾಖಲಾಗುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts