More

    ರಾಹುಲ್​ ಗಾಂಧಿಗೆ EC ನೋಟಿಸ್; ದೊಡ್ಡ ವಿಚಾರವೇನಲ್ಲ ಎಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

    ನವದೆಹಲಿ: ಇತ್ತೀಚಿಗೆ ರಾಜಸ್ಥಾನದ ಜಾಲೋರ್​ನಲ್ಲಿ ನಡೆದ ಚುಣಾವಣಾ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು “ಪನೌತಿ (ಅಪಶಕುನ)” ಎಂದು ನಿಂದಿಸಿ ಮಾತನಾಡಿದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್​ ನೀಡಿರುವುದು ದೊಡ್ಡ ವಿಚಾರವೇನಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

    ರಾಹುಲ್​ ಗಾಂಧಿಗೆ ಚುನಾವಣಾ ಆಯೋಗ ನೀಡಲಾಗಿರುವ ನೋಟಿಸ್​ಗೆ ಕಾಂಗ್ರೆಸ್​ ಪ್ರತಿಕ್ರಿಯಿಸಲಿದ್ದು,  ಯಾರ ಮೇಲೂ ಅಂತಹ ತೀವ್ರ ಟೀಕೆಗಳು ಬಂದಿಲ್ಲ. ಆದರೆ ಚುನಾವಣೆ ನಡೆಯುತ್ತಿರುವುದರಿಂದ ಅಬ್ಬರದ ಪ್ರಚಾರ ನಡೆಯುತ್ತಿದೆ ಎಂದಿದ್ದಾರೆ.

    ಕೇಂದ್ರ ಬಿಜೆಪಿ ಸರ್ಕಾರ ಚುನಾವಣೆಯಲ್ಲಿ ಹೆದರಿಸಲು ಯತ್ನಿಸುತ್ತಿರುವ ರೀತಿ ಸರಿಯಿಲ್ಲ. ಪ್ರಜಾಪ್ರಭುತ್ವ ಉಳಿಸಬೇಕಾದರೆ ಸಮವಾದ ವೇದಿಕೆ ಇರಬೇಕು. ಇದರ ಬದಲಾಗಿ ಸರ್ಕಾರಿ ಸಂಸ್ಥೆಗಳಾದ ಇಡಿ, ಸಿಬಿಐ ಇತ್ಯಾದಿಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಹೇಳಿಕೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ನೋಟಿಸ್‌ಗೆ ಕಾಂಗ್ರೆಸ್ ಉತ್ತರ ನೀಡಲಿದೆ.

    ಇದನ್ನೂ ಓದಿ: ಪ್ರಧಾನಿ ಮೋದಿ ಒಬ್ಬ ಪಾಪಿ ನಮ್ಮ ಆಟಗಾರರಿಗೆ ಕೇಸರಿ ಬಟ್ಟೆ ಧರಿಸುವಂತೆ ಮಾಡಿದ್ದಾನೆ: ಮಮತಾ ಬ್ಯಾನರ್ಜಿ ಕಿಡಿ

    ರಾಹುಲ್ ಗಾಂಧಿಗೆ ನೋಟಿಸ್ ಕಳುಹಿಸಲಿ ನಾವು ಉತ್ತರಿಸುತ್ತೇವೆ. ಇದು ದೊಡ್ಡ ವಿಷಯವಲ್ಲ. ಯಾರ ಮೇಲೂ ಅಂತಹ ತೀವ್ರ ಟೀಕೆಗಳು ಬಂದಿಲ್ಲ. ಆದರೆ ಚುನಾವಣೆ ನಡೆಯುತ್ತಿರುವುದರಿಂದ ಅಬ್ಬರದ ಪ್ರಚಾರ ನಡೆಯುತ್ತಿದೆ. ನೋಟಿಸ್​ಗೆ ಉತ್ತರ ಕೊಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಏನಿದು ವಿವಾದ?
    ಕಳೆದ ಮಂಗಳವಾರ ರಾಜಸ್ಥಾನದಲ್ಲಿ ಚುನಾವಣ ಪ್ರಚಾರ ನಿಮಿತ್ತ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್​ ಗಾಂಧಿ, ಚುನಾವಣೆಯ ಸಮಯದಲ್ಲಿ ಪ್ರಮುಖ ವಿಷಯಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಪ್ರಧಾನಿ ಮೋದಿ ಪ್ರಯತ್ನಿಸುತ್ತಿದ್ದಾರೆ. ಟಿವಿಯಲ್ಲಿ ಬಂದರೆ, ಹಿಂದು-ಮುಸ್ಲಿಂ ಎಂದು ಹೇಳುತ್ತಾರೆ. ಕೆಲವೊಮ್ಮೆ ಕ್ರಿಕೆಟ್​ ಪಂದ್ಯ ನೋಡಲು ಹೋಗುತ್ತಾರೆ. ನಮ್ಮ ಹುಡುಗರು ಕ್ರಿಕೆಟ್​ ಪಂದ್ಯವನ್ನು ಗೆಲ್ಲುತ್ತಿದ್ದರು ಆದರೆ, ಪನೌತಿ (ಅಪಶಕುನ) ಕಾಲಿಟ್ಟಿದ್ದರಿಂದ ಪಂದ್ಯವನ್ನು ಸೋತರು ಎಂದು ನ.19ರಂದು ನಡೆದ ವಿಶ್ವಕಪ್​ ಫೈನಲ್​ ಪಂದ್ಯವನ್ನು ಉಲ್ಲೇಖಿಸಿ ರಾಹುಲ್​ ಗಾಂಧಿ ಮಾತನಾಡಿದ್ದರು.

    ರಾಹುಲ್​ ಗಾಂಧಿ ಕಾಮೆಂಟ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಅದು ಬಿಜೆಪಿ ಗಮನಕ್ಕೆ ಬಂದಿದ್ದು, ಕ್ಷಮೆ ಕೋರಲು ಪಟ್ಟು ಹಿಡಿದಿದೆ. ಈ ಬಗ್ಗೆ ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ರವಿಶಂಕರ್ ಪ್ರಸಾದ್ ಮಾತನಾಡಿ, ರಾಹುಲ್​ ಹೇಳಿಕೆ, “ನಾಚಿಕೆಗೇಡಿನ, ಖಂಡನೀಯ ಮತ್ತು ಅವಮಾನಕರ” ಎಂದು ಟೀಕಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts