More

    ಪ್ರಧಾನಿ ಮೋದಿ ಒಬ್ಬ ಪಾಪಿ ನಮ್ಮ ಆಟಗಾರರಿಗೆ ಕೇಸರಿ ಬಟ್ಟೆ ಧರಿಸುವಂತೆ ಮಾಡಿದ್ದಾನೆ: ಮಮತಾ ಬ್ಯಾನರ್ಜಿ ಕಿಡಿ

    ಕಲ್ಕತ್ತಾ: ಇತ್ತೀಚಿಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್​ ಫಿನಾಲೆಯಲ್ಲಿ ಭಾರತ ತಂಡ ಸೋತಾಗ ಇಡೀ ದೇಶವೇ ದುಃಖದಲ್ಲಿ ಮುಳುಗಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಟೀಂ ಇಂಡಿಯಾ ಡ್ರೆಸ್ಸಿಂಗ್​ ರೂಮಿಗೆ ತೆರಳಿ ಆಟಗಾರರನ್ನು ಸಂತೈಸಿ ಧೈರ್ಯ ತುಂಬಿದ್ದರು. ಆದರೆ, ಟಿಎಂಸಿ ಅಧಿನಾಯಕಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೊಂಕು ಹುಡುಕುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್​ ಫಿನಾಲೆಯಲ್ಲಿ ಭಾರತದ ಪ್ರಧಾನಿ ಹಾಗೂ ಆಸ್ಟ್ರೇಲಿಯಾದ ಉಪಪ್ರಧಾನಿ ಸಾಕ್ಷಿಯಾಗಿದ್ದರು. ಭಾರತ ತಂಡವನ್ನು ಕಡೆಯವರೆಗೂ ಹುರಿದುಂಬಿಸಿದ ಪ್ರಧಾನಿ ಮೋದಿ ಅವರು, ಸೋತಾಗಲೂ ಕೂಡ ಟೀಂ ಇಂಡಿಯಾದ ಆಟಗಾರರನನ್ನು ಸಂತೈಸಿ ಹುರಿದುಂಬಿಸಿದ್ದರು.

    ಪಶ್ಚಿಮ ಬಂಗಾಳದ ರಾಜಧಾನಿ ಕಲ್ಕತ್ತಾದಲ್ಲಿ ನಡೆದ ಟಿಎಂಸಿ ಪ್ರಮುಖರ ಸಭೆಯನ್ನುದ್ಧೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ಒಬ್ಬ ಪಾಪಿ ನಮ್ಮ ದೇಶದ ಆಟಗಾರರನ್ನು ಕೇಸರಿ ಪಡೆಯ ಪ್ಲೇಯರ್​ಗಳನ್ನಾಗಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಸಾಕಷ್ಟು ಖಂಡನೆಗೆ ಗುರಿಯಾಗಿದೆ.

    Mamata Banerjee

    ಇದನ್ನೂ ಓದಿ: ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಮತ್ತೊಮ್ಮೆ ಹಿನ್ನಡೆ; ಡಿ. 23ರ ವರೆಗೆ ಪ್ರತಿನಿತ್ಯ 2,700 ಕ್ಯೂಸೆಕ್ ನೀರು ಹರಿಸುವಂತೆ CWRC ಆದೇಶ

    ಈಡನ್​ ಗಾರ್ಡನ್​ ಅಥವಾ ವಾಂಖೆಡೆಯಲ್ಲಿ ಫೈನಲ್​ ಪಂದ್ಯ ಆಯೋಜಿಸಿದ್ದರೆ ಭಾರತ ಫಿನಾಲೆಯಲ್ಲಿ ಖಂಡಿತವಾಗಿಯೂ ಗೆಲ್ಲುತ್ತಿತ್ತು. ಮೊದಲಿಗೆ ನಮ್ಮ ಆಟಗಾರರಿಗೆ ಕೇಸರಿ ಬಟ್ಟೆಯನ್ನು ಧರಿಸುವಂತೆ ಹೇಳಲಾಯಿತು. ನಂತರ ಫಿನಾಲೆಯಲ್ಲಿ ನಮ್ಮವರು ಖಂಡಿತವಾಗಿಯೂ ಗೆಲ್ಲುತ್ತಿದ್ದರು ಆದರೆ, ಮೋದಿ ಮತ್ತು ಅಮಿತ್​ ಷಾ ಪಂದ್ಯ ವೀಕ್ಷಿಸಿದ ಕಾರಣ ಭಾರತ ಫಿನಾಲೆಯಲ್ಲಿ ಸೋಲಬೇಕಾಯಿತು ಎಂದು ಆರೋಪಿಸುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

    ಇತ್ತೀಚಿಗೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಇದೇ ರೀತಿಯ ಹೇಳಿಕೆಯನ್ನು ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದರು. ತಮ್ಮ ಹೇಳಿಕೆಗೆ ವಿವರಣೆ ನೀಡುವಂತೆ ರಾಷ್ಟ್ರೀಯ ಚುನಾವಣಾ ಆಯೋಗವು ರಾಹುಲ್​ ಗಾಂಧಿಗೆ ನೋಟಿಸ್​ ಜಾರಿ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts