More

    ಸೂರ್ಯಕುಮಾರ್​ ಸ್ಪೋಟಕ ಆಟಕ್ಕೆ ಬೆಚ್ಚಿದ ಕಾಂಗರೂಗಳು; ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ-20ಯಲ್ಲಿ ಭಾರತಕ್ಕೆ ಜಯ

    ವಿಶಾಖಪಟ್ಟಣಂ: ಇಲ್ಲಿನ ವೈಎಸ್​ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್​ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ಭಾರತ 2 ವಿಕೆಟ್​ಗಳ ಜಯಗಳಿಸಿದೆ.

    ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಜೋಶ್​ ಇಂಗ್ಲಿಸ್​ (110 ರನ್, 50 ಎಸೆತ, 11 ಬೌಂಡರಿ, 8 ಸಿಕ್ಸರ್), ಸ್ಟೀವನ್​ ಸ್ಮಿತ್​ (52 ರನ್, 41 ಎಸೆತ, 8 ಬೌಂಡರಿ) ಬಿರುಸಿನ ಬ್ಯಾಟಿಂಗ್​ ಫಲವಾಗಿ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 208ರನ್​ ಗಳಿಸಿತ್ತು.

    ಭಾರತದ ಪರ ಅರ್ಷ್​ದೀಪ್​ ಸಿಂಗ್ (4-0-41-0), ಪ್ರಸಿದ್ದ ಕೃಷ್ಣ (4-0-50-1), ರವಿ ಬಿಷ್ಣೋಯಿ (4-0-54-1), ಅಕ್ಷರ್​ ಪಟೇಲ್ (4-0-32-0), ಮುಕೇಶ್​ ಕುಮಾರ್​ (4-0-29-0) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

    ಬೃಹತ್​ ಗುರಿ ಬೆನ್ನತ್ತಿದ್ದ ಭಾರತ ತಂಡವು ನಾಯಕ ಸೂರ್ಯ ಕುಮಾರ್ ಯಾದವ್ (80 ರನ್, 42 ಎಸೆತ, 9 ಬೌಂಡರಿ, 4 ಸಿಕ್ಸರ್), ಇಶಾನ್​ ಕಿಶನ್ (58 ರನ್, 39 ಎಸೆತ, 2 ಬೌಂಡರಿ, 5 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್​ ಫಲವಾಗಿ ಭಾರತ ತಂಡವು ಗುರಿಯನ್ನು 8 ವಿಕೆಟ್ 20 ಓವರ್​ಗಳಲ್ಲಿ ಬೆನ್ನತ್ತಿ ಗೆಲುವಿನ ನಗೆ ಬೀರಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts