More

    ಗುಜರಿ-ರದ್ದಿ ಮಾರಿ ಕೇಂದ್ರ ಸರ್ಕಾರದ ಇಲಾಖೆಗಳು ಗಳಿಸಿದ ಹಣವೆಷ್ಟು ಗೊತ್ತಾ?

    ನವದೆಹಲಿ: ಅಕ್ಟೋಬರ್​ ತಿಂಗಳಲ್ಲಿ ಕೇಂದ್ರ ಸರ್ಕಾರ ನಡೆಸಿದ ಸ್ವಚ್ಛತಾ ಅಭಿಯಾನದ ವೇಳೆ ವಾಹನಗಳು, ಲ್ಯಾಪ್‌ಟಾಪ್‌ಗಳು ಹಾಗೂ ಕಡತಗಳನ್ನು ಲೇವಾರಿ ಮಾಡುವ ಮೂಲಕ 500 ಕೋಟಿ ರೂಪಾಯಿಗೂ ಅಧಿಕ ಆದಾಯ ಗಳಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕೇಂದ್ರ ಸರ್ಕಾರದ ಸ್ವಚ್ಛತಾ ಕಾರ್ಯಸೂಚಿ ಅನುಷ್ಟಾನದ ಪ್ರಕಾರ ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ಇಲಾಖೆಗಳಲ್ಲಿ ಉಪಯೋಗಿಸದೆ ಇರುವ ವಾಹನ, ಲ್ಯಾಪ್​ಟಾಪ್​, ಎಲೆಕ್ಟ್ರಾನಿಕ್​ ಸಾಧನ, ಕಡತ ಸೇರಿದಂತೆ ಉಪಯೋಗಕ್ಕೆ ಬಾರದೇ ಇರುವ ವಸ್ತುಗಳನ್ನು ವಿಲೇವಾರಿ ಮಾಡಲಾಗುತ್ತದೆ.

    ಇದನ್ನೂ ಓದಿ: ಬಾಕಿ ವೇತನ ಕೇಳಿದ್ದಕ್ಕೆ ದಲಿತ ಸಮುದಾಯದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

    ಇದು ಮೂರನೇ ವರ್ಷದ ಅಭಿಯಾನವಾಗಿದ್ದು, ಈ ರೀತಿ ಗುಜರಿ ವಸ್ತುಗಳ ವಿಲೇವಾರಿಯ ಮಾರಟವಾಗಿದೆ. ಈ ಬಾರಿ ಕಂಟೋನ್ಮೆಂಟ್ ಪ್ರದೇಶಗಳು, ಅರೆಸೈನಿಕ ಪಡೆಗಳು, ಕಚೇರಿ ಸ್ಥಳಗಳು ಮತ್ತು ಬ್ಯಾರಕ್‌ಗಳ ಮೇಲೆ ಅಭಿಯಾನವನ್ನು ನಡೆಸಲಾಗಿತ್ತು. ಸುಮಾರು 2.58 ಲಕ್ಷ ಕಚೇರಿಗಳು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದವು. ಗುಜರಿ ಹಾಗೂ ರದ್ದಿ ವಸ್ತುಗಳ ಮಾರಾಟದಿಂದ ಸರ್ಕಾರಕ್ಕೆ 556.35 ಕೋಟಿ ರೂಪಾಯಿ ಆದಾಯ ಗಳಿಸಿದೆ.

    ಸರ್ಕಾರ ಕಳೆದ 3 ವರ್ಷಗಳಿಂದ ಈ ಅಭಿನಾಯವನ್ನು ನಡೆಸುಕೊಳ್ಳುತ್ತ ಬಂದಿದ್ದು, ಇಲ್ಲಿಯವರೆಗೂ 4 ಲಕ್ಷ ಕಚೇರಿ, 96 ಲಕ್ಷ ಕಡತಗಳು, 355 ಚದರ ಅಡಿ ಜಾಗವನ್ನು ಸ್ವಚ್ಛಗೊಳಿಸಲಾಗಿದೆ. ಇದರಿಂದ ಒಟ್ಟಾಗಿ ಸರ್ಕಾರಕ್ಕೆ 1,116 ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts