More

    ಬಿಜೆಪಿಗೆ ಮತ ನೀಡಿ, ಮಮತಾ ಬ್ಯಾನರ್ಜಿ ಗೂಂಡಾಗಳನ್ನು ತಲೆ ಕೆಳಗಾಗಿ ನೇತು ಹಾಕ್ತೀವಿ: ಅಮಿತ್ ಷಾ

    ಕೋಲ್ಕತ್ತಾ: ಬಿಜೆಪಿಗೆ ಮತ ನೀಡಿ, ಮಮತಾ ಬ್ಯಾನರ್ಜಿ ಅವರ ಗೂಂಡಾಗಳನ್ನು ತಲೆ ಕೆಳಗಾಗಿ ನೇತು ಹಾಕುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

    ಇದನ್ನೂ ಓದಿ: IPL 2024: ಸಿಎಸ್​ಕೆ ವಿರುದ್ಧ ಟಾಸ್ ಗೆದ್ದ ಲಖೌನ ಬೌಲಿಂಗ್​ ಆಯ್ಕೆ!

    ಕಾಂಗ್ರೆಸ್ ಆಗಲಿ ಸಿಎಂ ಮಮತಾ ಬ್ಯಾನರ್ಜಿ ಆಗಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮುಟ್ಟುವ ಧೈರ್ಯ ಇಲ್ಲ ಎಂದು ರಾಯ್‌ಗಂಜ್‌ನ ಬಿಜೆಪಿ ಅಭ್ಯರ್ಥಿ ಕಾರ್ತಿಕ್ ಪಾಲ್‌ ಪರ ಬಂಗಾಳದ ಉತ್ತರ ದಿನಜ್‌ಪುರ ಜಿಲ್ಲೆಯ ಕರಂಡಿಘಿಯಲ್ಲಿ ಪ್ರಚಾರ ರ್ಯಾಲಿಯನ್ನುದ್ದೇಶಿ ಅಮಿತ್​ ಶಾ ಮಾತನಾಡಿದರು. ಹೊಸ ಕಾನೂನಿನ ಅಡಿಯಲ್ಲಿ ಎಲ್ಲಾ ಹಿಂದೂ ನಿರಾಶ್ರಿತರಿಗೆ ಪೌರತ್ವ ಸಿಗುತ್ತದೆ ಎಂದು ಭರವಸೆ ನೀಡಿದ್ದಾರೆ.

    ಈ ಬಾರಿ 35 ಸೀಟು ಕೊಡಿ: ಗಡಿ ರಾಜ್ಯಕ್ಕೆ ನುಸುಳುವುದನ್ನು ತಡೆಯಲು ಬಂಗಾಳ ಮುಖ್ಯಮಂತ್ರಿಗೆ ಸಾಧ್ಯವಿಲ್ಲ. “ಮಮತಾ ಬ್ಯಾನರ್ಜಿ ಅವರು ಒಳನುಸುಳುವಿಕೆಯನ್ನು ನಿಲ್ಲಿಸಬಹುದೇ ಅವರಿಂದ ಸಾಧ್ಯವಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರ ಒಳನುಸುಳುವಿಕೆಯನ್ನು ನಿಲ್ಲಿಸಬಹುದು.‘ಕಳೆದ ಬಾರಿ ನಮಗೆ 18 ಸೀಟು ಕೊಟ್ಟಿದ್ದೀರಿ, ಮೋದಿ ಅವರು ರಾಮಮಂದಿರ ಕೊಟ್ಟಿದ್ದಾರೆ. ಈ ಬಾರಿ 35 ಸೀಟು ಕೊಡಿ, ನುಸುಳುವುದನ್ನು ನಿಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.

    ಇತ್ತೀಚೆಗೆ ಬಂಗಾಳದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದ ಸಂದೇಶಖಾಲಿ ಗಲಾಟೆಯನ್ನು ಗೃಹ ಸಚಿವರು ಉಲ್ಲೇಖಿಸಿದರು. ಸಂದೇಶಖಾಲಿಯಲ್ಲಿ, ಸಿಎಂ ಮಮತಾ ಬ್ಯಾನರ್ಜಿ ಅವರು ತಮ್ಮ ಮತಬ್ಯಾಂಕ್‌ಗೆ ಧಕ್ಕೆಯಾಗದಂತೆ ಮಹಿಳೆಯರಿಗೆ ಚಿತ್ರಹಿಂಸೆ ನೀಡಲು ಅವಕಾಶ ಮಾಡಿಕೊಟ್ಟರು. ಹೈಕೋರ್ಟ್ ಮಧ್ಯಪ್ರವೇಶಿಸಿತು ಇದರಿಂದ ಆರೋಪಿಗಳು ಜೈಲಿನಲ್ಲಿದ್ದಾರೆ ಎಂದು ಷಾ ಹೇಳಿದರು.

    ಟಿಎಂಸಿ ನಾಯಕರು ಐಷಾರಾಮಿ ಕಾರುಗಳಲ್ಲಿ ತಿರುಗಾಡುತ್ತಿದ್ದಾರೆ: ಬಿಜೆಪಿಗೆ ಮತ ಹಾಕಿ, ಮುಂದೆ ನಾವು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಗೂಂಡಾಗಳನ್ನು ತಲೆಕೆಳಗಾಗಿ ನೇತುಹಾಕುತ್ತೇವೆ ಎಂದು ದೀದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಟಿಎಂಸಿ ನಾಯಕರ ಮನೆಗಳನ್ನು ನೋಡಿ. ಹುಲ್ಲಿನ ಛಾವಣಿಯ ಮನೆಗಳಲ್ಲಿ ಇದ್ದವರು ಈಗ ನಾಲ್ಕು ಅಂತಸ್ತಿನ ಮನೆಗಳನ್ನು ಹೊಂದಿದ್ದಾರೆ. ಐಷಾರಾಮಿ ಕಾರುಗಳಲ್ಲಿ ತಿರುಗುತ್ತಾರೆ. ಇದೆಲ್ಲ ನಿಮ್ಮ ಹಣ. ಆದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಉತ್ತರ ಬಂಗಾಳದಲ್ಲಿ ಕೇಂದ್ರವು ಏಮ್ಸ್ ಸ್ಥಾಪಿಸಲಿದೆ ಎಂದು ಹೇಳಿದರು.

    ನಾವು ರಾಯಗಂಜ್‌ನಲ್ಲಿ ಏಮ್ಸ್ ಯೋಜನೆ ಹಾಕಿದ್ದೆವು. ಮಮತಾ ಅದನ್ನು ತಡೆದರು. ನಮಗೆ 30 ಸೀಟುಗಳನ್ನು ಕೊಡಿ, ನಾವು ಉತ್ತರ ಬಂಗಾಳದ ಮೊದಲ ಏಮ್ಸ್‌ನ ಕೆಲಸವನ್ನು ಪ್ರಾರಂಭಿಸುತ್ತೇವೆ. ಇದು ಮೋದಿಜಿಯವರ ಗ್ಯಾರಂಟಿ ಎಂದು ತಿಳಿಸಿದ್ದಾರೆ.

    ಕಿರ್ಗಿಸ್ತಾನ್​ನ ಜಲಪಾತದಲ್ಲಿ ಸಿಲುಕಿ ಭಾರತೀಯ ವಿದ್ಯಾರ್ಥಿ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts