More

    ತಂತ್ರಜ್ಞಾನ ಕಲಿಕೆಯ ಉತ್ಸಾಹ ಹೆಚ್ಚಿಸಿದ ಎಐ: ಶಿಕ್ಷಣ ತಜ್ಞ ಡಾ. ಎಸ್.ಕೆ. ಸಿನ್ಹಾ ಹೇಳಿಕೆ

    ಬೆಂಗಳೂರು: ಕೃತಕ ಬುದ್ಧಿಮತ್ತೆ (ಎಐ) ಪ್ರತಿ ಕ್ಷೇತ್ರದಲ್ಲೂ ತನ್ನದೇ ಆದ ಛಾಪು ಮೂಡಿಸುತ್ತಿದ್ದು, ದತ್ತಾಂಶ ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಸೈಬರ್ ಭದ್ರತೆಯಂತಹ ಉದಯೋನ್ಮುಖ ತಂತ್ರಜ್ಞಾನಗಳ ಕಲಿಕೆಯಲ್ಲಿನ ಉತ್ಸುಕತೆಯನ್ನು ಹೆಚ್ಚಿಸಿದೆ ಎಂದು ಶಿಕ್ಷಣ ತಜ್ಞ ಡಾ. ಎಸ್.ಕೆ. ಸಿನ್ಹಾ ತಿಳಿಸಿದರು.

    ನಗರದ ಹೊರವಲಯದ ರಾಜಾನುಕುಂಟೆಯಲ್ಲಿರುವ ಸಾಯಿ ವಿದ್ಯಾ ಇನ್‌ಸ್ಟಿಟ್ಯೂಟ್ ಆಫ್​ ಟೆಕ್ನಾಲಜಿಯಲ್ಲಿ (ಎಸ್‌ವಿಐಟಿ) ಆಯೋಜಿಸಿದ್ದ ‘ನಾವೀನ್ಯತೆಯಲ್ಲಿ ಉತ್ಪನ್ನ, ಪ್ರಕ್ರಿಯೆ, ತಂತ್ರಜ್ಞಾನ ಮತ್ತು ವ್ಯವಹಾರ’ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

    ಮೂವತ್ತು ವರ್ಷಗಳ ಹಿಂದೆ ಕೃತಕ ಬುದ್ಧಿಮತ್ತೆ ಎಂದರೆ ನಗುವ ಪರಿಸ್ಥಿತಿಯಿತ್ತು. ಆದರೆ, ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದೆ. ಈ ನಿಟ್ಟಿನಲ್ಲಿ ಬೋಧಕರಿಗೆ ಕಲಿಕಾ ಪೂರಕ ಸಮ್ಮೇಳನಗಳು ಹೆಚ್ಚಾಗಿ ನಡೆಯಬೇಕು. ಇಂತಹ ಸಮ್ಮೇಳನಗಳಲ್ಲಿ ಪಾಲ್ಗೊಂಡ ಬೋಧಕರು ವಿಷಯಗಳನ್ನು ಅರಿತು, ಚರ್ಚಿಸಿ ವಿದ್ಯಾರ್ಥಿಗಳಿಗೆ ತಿಳಿಹೇಳಬೇಕು ಎಂದು ಡಾ. ಎಸ್.ಕೆ. ಸಿನ್ಹಾ ಸಲಹೆ ನೀಡಿದರು.

    ಇದೇ ವೇಳೆ ವಿದ್ಯಾರ್ಥಿಗಳಿಗಾಗಿ ತಾಂತ್ರಿಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ವಿಜ್ಞಾನ ಆಧಾರಿತ ಹಲವು ಮಾದರಿಗಳನ್ನು ಸಿದ್ಧಪಡಿಸಿ ಪ್ರದರ್ಶಿಸಿದರು.

    ಕಾರ್ಯಕ್ರಮದಲ್ಲಿ ಎಸ್‌ವಿಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎಸ್. ಗಣೇಶ ಪ್ರಸಾದ್, ಸಮ್ಮೇಳನದ ಸಂಚಾಲಕ ಡಾ. ಶಾಂತಕುಮಾರ್ ಬಿ. ಪಾಟೀಲ್, ಡಾ. ಎನ್. ನಾಗಶ್ರೀ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts