More

    ಲಂಡನ್​ನ ಥೇಮ್ಸ್​ ನದಿ ತೀರದಲ್ಲಿರುವ ಬಸವೇಶ್ವರರ ಪ್ರತಿಮೆಗೆ ನಮನ ಸಲ್ಲಿಸಿದ ಆರ್​.ವಿ. ದೇಶಪಾಂಡೆ

    ಲಂಡನ್​: ಲಂಡನ್​ನ​ ಪ್ರಸಿದ್ದ ಥೇಮ್ಸ್​ ನದಿ ದಂಡೆಯಲ್ಲಿರುವ ಬಸವಣ್ಣನ ಪ್ರತಿಮೆ ಇರುವ ಸ್ಥಳಕ್ಕೆ ಮಾಜಿ ಸಚಿವ, ಹಳಿಯಾಳ ಕ್ಷೇತ್ರದ ಕಾಂಗ್ರೆಸ್​ ಶಾಸಕ ಆರ್​.ವಿ. ದೇಶಪಾಂಡೆ ಭೇಟಿ ನೀಡಿದ್ದಾರೆ.

    ಯುನೈಟೆಡ್​ ಕಿಂಗ್​​ಡಮ್​ ಮತ್ತು ಯುಕೆ ಪ್ರವಾಸದಲ್ಲಿರುವ ದೇಶಪಾಂಡೆ ಅವರು ಬ್ರಿಟಿಷ್​ ಸಂಸತ್​ ಭವನದ ಎದುರಿಗಿರುವ ಬಸವೇಶ್ವರರ ಪ್ರತಿಮೆಯನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು ಮತ್ತು ಬಸವಣ್ಣನವರ ಮೂರ್ತಿ ಸ್ಥಾಪನೆ ಮಾಡಿದ ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

    ಥೇಮ್ಸ್ ನದಿಯ ದಡದಲ್ಲಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರವರ್ತಕನ ಪ್ರತಿಮೆಯನ್ನು ನೋಡುವುದು ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆ ಮತ್ತು ಗೌರವದ ಸಂಗತಿಯಾಗಿದೆ ಎಂದು ಶಾಸಕ ಆರ್​.ವಿ. ದೇಶಪಾಂಡೆ ಅವರು ಬಣ್ಣಿಸಿದ್ದಾರೆ.

    ಇದನ್ನೂ ಓದಿ: ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪತ್ತೆ ಪ್ರಕರಣ; FSL ವರದಿಯಲ್ಲಿ ಬಯಲಾಯ್ತು ಸ್ಫೋಟಕ ಅಂಶ

    ಆರ್​.ವಿ. ದೇಶಪಾಂಡೆ ಅವರನ್ನು ಲಂಡನ್ ಬರೋ ಆಫ್ ಲ್ಯಾಂಬೆತ್‌ನ ಮಾಜಿ ಮೇಯರ್ ಮತ್ತು ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್‌ನ ಪರವಾಗಿ ಅಧ್ಯಕ್ಷ ಡಾ ನೀರಜ್ ಪಾಟೀಲ್ ಅವರು ಸನ್ಮಾನಿಸಿದರು. ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 14 ನವೆಂಬರ್ 2015 ರಂದು ಲಂಡನ್‌ನಲ್ಲಿ ಈ ಐತಿಹಾಸಿಕ ಪ್ರತಿಮೆಯನ್ನು ಅನಾವರಣಗೊಳಿಸಿದರು.

    ಲಂಡನ್‌ನಲ್ಲಿರುವ ಬಸವೇಶ್ವರ ಪ್ರತಿಮೆಯು ಯು.ಕೆ.ಯಲ್ಲಿ ಭಾರತೀಯ ಪ್ರಧಾನಿಯೊಬ್ಬರು ಅನಾವರಣಗೊಳಿಸಿದ ಮೊದಲ ಪ್ರತಿಮೆಯಾಗಿದೆ ಮತ್ತು ಯುನೈಟೆಡ್ ಕಿಂಗ್‌ಡಮ್, 1854 ರ ಪ್ರತಿಮೆಗಳ ಕಾಯಿದೆಯ ಪ್ರಕಾರ ಸಂಸತ್ತಿನ ಸಮೀಪದಲ್ಲಿ ಬ್ರಿಟಿಷ್ ಕ್ಯಾಬಿನೆಟ್ ಅನುಮೋದಿಸಿದ ಮೊದಲ ಪರಿಕಲ್ಪನಾ ಪ್ರತಿಮೆಗಳಲ್ಲಿ ಒಂದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts