More

  ರೇಣುಕಾಸ್ವಾಮಿ ಕೊಲೆ ಕೇಸ್​; ದರ್ಶನ್​ ಅಭಿಮಾನಿಗಳಿಗೆ ಮಹತ್ವದ ಸಲಹೆ ನೀಡಿದ ಪ್ರಶಾಂತ್ ಸಂಬರಗಿ

  ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಅವರ ಆಪ್ತರು ಪೊಲೀಸರ ವಶದಲ್ಲಿದ್ದು, ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಕ್ಷುಲಕ ಕಾರಣಕ್ಕೆ ರೇಣುಕಾಸ್ವಾಮಿ ಅವರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ನಟ ಹಾಗೂ ಅವರ ಆಪ್ತರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಬಿಗ್​ ಬಾಸ್ನ ಮಾಜಿ ಸ್ಪರ್ಧಿ ಪ್ರಶಾಂತ್​ ಸಂಬರಗಿ ಪ್ರತಿಕ್ರಿಯಿಸಿದ್ದಾರೆ.

  ಈ ಕುರಿತು ಮಾತನಾಡಿರುವ ಅವರು, ನಟ ದರ್ಶನ್​ ಅಭಿಮಾನಿಗಳಿಗೆ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಟ್ರೆಂಡ್​​ ಆಗುತ್ತಿದೆ.

  ವಿಡಿಯೋ ಮಾಡುತ್ತಿರುವ ಉದ್ದೇಶ ಏನೆಂದರೆ ತುಂಬಾ ನೋವಿನ ಸಂಗತಿ ಒಂದು ಜೀವ ಬಲಿಯಾಗಿದೆ. ಯುವಜನತೆ ತಮ್ಮ ನೆಚ್ಚಿನ ನಟನನ್ನು ಆದರ್ಶವನ್ನಾಗಿ ಆಯ್ಕೆಮಾಡಿಕೊಳ್ಳುವ ಮುನ್ನ ಅವರ ಬಗ್ಗೆ ಯೋಚಿಸಿ ಆ ನಂತರ ನಿರ್ಧಾರ ತೆಗೆದುಕೊಳ್ಳಿ. ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಹತ್ಯೆ ಖಂಡನೀಯವಾಗಿದ್ದು, ಅವರ ಸಾವಿನ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ ನೀಡಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ.

  darshan Sambargi

  ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್​; ಶೆಡ್‌ ಮಾಲೀಕ ಪಟ್ಟಣಗೆರೆ ಜಯಣ್ಣ ಹೇಳಿದ್ದಿಷ್ಟು

  ಅವರ ಅಭಿಮಾನಿಗಳು ಅಣ್ಣಾ, ಬಾಸ್​ ಎಂದು ಹೇಳಿಕೊಂದು ತಿರುಗುವವರು ತಮ್ಮ ನೆಚ್ಚಿನ ನಟನ ಈ ಕರ್ಮವನ್ನು ತೊಳೆಯಬೇಕೆಂದರೆ ಚಿತ್ರವನ್ನು ವೀಕ್ಷಿಸಲು 150-200 ರೂಪಾಯಿ ಖರ್ಚು ಮಾಡುತ್ತೀರಲ್ಲಾ ಅದರ ಬದಲಾಗಿ ಆ ಹಣವನ್ನು ರೇಣುಕಾಸ್ವಾಮಿ ಅವರ ಪತ್ನಿಗೆ ನೀಡಿ. ಈ ರೀತಿ ಮಾಡಿದರೆ ಎಲ್ಲೋ ನಾವು ಒಂದು ಕಡೆ ಅವರಿಗೆ ಸ್ವಲ್ಪ ಸಹಾಯ ಮಾಡಿದಂತಾಗುತ್ತದೆ.

  ಒಂದು ವೇಳೆ ಈ ರೀತಿ ಮಾಡಿದರೆ ಯಾರನ್ನು ನೀವು ನಿಮ್ಮ ಆದರ್ಶವನ್ನಾಗಿ ಇಟ್ಟುಕೊಂಡಿದ್ದೀರಲ್ಲ ಅವರ ಪಾಪ ಪರಿಹಾರಕ್ಕೆ ದಾನ ಮಾಡಬೇಕು. ದರ್ಶನ್​ ಅಭಿಮಾನಿಗಳೇ ನಿಮ್ಮ ನೆಚ್ಚಿನ ನಟ ಮಾಡಿರುವ ಕರ್ಮಾಕಾಂಡವನ್ನು ಯಾರು ಕ್ಷಮಿಸಲು ಸಾಧ್ಯವಿಲ್ಲ. ಹೀಗಾಗಿ ರೇಣುಕಾಸ್ವಾಮಿ ಅವರ ಪತ್ನಿಗೆ ನಾವೆಲ್ಲರೂ ಸಹಾಯ ಮಾಡೋಣ ದಯವಿಟ್ಟು ಎಲ್ಲರೂ ಕೈಜೋಡಿಸಿ ಎಂದು ಕರೆ ನೀಡಿದ್ದಾರೆ.

  See also  ವೈಯಕ್ತಿಕ ಸ್ವಚ್ಛತೆ ಬಗ್ಗೆ ಗಮನವಿರಲಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts