More

    ಸಿಎಸ್​ಕೆ ವಿರುದ್ಧ ಆರ್​ಸಿಬಿ ಗೆದ್ದು ಪ್ಲೇಆಫ್​ ಪ್ರವೇಶಿಸುವುದು ಕಷ್ಟಸಾಧ್ಯ; ಮಾಜಿ ಕ್ರಿಕೆಟಿಗರು ಹೀಗಂದಿದ್ಯಾಕೆ

    ಬೆಂಗಳೂರು: ಮೇ 18ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಚೆನ್ನೈ ಸೂಪರ್​​​ಕಿಂಗ್ಸ್​ ನಡುವಿನ 68ನೇ ಐಪಿಎಲ್ ಪಂದ್ಯವು ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದ್ದು, ಉಭಯ ತಂಡಗಳ ಅಭಿಮಾನಿಗಳ ನಿರೀಕ್ಷೆ ಗರಿಗೆದರಿಸುವಲ್ಲಿ ಯಶಸ್ವಿಯಾಗಿದೆ.

    ಉಭಯ ತಂಡಗಳಿಗೂ ಈ ಪಂದ್ಯ ಲೀಗ್​ ಹಂತದ ಕೊನೆಯ ಮ್ಯಾಚ್​ ಆಗಿದ್ದು, ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಬೆಂಗಳೂರು ಹಾಗೂ ಚೆನ್ನೈ ತಂಡಕ್ಕೆ ಈ ಪಂದ್ಯ ನಾಕೌಟ್​ ಪಂದ್ಯವಾಗಿದ್ದು, ಅಂತಿಮವಾಗಿ ಯಾವ ತಂಡ ಪ್ಲೇಆಫ್​ ಪ್ರವೇಶಿಸಲಿದೆ ಎಂದು ಕಾದು ನೋಡಬೇಕಿದೆ. ಆದರೆ, ಚೆನ್ನೈ ವಿರುದ್ಧ ಬೆಂಗಳೂರು ಸೋಲಲಿದೆ ಎಂದು ಹೇಳುವ ಮೂಲಕ ಮಾಜಿ ಆಟಗಾರರು ಆರ್​ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಇದನ್ನೂ ಓದಿ: ಆರ್​ಸಿಬಿ ವಿರುದ್ಧ ನಾನು ಆಡಿದ್ದರೆ ಇಷ್ಟೊತ್ತಿಗೆ….; ಲಖನೌ ವಿರುದ್ಧದ ಪಂದ್ಯದ ಬಳಿಕ​ ಶಾಕಿಂಗ್​ ಹೇಳಿಕೆ ಕೊಟ್ಟ ರಿಷಭ್​

    17ನೇ ಆವೃತ್ತಿಯ ಐಪಿಎಲ್​ನಲ್ಲಿ 65 ಪಂದ್ಯಗಳ ಮುಕ್ತಾಯದ ವೇಳೆಗೆ ರಾಜಸ್ಥಾನ ಹಾಗೂ ಕೆಕೆಆರ್​ ಪ್ಲೇಆಫ್​ ಪ್ರವೇಶಿಸಿವೆ. ಇನ್ನುಳಿದ 2 ಸ್ಥಾನಗಳಿಗಾಗಿ ಸನ್​ರೈಸರ್ಸ್​ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಕುತೂಹಲವನ್ನು ತಣಿಸುವಂತೆ ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್, ಅಂಬಾಟಿ ರಾಯುಡು, ಮೊಹಮ್ಮದ್ ಕೈಫ್, ಮ್ಯಾಥ್ಯೂ ಹೇಡನ್ ಮತ್ತು ಟಾಮ್ ಮೂಡಿ ಟಾಪ್-4 ತಂಡಗಳನ್ನು ಹೆಸರಿಸಿದ್ದಾರೆ.

    ಖಾಸಗಿ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗರು ಸಿಎಸ್​ಕೆ ವಿರುದ್ಧ ಆರ್​ಸಿಬಿ ಗೆಲ್ಲುವುದು ಕಷ್ಟಸಾಧ್ಯ. ಹೀಗಾಗಿ ಸಿಎಸ್​ಕೆ ಹಾಗೂ ಎಸ್​ಆರ್​ಎಚ್​ ಪ್ಲೇಆಫ್​ ಪ್ರವೇಶಿಸಲಿದೆ ಎಂದು ಐವರು ಮಾಜಿ ಆಟಗಾರರು ಅಭಿಪ್ರಾಯಪಟ್ಟಿದ್ದಾರೆ. ಅಂದರೆ ಕ್ರಿಕೆಟ್ ವಿಶ್ಲೇಷಕರ ಪ್ರಕಾರ ಆರ್​ಸಿಬಿ ಈ ಬಾರಿ ಪ್ಲೇಆಫ್ ಪ್ರವೇಶಿಸುವುದಿಲ್ಲ. ಇದಾಗ್ಯೂ ಅಂತಿಮ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೋಲುಣಿಸಿ ಆರ್​ಸಿಬಿ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಲಿದೆಯಾ ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts