More

    ಆರೋಗ್ಯವಂತ ವ್ಯಕ್ತಿಯು ಎಷ್ಟು ಬಾರಿ, ಎಷ್ಟು ಹೊತ್ತು ಮೂತ್ರ ವಿಸರ್ಜಿಸುತ್ತಾನೆ? ಇಲ್ಲಿದೆ ಉಪಯುಕ್ತ ಮಾಹಿತಿ…

    ಬದುಕಲು ಪ್ರತಿದಿನ ಆಹಾರ ಮತ್ತು ನೀರನ್ನು ತೆಗೆದುಕೊಳ್ಳುವುದು ಎಷ್ಟು ಮುಖ್ಯವೋ, ದೇಹದಿಂದ ತ್ಯಾಜ್ಯವನ್ನು ಹೊರಹಾಕುವುದು ಅಷ್ಟೇ ಮುಖ್ಯ. ನಾವು ದಿನನಿತ್ಯ ಸೇವಿಸುವ ನೀರು ಸೇರಿದಂತೆ ಇತರ ದ್ರವಗಳನ್ನು ದೇಹದ ವ್ಯವಸ್ಥೆಗಳು ಬೆವರು ಮತ್ತು ಮೂತ್ರದ ರೂಪದಲ್ಲಿ ಹೊರಹಾಕುತ್ತವೆ. ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯಕ್ಕೆ ಮೂತ್ರ ವಿಸರ್ಜನೆಯು ಬಹಳ ಮುಖ್ಯವಾದ ಪ್ರಕ್ರಿಯೆಯಾಗಿದೆ. ಆದರೆ, ಇದು ಸಹ ಸಾಮಾನ್ಯವಾಗಿರಬೇಕು. ಆಗಾಗ ಅಥವಾ ಅಪರೂಪದ ಮೂತ್ರ ವಿಸರ್ಜನೆಯು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

    ಕೆಲವರು ಹಗಲಿನಲ್ಲಿ ಆಗಾಗ ಮೂತ್ರ ವಿಸರ್ಜನೆ ಮಾಡುತ್ತಾರೆ. ಹೆಚ್ಚು ನೀರು ಕುಡಿದರೂ ಅಥವಾ ತಂಪು ವಾತಾವರಣವಿದ್ದರೂ ಹೆಚ್ಚು ಮೂತ್ರ ವಿಸರ್ಜನೆಯಾಗುವುದು ಸಹಜ. ಆದರೆ ನೀವು ಅಸಹಜವಾಗಿ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ಅದು ಯೋಚಿಸಬೇಕಾದ ವಿಷಯವಾಗಿದೆ. ಹೀಗಾಗಿ ಅದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು.

    ಆಗಾಗ ಮೂತ್ರ ವಿಸರ್ಜನೆ ಮಾಡುವುದು ವಿವಿಧ ದೀರ್ಘಕಾಲದ ಕಾಯಿಲೆಗಳೊಂದಿಗೆ ಸಂಬಂಧ ಹೊಂದಿರಬಹುದು. ಈ ಸ್ಥಿತಿಯು ದೀರ್ಘಕಾಲದವರೆಗೆ ಮುಂದುವರಿದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಅವರ ಸೂಚನೆಗಳ ಪ್ರಕಾರ ಪರೀಕ್ಷೆಗಳಿಗೆ ಒಳಗಾಗುವುದು ಉತ್ತಮ. ಒಬ್ಬ ವ್ಯಕ್ತಿಯು ಸಾಮಾನ್ಯವಾಗಿ ಎಷ್ಟು ಬಾರಿ ಮೂತ್ರ ವಿಸರ್ಜಿಸುತ್ತಾನೆ? ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

    * ವಾಸ್ತವವಾಗಿ ಒಬ್ಬ ವ್ಯಕ್ತಿಯು ಎರಡರಿಂದ ನಾಲ್ಕು ಲೀಟರ್ ನೀರು ಕುಡಿದರೆ, ಆತ ದಿನಕ್ಕೆ ಏಳು ಬಾರಿ ಮೂತ್ರ ವಿಸರ್ಜಿಸುತ್ತಾನೆ.
    * ನಾಲ್ಕಕ್ಕಿಂತ ಕಡಿಮೆ ಅಥವಾ 11ಕ್ಕಿಂತ ಹೆಚ್ಚು ಬಾರಿ ಮೂತ್ರ ವಿಸರ್ಜನೆ ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿ ಮಾಡುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ವಿಶೇಷವಾಗಿ ಮೂತ್ರದ ಬಣ್ಣ ಬದಲಾದರೆ, ವೈದ್ಯರನ್ನು ತಕ್ಷಣ ಸಂಪರ್ಕಿಸುವುದು ಉತ್ತಮ.
    * ಮೂತ್ರವನ್ನು ಯಾವುದೇ ಕಾರಣಕ್ಕೂ ದೀರ್ಘಕಾಲ ಹಿಡಿದಿಟ್ಟುಕೊಳ್ಳಬೇಡಿ. ಮೂತ್ರಕೋಶದ ಸೋಂಕು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು.
    * ಆರೋಗ್ಯವಂತ ವ್ಯಕ್ತಿಯ ಮೂತ್ರವು ಹಳದಿ ಅಥವಾ ಬಿಳಿ ಬಣ್ಣವನ್ನು ಮಾತ್ರ ಹೊಂದಿರುತ್ತದೆ. ಬಣ್ಣ ಬದಲಾದರೆ ಅಂದರೆ ಮೂತ್ರ ಕೆಂಪು ಬಣ್ಣದಲ್ಲಿದ್ದರೆ ಆ ವ್ಯಕ್ತಿಗೆ ಯಾವುದೋ ಕಾಯಿಲೆ ಇರುವುದು ಖಚಿತ ಎಂದರ್ಥ.
    * ಗರ್ಭಾವಸ್ಥೆಯಲ್ಲಿ ಹಾಗೂ ಮಧುಮೇಹ ರೋಗಿಗಳು ಹೆಚ್ಚು ಮೂತ್ರ ವಿಸರ್ಜಿಸುತ್ತಾರೆ.
    * ಜಂಕ್ ಫುಡ್ ತಿನ್ನುವಾಗ ಮೂತ್ರದ ವಾಸನೆ ಬದಲಾಗುತ್ತದೆ.
    * ಸಾಮಾನ್ಯವಾಗಿ ಮೂತ್ರ ವಿಸರ್ಜನೆಯ ಅವಧಿಯು ಏಳರಿಂದ ಹತ್ತು ಸೆಕೆಂಡುಗಳು ಮಾತ್ರ. ಮೂತ್ರ ವಿಸರ್ಜನೆಯ ಅವಧಿಯು ಹೆಚ್ಚಾದರೂ ಕೂಡ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

    ಚಿಕನ್​ ಲಿವರ್​ ತಿನ್ನುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ನೋಡಿ ಅಚ್ಚರಿಯ ಮಾಹಿತಿ

    ಹುರಿಗಡಲೆ-ಬೆಲ್ಲ ಒಟ್ಟಿಗೆ ತಿನ್ನುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಗೊತ್ತಾದ್ರೆ ನೀವು ಮಿಸ್​ ಮಾಡೋದಿಲ್ಲ!

    See also  ತಾಯಿ ಹಾಲಿನಲ್ಲಿದೆ ಪೌಷ್ಟಿಕಾಂಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts