ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸಿದ ಸಿನಿಮಾ ಒಟಿಟಿಗಿಲ್ಲ! 'ಆಡುಜೀವಿತಂ' ಡಿಜಿಟಲ್ ಹಕ್ಕುಗಳಿಗಿಲ್ಲವಾಯಿತೇ ಬೇಡಿಕೆ? ಹೀಗಿದೆ ವರದಿ

Untitled design - 2024-06-14T085800.386
Published on

ಆಂಧ್ರಪ್ರದೇಶ: ಮಾರ್ಚ್​ 28ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಗೊಂಡ ಪೃಥ್ವಿರಾಜ್ ಸುಕುಮಾರನ್ ಅಭಿನಯದ ಬ್ಲಾಕ್​ಬಸ್ಟರ್​ ಪ್ಯಾನ್ ಇಂಡಿಯಾ 'ಆಡುಜೀವಿತಂ' ಸಿನಿಮಾ, ಕೇವಲ ಬಾಕ್ಸ್ ಆಫೀಸ್​ನಲ್ಲಿ​ ಮಾತ್ರ ಅಬ್ಬರಿಸಿದ್ದಲ್ಲದೇ, ಚಿತ್ರಪ್ರೇಮಿಗಳಿಂದಲೂ ಉತ್ತಮ ರೆಸ್ಪಾನ್ಸ್​ ಪಡೆದುಕೊಂಡಿತು. ಇದು ಖುಷಿ ವಿಷಯವೇ ಆದರೂ ಚಿತ್ರವಿನ್ನು ಒಟಿಟಿ ಪ್ಲಾಟ್​ಫಾರ್ಮ್​ಗೆ ಲಗ್ಗೆಯಿಡದಿರುವುದು ಅನೇಕರಲ್ಲಿ ಭಾರೀ ಗೊಂದಲ ಹುಟ್ಟುಹಾಕಿದೆ.

ಹಲವು ಸಿನಿಮಾಗಳು ರಿಲೀಸ್​ಗೂ ಮುನ್ನವೇ ತನ್ನ ಡಿಜಿಟಲ್ ಹಕ್ಕುಗಳನ್ನು ಹೆಸರಾಂತ ಒಟಿಟಿ ಪ್ಲಾಟ್​ಫಾರ್ಮ್​ಗಳಿಗೆ ಮಾರಾಟ ಮಾಡಿಕೊಂಡಿರುತ್ತದೆ. ಆದರೆ, 'ಆಡುಜೀವಿತಂ' ಮಾತ್ರ ಇಲ್ಲಿಯವರೆಗೆ ಯಾವುದೇ ಒಟಿಟಿಗೂ ಪ್ರವೇಶ ಪಡೆದಿಲ್ಲ. ಚಿತ್ರದ ಡಿಜಿಟಲ್ ಹಕ್ಕುಗಳು ಇನ್ನೂ ಖರೀದಿಸಲಾಗಿಲ್ಲ ಎಂಬುದೇ ಸಿನಿಪ್ರೇಕ್ಷಕರಲ್ಲಿ ಕಾಡುತ್ತಿರುವ ದೊಡ್ಡ ಪ್ರಶ್ನೆ. ಈ ಹಿಂದೆ ಡಿಸ್ನಿ ಹಾಟ್​ಸ್ಟಾರ್​ ಸಿನಿಮಾದ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ ಎನ್ನಲಾಗಿತ್ತು. ಆದ್ರೆ, ಅಸಲಿಗೆ ಡಿಸ್ನಿ+ ಇದನ್ನು ಕೈಗೆತ್ತಿಕೊಂಡಿಲ್ಲ.

ಇನ್ನು ಇತ್ತೀಚಿನ ವರದಿ ಪ್ರಕಾರ, ಚಿತ್ರದ ಡಿಜಿಟಲ್ ಹಕ್ಕುಗಳನ್ನು ಯಾರು ಖರೀದಿಸಲು ಮುಂದಾಗಿಲ್ಲ ಎಂಬುದು ತಪ್ಪು ಮಾಹಿತಿ. ಅಸಲಿಗೆ ಚಿತ್ರತಂಡದ ನಿರ್ಧಾರವೇ ಸಿನಿಮಾ ಇನ್ನೂ ಒಟಿಟಿಗೆ ಲಗ್ಗೆಯಿಡದಿರಲು ಕಾರಣ ಎಂದು ಹೇಳಲಾಗಿದೆ. ನಿರ್ಮಾಪಕರು ಆಡುಜೀವಿತಂ ಚಿತ್ರವನ್ನು ಆಸ್ಕರ್​ಗೆ ನಾಮನಿರ್ದೇಶನ ಮಾಡಿಸಲು ಯೋಜನೆ ಹಾಕಿಕೊಂಡಿರುವ ಹಿನ್ನೆಲೆ ಸದ್ಯ ಡಿಜಿಟಲ್​ ಹಕ್ಕುಗಳನ್ನು ಇಂದಿಗೂ ಯಾವ ಒಟಿಟಿ ಪಾಲಾಗಲು ಬಿಟ್ಟಿಲ್ಲ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net