ಜೀವನದಲ್ಲಿ ಇದೆಲ್ಲಾ… ಕಡೆಗೂ ಛೀಮಾರಿ, ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ ಉಪನಾಯಕ ಹಾರ್ದಿಕ್ ಪಾಂಡ್ಯ!

Untitled-design-43
Published on

ನವದೆಹಲಿ: ಪ್ರಸಕ್ತ ಟಿ20 ವಿಶ್ವಕಪ್​ ಪಂದ್ಯಾವಳಿಗಳು ಅಮೆರಿಕಾ ಮತ್ತು ವೆಸ್ಟ್​ ಇಂಡೀಸ್​ನಲ್ಲಿ ನಡೆಯುತ್ತಿದ್ದು, ಜೂನ್.05 ಮತ್ತು 09ರಂದು ನಡೆಯಲಿರುವ ಐರ್ಲೆಂಡ್ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯಗಳನ್ನು ನೋಡಲು ಟೀಂ ಇಂಡಿಯಾದ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಟಿ20 ತಂಡದ ಉಪನಾಯಕ ಹಾರ್ದಿಕ್​ ಪಾಂಡ್ಯ ಮಾತ್ರ ಕ್ರಿಕೆಟ್​ಗಿಂತ ಬೇರೆ ಸುದ್ದಿಗಳಿಂದಲೇ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದು, ಕಡೆಗೂ ಮೌನಕ್ಕೆ ಶರಣಾಗಿದ್ದಾರೆ.

ಐಪಿಎಲ್ 2024ರ 17ನೇ ಆವೃತ್ತಿಯಲ್ಲಿ ರೋಹಿತ್ ಶರ್ಮಾರನ್ನು ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ಕೆಳಗಿಳಿಸಿ, ತಾವು ಆ ಸ್ಥಾನವನ್ನು ವಹಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಕಂಡಿದ್ದೆಲ್ಲಾ ಸೋಲು! ಎಂಐ ಕ್ಯಾಪ್ಟನ್ಸಿ ಕೈಗೆತ್ತಿಕೊಂಡ ಮೊದಲ ದಿನದಿಂದಲೂ ತಮ್ಮ ಟೀಮ್​ನಲ್ಲಿ ಯಾವುದು ಸರಿಯಿರಲಿಲ್ಲ. ಮನಸ್ತಾಪ, ಗೊಂದಲ, ಛೀಮಾರಿಗಳ ನಡುವೆಯೂ ಮೈದಾನಕ್ಕೆ ಬಂದು ಆಟವಾಡಿದ ಪಾಂಡ್ಯಗೆ ಸಿಕ್ಕಿದ್ದು ಮಾತ್ರ ಹೀನಾಯ ಸೋಲು.

ಒಂದೆಡೆ ಪಂದ್ಯಗಳಲ್ಲಿ ಹೀನಾಯವಾಗಿ ಸೋಲನ್ನು ಕಂಡರೆ, ಮತ್ತೊಂದೆಡೆ ರೋಹಿತ್​ರಿಂದ ನಾಯಕತ್ವವನ್ನು ಕಸಿದುಕೊಂಡಿದ್ದಕ್ಕೆ ಸ್ಟೇಡಿಯಂ ತುಂಬ ಕ್ರಿಕೆಟ್ ಅಭಿಮಾನಿಗಳಿಂದ ವ್ಯಾಪಕ ಟೀಕೆ, ಛೀಮಾರಿಗಳು. ಇದರಿಂದ ತೀವ್ರ ಕಂಗೆಟ್ಟಿದ್ದ ಹಾರ್ದಿಕ್​, ಎಲ್ಲವನ್ನೂ ಸಹಿಸಿಕೊಂಡು, ಯಾವ ಮಾಧ್ಯಮದ ಮುಂದೆಯೂ ತಮ್ಮ ವಿರುದ್ಧ ಕೇಳಿಬರುತ್ತಿರುವ ಅಪಸ್ವರ ಕುರಿತು ಪ್ರತಿಕ್ರಿಯೆ ನೀಡಿರಲಿಲ್ಲ. ಆದ್ರೆ, ಇದೀಗ ಖಡಕ್ ಆಗಿ ಉತ್ತರಿಸಿದ್ದಾರೆ.

"ಅಂತಿಮವಾಗಿ, ನಾವು ಸದಾ ಯುದ್ಧದಲ್ಲಿ ಉಳಿಯಬೇಕು ಎಂದೇ ಬಯಸುತ್ತೇನೆ. ಕೆಲವೊಮ್ಮೆ, ಜೀವನ ನಿಮ್ಮನ್ನು ಅತ್ಯಂತ ಕಷ್ಟಕರವಾದ ಪರಿಸ್ಥಿತಿಯಲ್ಲಿ ಇರಿಸುತ್ತದೆ. ನಾನು ನಂಬುವ ವಿಷಯ ಏನಂದರೆ ಇಂತಹ ವಿಷಯಗಳಿಗೆಲ್ಲಾ ನೀವು ನಿಮ್ಮ ನೆಚ್ಚಿನ ಕ್ರೀಡೆ ಅಥವಾ ಕ್ಷೇತ್ರವನ್ನು ಬಿಟ್ಟರೆ, ಮುಂದೆ ಏನ್ನನ್ನೂ ಪಡೆಯಲು ಸಾಧ್ಯವಿಲ್ಲ" ಎಂದು ಮುಕ್ತವಾಗಿ ಮಾತನಾಡಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net