ಇಡೀ ದೇಶದ ಚಿತ್ತ ಚುನಾವಣೆಯತ್ತ, ಆದ್ರೆ ಸುಕೇಶ್​ಗೆ ಗರ್ಲ್​​​​ಫ್ರೆಂಡ್​​​ನದ್ದೇ ಚಿಂತೆ; ಜೈಲಿಂದಲೇ ಮಿಸ್ ಯೂ ಬೇಬಿ ಎಂದು ಪತ್ರ…!

s final
Published on

ಬಹುಕೋಟಿ ವಂಚನೆಯ ಆರೋಪಿ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿ ಇದ್ದುಕೊಂಡೇ ಗೆಳತಿ, ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಪತ್ರ ಬರೆಯುತ್ತಲೇ ಇರುತ್ತಾನೆ. ಪ್ರೇಮಿಗಳ ದಿನಕ್ಕೊಂದು ಪತ್ರ ಬರೆದಿದ್ದ ಸುಕೇಶ್ ಆನಂತರ ಜಾಕ್ವೆಲಿನ್ ಹುಟ್ಟು ಹಬ್ಬಕ್ಕೂ ಒಂದು ಪತ್ರ ಕಳುಹಿಸಿದ್ದ.

ಇಡೀ ದೇಶವೇ ಚುನಾವಣೆ ಫಲಿತಾಂಶದ ಚಿಂತೆಯಲ್ಲಿದ್ದರೆ ಸೆರೆ ಮನೆಯಲ್ಲಿಯೂ ಸುಕೇಶ್​ಗೆ ಲವರ್ ಚಿಂತೆ ಎಂದಿದ್ದಾರೆ ನೆಟ್ಟಿಗರು. ಈ ಹೊಸ ಪತ್ರದಲ್ಲಿ ಸುಕೇಶ್ ಬಾಲಿವುಡ್ ನಟಿಯನ್ನು ಬೇಬಿ ಎಂದು ಪ್ರೀತಿಯಿಂದ ಕರೆದಿದ್ದಾರೆ. ನಾನು ಅವಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

ಅವರು ಜಾಕ್ಲಿನ್ ನಂತರ ಒಂದು ಸ್ಟಾರ್ ಎಂದಿದ್ದಾರೆ. ಅವರ ಕೇನ್ಸ್ 2024 ರ ಲುಕ್ ಅನ್ನು ಕೂಡಾ ಸುಕೇಶ್ ಹೊಗಳಿದ್ದಾರೆ.


ಮೈ ಬೇಬಿ ಗರ್ಲ್, ಜಾಕ್ಲಿನ್, ಬೇಬಿ ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಸೂಪರ್ ಕ್ರೇಜಿ, ಕ್ರೇಜಿಯರ್ ನಿನ್ನೊಂದಿಗೆ ಪ್ರೀತಿಯಲ್ಲಿ ಬೀಳುತ್ತಿದ್ದೇನೆ. ಬೇಬಿ ಕಾನ್​​ನಲ್ಲಿ ನೀನು ಶೋನಲ್ಲಿ ಮಿಂಚಿದ್ದಿ. ಗೋಲ್ಡ್‌ನಲ್ಲಿ ನಿಮ್ಮ ಲುಕ್ ಸೂಪರ್ ಕ್ಲಾಸಿ ತುಂಬಾ ಮೋಹಕವಾಗಿತ್ತು. ಫೋಟೋಶೂಟ್ ಚಿತ್ರಗಳ ಮೂಲಕ, ನೀವು ಮತ್ತೆ ನನ್ನ ಹೃದಯವನ್ನು ಕದ್ದಿದ್ದೀರಿ, ನನ್ನ ಕಪ್ ಕೇಕ್ ಎಂದು ಅವರು ಬರೆದಿದ್ದಾರೆ.

ಜಾಕ್ವೆಲಿನ್ ಗೆ ಪ್ರಾಣಿಗಳ ಮೇಲೆ ಅಪಾರ ಪ್ರೀತಿಯಂತೆ. ಅದರಲ್ಲೂ ನಾಯಿ, ಬೆಕ್ಕು, ಕುದುರೆಗಳು ಅಂದರೆ ಪ್ರಾಣವಂತೆ. ತನ್ನ ಗೆಳತಿಯ ಪ್ರಾಣಿ ಮೇಲಿನ ಪ್ರೀತಿಗಾಗಿ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸುವುದಾಗಿ ಸುಖೇಶ್​​ ಈ ಹಿಂದೆ ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net