More

  ಮುಗ್ಧರಾಗಿದ್ದ ದರ್ಶನ್ ಹೀಗಾಗಲು ಅದೊಂದೆ ಕಾರಣ! ದಚ್ಚು ಮಾಡಿದ ಈ ತಪ್ಪುಗಳಿಂದಲೇ ಹೀನಾಯ ಸ್ಥಿತಿ ಬಂತು

  ಬೆಂಗಳೂರು: ಅಭಿಮಾನಿಗಳ ಪಾಲಿನ ಆರಾಧ್ಯ ದೈವವಾಗಿದ್ದ ಚಾಲೆಂಜಿಂಗ್​ ಸ್ಟಾರ್ ದರ್ಶನ್, ಕೊಲೆ ಪ್ರಕರಣದಲ್ಲಿ ಬಂಧನವಾಗಿರುವುದನ್ನ ಅರಗಿಸಿಕೊಳ್ಳೋದಕ್ಕೆ ಅವರ ಅಭಿಮಾನಿಗಳಿಂದ ಸಾಧ್ಯವಾಗುತ್ತಿಲ್ಲ.​ ದರ್ಶನ್​ ಕುಟುಂಬ, ಚಿತ್ರರಂಗ ಮಾತ್ರವಲ್ಲ ಇಡೀ ರಾಜ್ಯದ ಜನತೆ ದಿಗ್ಭ್ರಮೆಗೆ ಒಳಗಾಗಿದ್ದಾರೆ. ದರ್ಶನ್​ ಈ ರೀತಿ ಅಂತ ಗೊತ್ತಿರಲಿಲ್ಲ ಎಂದು ಟೀಕಿಸುತ್ತಿದ್ದಾರೆ. ಬೆಳ್ಳಿಪರದೆಯ ಮೇಲೆ ನಾಯಕನಂತೆ ಮೆರೆಯುತ್ತಿದ್ದ ಚಕ್ರವರ್ತಿ, ಇಂದು ಡೆವಿಲ್​ ಆಗಿ ಜನರ ಮುಂದೆ ನಿಂತಿದ್ದಾರೆ. ಆರಂಭದಲ್ಲಿ ತುಂಬಾ ಮುಗ್ಧರಾಗಿದ್ದ ದರ್ಶನ್​ ಈ ರೀತಿ ಬದಲಾಗಿದ್ಹೇಗೆ? ಅದಕ್ಕೆ ಕಾರಣ ಇಲ್ಲಿದೆ ನೋಡಿದೆ.

  ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಮತ್ತು ಗೆಳತಿ ಪವಿತ್ರಾ ಗೌಡ ಅರೆಸ್ಟ್​ ಆಗಿರುವ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ದರ್ಶನ್​ ಕೈವಾಡ ಇದೆ. ದರ್ಶನ್​ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್​ರನ್ನು ಬಂಧಿಸಲಾಗಿದೆ. ಅಲ್ಲದೆ, ಕೆಲ ಬಲವಾದ ಸಾಕ್ಷ್ಯಗಳು ಇವೆ ಎನ್ನಲಾಗುತ್ತಿದೆ. ಸದ್ಯ ಎಲ್ಲ ಆರೋಪಿಗಳು ಪೊಲೀಸ್​ ಕಸ್ಟಡಿಯಲ್ಲಿದ್ದು, ವಿಚಾರಣೆ ನಡೆಯುತ್ತಿದೆ.

  ಸಿನಿ ಇಂಡಸ್ಟ್ರಿಗೆ ಕಾಲಿಟ್ಟಾಗ ಮುಗ್ಧನಂತಿದ್ದ ದರ್ಶನ್​ ಈ ರೀತಿ ಬದಲಾಗಿದ್ದು ಹೇಗೆ? ಎಲ್ಲರಿಗೂ ಆದರ್ಶವಾಗಬೇಕಿದ್ದ ದರ್ಶನ್​ ಇಂದು ಕೆಟ್ಟ ಉದಾಹರಣೆಯಾಗಿ ನಿಂತಿದ್ದಾರೆ. ಆದರೆ, ಆರಂಭದಲ್ಲಿ ದಿನಗಳಲ್ಲಿ ದರ್ಶನ್​ ಈ ರೀತಿ ಇರಲಿಲ್ಲ. ತುಂಬಾ ಕಷ್ಟಪಟ್ಟು ಮೇಲೆ ಬಂದಿದ್ದರಿಂದ ಅವರ ಮೇಲೆ ಎಲ್ಲರಿಗೂ ಅಪಾರ ಗೌರವ ಮತ್ತು ಪ್ರೀತಿ ಇತ್ತು. ಅವರ ಹಳೆಯ ಸಂದರ್ಶನಗಳನ್ನು ನೋಡಿದರೆ ಎಷ್ಟು ಮುಗ್ಧ ಎಂದು ಗೊತ್ತಾಗುತ್ತದೆ. ಅಲ್ಲದೆ, ಬಹಳ ನಯ-ವಿನಯದಿಂದ ಮಾತನಾಡುತ್ತಿದ್ದರು. ಯಾವುದೇ ಅಹಂ ಭಾವ ಇರಲಿಲ್ಲ. ಹೀಗಾಗಿ ಯಶಸ್ಸು ದರ್ಶನ್ ಅವರನ್ನು ಹುಡಿಕೊಂಡು ಬಂದಿತು ಮತ್ತು ಸಾಕಷ್ಟು ಅವಕಾಶಗಳೊಂದಿಗೆ ಸ್ಟಾರ್​ ನಟನೆಂಬ ಪಟ್ಟವನ್ನು ಅಲಂಕರಿಸಿದರು.

  ಎಲ್ಲಿ ತಪ್ಪಾಯಿತು?
  ದರ್ಶನ್​ ಅವರಿಗೆ ತುಂಬಾ ಖ್ಯಾತಿಯನ್ನು ಗಳಿಸಿಕೊಟ್ಟಂತಹ ಸಿನಿಮಾ ಅಂದರೆ ಅದು ಕಲಾಸಿಪಾಳ್ಯ. ದರ್ಶನ್​ ಅವರನ್ನು ಲವ್​ ಮ್ಯಾರೇಜ್​ ಎಂಬುದು ಎಲ್ಲರಿಗೂ ತಿಳಿದಿದೆ. ಆರಂಭದಲ್ಲಿ ಪತ್ನಿಯನ್ನು ತುಂಬಾ ಇಷ್ಟಪಡುತ್ತಿದ್ದ ದಚ್ಚು, ಸಿನಿಮಾಗಳ ಯಶಸ್ಸಿನ ಜತೆಯಲ್ಲೇ ರಿಯಲ್​ ಎಸ್ಟೇಟ್​ ಬಿಜಿನೆಸ್​ಗೆ ಕೈಹಾಕಿದ್ದರು ಎನ್ನಲಾಗಿದೆ. ಆರಂಭದಲ್ಲಿ ಕಷ್ಟಗಳನ್ನು ನೋಡಿದ್ದ ದರ್ಶನ್​ ಪ್ರತಿ ಹಂತದಲ್ಲೂ ಅದನ್ನು ನೆನಪು ಮಾಡಿಕೊಳ್ಳಬೇಕಿತ್ತು. ಆದರೆ, ಅದನ್ನು ಬಿಟ್ಟು ಹಣ ಅಂತಸ್ತು ಬರುತ್ತಿದ್ದಂತೆ ಬದಲಾಗ ತೊಡಗಿದರು. ಸ್ಟಾರ್​ಗಿರಿ ಇಲ್ಲದಿದ್ದಾಗಲೂ ಕೈಹಿಡಿದಿದ್ದ ಪತ್ನಿ ವಿಜಯಲಕ್ಷ್ಮೀ ಜತೆ ದರ್ಶನ್​ಗೆ ಭಿನ್ನಾಭಿಪ್ರಾಯಗಳು ಉಂಟಾದವು. ಒಮ್ಮೆ ನಟಿಯೊಬ್ಬರ ಜತೆ ದರ್ಶನ್​ ಹೆಸರು ತಳುಕು ಹಾಕಿಕೊಂಡಾಗ ದರ್ಶನ್​ ಸಂಸಾರದಲ್ಲಿ ಮೊದಲ ಬಾರಿಗೆ ಬಿರುಗಾಳಿ ಎಬ್ಬಿತು. ಇದೇ ಪ್ರಕರಣದಲ್ಲಿ ಪತ್ನಿಯ ಮೇಲೆ ಹಲ್ಲೆ ಮಾಡಿದ್ದರು. ಪತ್ನಿ ನೀಡಿದ ದೂರಿನ ಮೇರೆಗೆ 2011ರಲ್ಲಿ 28 ದಿನಗಳ ಕಾಲ ಜೈಲಿನಲ್ಲಿದ್ದ ದರ್ಶನ್​, ದೂರು ಹಿಂಪಡೆದಿದ್ದಕ್ಕೆ ಬಿಡುಗಡೆಯಾಗಿದ್ದರು. ಈ ಘಟನೆ ದರ್ಶನ್​ ಜೀವನದಲ್ಲಿ ಇಂದಿಗೂ ಕಪ್ಪು ಚುಕ್ಕೆಯಾಗಿ ಉಳಿದುಕೊಂಡಿದೆ. ಅಲ್ಲದೆ, ಈ ಘಟನೆಯ ಬಳಿಕ ಚಿತ್ರರಂಗದಲ್ಲಿ ಕೆಲ ಸ್ನೇಹಿತರನ್ನು ದರ್ಶನ್​ ಕಳೆದುಕೊಂಡರು.

  See also  'ಏಕ್​ ಲವ್​ ಯಾ' ತಂಡದಿಂದ ಬಂತು ಗಣಪತಿ ಹಬ್ಬದ ಗಿಫ್ಟ್​!

  ಕಷ್ಟ ಕಾಲದಲ್ಲಿ ದರ್ಶನ್​ಗೆ ಸಾರಥಿ ಸಿನಿಮಾ ಕೈಹಿಡಿಯಿತು. ಇದಾದ ಬಳಿಕವೂ ದರ್ಶನ್​ ಇಮೇಜ್​ ಇನ್ನಷ್ಟು ಹೆಚ್ಚಾಯಿತು. ಮತ್ತೆ ಒಳ್ಳೆಯ ಅವಕಾಶಗಳು ಬಂದವು. ಅಲ್ಲದೆ, ರಾಜಕೀಯ ವ್ಯಕ್ತಿಗಳ ಜತೆಗಿನ ನಂಟು ಸಹ ಬೆಳೆಯಿತು. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಕೆಲ ರಾಜಕಾರಣಿಗಳ ಪ್ರಚಾರ ಮಾಡಲು ಆರಂಭಿಸಿದರು. ಹೀಗೆ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್​ ನಟನಾಗಿ ಬೆಳೆಯಲು ಆರಂಭಿಸಿದರು. ಆದರೂ ದರ್ಶನ್​ ವಿವಾದಗಳಿಂದ ದೂರ ಉಳಿಯಲಿಲ್ಲ. ಆದರೆ, ಆ ಕಾಲದಲ್ಲಿ ಚಿತ್ರರಂಗದಲ್ಲಿ ದೊಡ್ಡಣ್ಣನಂತಿದ್ದ ರೆಬೆಲ್​ ಸ್ಟಾರ್​ ಅಂಬರೀಷ್​ ಬೈದು ಬುದ್ಧಿ ಹೇಳುತ್ತಿದ್ದರು ಮತ್ತು ದರ್ಶನ್​ರನ್ನು ಸರಿ ದಾರಿಗೆ ತರುತ್ತಿದ್ದರು. ಆದರೆ, ಇಂದು ಹೇಳುವವರು-ಕೇಳುವವರು ಯಾರೂ ಇಲ್ಲದಂತಾಗಿದ್ದಾರೆ. ಅಮ್ಮ, ಸಹೋದರ ಸೇರಿದಂತೆ ಇಡೀ ಕುಟುಂಬವೇ ದರ್ಶನ್​ರಿಂದ ಅಂತರ ಕಾಯ್ದುಕೊಂಡಿದೆ. ಒಂದು ರೀತಿಯಲ್ಲಿ ಆನೆ ನಡೆದಿದ್ದೇ ದಾರಿ ಎನ್ನುವಂತಾಗಿದೆ.

  ದರ್ಶನ್​ ಕೆಡಲು ಇದೇ ಕಾರಣ
  ಇನ್ನು ಪವಿತ್ರಾ ಗೌಡ ದರ್ಶನ್​ ಬಾಳಲ್ಲಿ ಬಂದ ಬಳಿಕ ಬಿರುಗಾಳಿಯೇ ಎಬ್ಬಿತು. ಪತ್ನಿ ಮತ್ತು ಮಕ್ಕಳಿಂದ ದರ್ಶನ್​ ದೂರಾದರು. ಕುಟುಂಬವೂ ಕೂಡ ಜತೆಗಿಲ್ಲ. ತಮ್ಮ ಸುತ್ತ ಇದ್ದಂತಹ ಒಳ್ಳೆಯ ಸ್ನೇಹಿತರನ್ನು ತಮ್ಮ ನಡೆಯಿಂದಲೇ ದರ್ಶನ್​ ದೂರ ಮಾಡಿಕೊಂಡರು. ಇದೆಲ್ಲವನ್ನು ಯೋಚಿಸದ ದರ್ಶನ್​ ತನ್ನ ಸುತ್ತ ಕೆಟ್ಟ ವ್ಯಕ್ತಿಗಳನ್ನು ಸೇರಿಸಿಕೊಂಡರು. ದರ್ಶನ್​ ಜತೆ ಸೇರಿದವರೆಲ್ಲ ಅವರಿಗೆ ಬುದ್ದಿ ಹೇಳುವ ಬದಲು ಏನೇ ಮಾಡಿದರೂ ನಡೆಯುತ್ತದೆ ಎನ್ನುವ ಅಹಂನಿಂದಲೇ ದರ್ಶನ್ ದಾರಿ ತಪ್ಪಿದರು ಎಂದು ಹೇಳಲಾಗುತ್ತಿದೆ. ಅದಕ್ಕೆ ಹೇಳೋದು ಸಜ್ಜನರ ಸಂಗ ಹೆಜ್ಜೇನ ಸವಿದಂತೆ ದುರ್ಜನರ ಸಂಗ ಬಚ್ಚಲ ಕೊಚ್ಚೆಯಂತಿಹುದು ಸರ್ವಜ್ಞ ಎಂದರು. ಇನ್ನು ಕುಡಿತದ ಚಟವು ಕೂಡ ದರ್ಶನ್​ರನ್ನು ಇಂದು ಇಂತಹ ಸ್ಥಿತಿಗೆ ತಂದು ನಿಲ್ಲಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕಟ್ಟಿಕೊಂಡ ಪತ್ನಿಯನ್ನು ಬಿಟ್ಟು ಪರಸ್ತ್ರಿ ಸಹವಾಸ ಮಾಡಿದ್ದೇ ದರ್ಶನ್​ನ ಇಂದಿನ ಹೀನಾಯ ಸ್ಥಿತಿಗೆ ಕಾರಣ ಎಂದು ಹೇಳಲಾಗುತ್ತಿದೆ.

  See also  ಯಾರೋ ಬಂದಿದ್ದಾರೆ ನೋಡು ರಚ್ಚು: ತಾಯಿ ಮಾತು ಕೇಳಿ ಮನೆ ಬಾಗಿಲು ತೆರೆದ ರಚಿತಾಗೆ ಕಾದಿತ್ತು ಸರ್ಪ್ರೈಸ್!

  ಅದೇನೆ ಇರಲಿ ಸಾಕಷ್ಟು ತಪ್ಪು ಮಾಡಿದಾಗಲೂ ತಿದ್ದುಕೊಳ್ಳದ ದರ್ಶನ್​ ಇಂದು ಕೊಲೆ ಪ್ರಕರಣದಲ್ಲಿ ಬಂಧನವಾಗಿ ಜೈಲುಪಾಲಾಗಿದ್ದಾರೆ. ಇಷ್ಟು ದಿನ ಗತ್ತುನಿಂದ ತಿರುಗಾಡುತ್ತಿದ್ದ ದರ್ಶನ್​ ಇಂದು ಕೈಕಟ್ಟಿ ನಿಂತುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ಮುಖ್ಯವಾಗಿ ಹೇಳುವುದೆಂದರೆ ಒಬ್ಬರ ಪ್ರಾಣ ತೆಗಿಯುವ ಹಕ್ಕು ಯಾರಿಗೂ ಇಲ್ಲ ಎಂಬುದನ್ನು ನೆನಪಿನಲ್ಲಿಡಬೇಕು.

  ಏನಿದು ಪ್ರಕರಣ?
  ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಮತ್ತು ಗೆಳತಿ ಪವಿತ್ರಾ ಗೌಡ ಅರೆಸ್ಟ್​ ಆಗಿರುವ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ದರ್ಶನ್​ ಕೈವಾಡ ಇದೆ. ದರ್ಶನ್​ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್​ರನ್ನು ಬಂಧಿಸಲಾಗಿದೆ. ಫೆಬ್ರವರಿ 27ರಿಂದ ದರ್ಶನ್​ ಗೆಳತಿ ಪವಿತ್ರಾ ಗೌಡಗೆ ರೇಣುಕಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್‌ ಬ್ಲಾಕ್‌ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್​ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್‌ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್​ಗೆ ಹೇಳಿದ್ದರು. ಈ ವಿಚಾರ ದರ್ಶನ್​ಗೆ ತಿಳಿದಿದೆ. ರೇಣುಕ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್​ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್​, ಹಲ್ಲೆಯಿಂದ ರೇಣುಕಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.

  See also  ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರ ಪ್ರವೇಶ; ಜನವರಿ 17ರಂದು ವಕೀಲರ ಸಭೆ ಕರೆಯಲು ಸುಪ್ರೀಂಕೋರ್ಟ್​ ಸೂಚನೆ

  ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ. ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್​ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ.

  ದರ್ಶನ್​ ರಕ್ಷಿಸಲು ಸಿಎಂ ಮೇಲೆ ಒತ್ತಡ ಹಾಕಿದ್ರಾ ಪ್ರಭಾವಿಗಳು? ವೈದ್ಯರಿಗೂ 1 ಕೋಟಿ ಆಫರ್? ಸ್ಪೋಟಕ ಸಂಗತಿ ಬಯಲು

  ಚಟ್ನಿಯಲ್ಲಿ ಕೂದಲು ಪತ್ತೆ! ಹೋಟೆಲ್​ ಮ್ಯಾನೇಜರ್​ಗೆ ಕಾದಿತ್ತು ಶಾಕ್, ಇದು ಸೋಶಿಯಲ್​ ಮೀಡಿಯಾ ಪವರ್​​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts