More

  ಕಿರ್ಗಿಸ್ತಾನ್​ನ ಜಲಪಾತದಲ್ಲಿ ಸಿಲುಕಿ ಭಾರತೀಯ ವಿದ್ಯಾರ್ಥಿ ಸಾವು!

  ನವದೆಹಲಿ: ಆಂಧ್ರಪ್ರದೇಶದ ಅನಕಾಪಲ್ಲಿ ಮೂಲದ ವೈದ್ಯಕೀಯ ವಿದ್ಯಾರ್ಥಿ 21 ವರ್ಷದ ದಾಸರಿ ಚಂದು ಕಿರ್ಗಿಸ್ತಾನ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ದೃಢಪಡಿಸಿದೆ.

  ಇದನ್ನೂ ಓದಿ: ಅಬಕಾರಿ ನೀತಿ ಹಗರಣ: ಕೇಜ್ರಿವಾಲ್‌, ಕವಿತಾಗೆ ನ್ಯಾಯಾಂಗ ಬಂಧನ! ಮೇ 7ಕ್ಕೆ ವಿಚಾರಣೆ

  ಮಧ್ಯ ಏಷ್ಯಾ ರಾಷ್ಟ್ರದವಾದ ಕಿರ್ಗಿಸ್ತಾನ್‌ದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ದಾಸರಿ ಚಂದು ಎರಡನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದರು. ನಾಲ್ವರು ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಿದ್ದಾಗ ದುರಂತ ಅಂತ್ಯ ಕಂಡಿದ್ದಾರೆ.

  ಭಾನುವಾರ ಇತರ ನಾಲ್ಕು ಗೆಳೆಯರೊಂದಿಗೆ ಜಲಪಾತಕ್ಕೆ ಭೇಟಿ ನೀಡಿದ್ದರು. ಗೆಳೆಯರು ಸಹ ಆಂಧ್ರಪ್ರದೇಶದವರಾಗಿದ್ದರು. ಈ ವೇಳೆ ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ನಂತರ ಚಂದು ಮೃತದೇಹವನ್ನು ಸ್ಥಳದಿಂದ ಹೊರತೆಗೆಯಲಾಯಿತು. ಚಂದು ಹಲ್ವಾ ಮಾರಾಟಗಾರರಾದ ಭೀಮರಾಜು ಅವರ ಎರಡನೇ ಮಗ.

  ಚಂದು ಅವರ ಕುಟುಂಬವು ತಮ್ಮ ಮಗನ ಅವಶೇಷಗಳನ್ನು ಸ್ವದೇಶಕ್ಕೆ ತರಲು ಸಹಾಯಕ್ಕಾಗಿ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರನ್ನು ಸಂಪರ್ಕಿಸಿದೆ. ರೆಡ್ಡಿ ಅವರು ಕಿರ್ಗಿಸ್ತಾನ್ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಚಂದು ಮೃತದೇಹವನ್ನು ಭಾರತಕ್ಕೆ ತರುವ ಪ್ರಕ್ರಿಯೆ ನಡೆಯುತ್ತಿದೆ.

  ಭಾರತಕ್ಕೆ ಮೃತದೇಹ ತರಲು ಪ್ರಯತ್ನ: ಮೃತ ಚಂದು ಅವರ ಕುಟುಂಬವು ಅಂತ್ಯ ಸಂಸ್ಕಾರಕ್ಕಾಗಿ ಮೃತದೇಹವನ್ನು ಕೋರಿ ಅನಕಾಪಲ್ಲಿ ಸಂಸದರಾದ ಬಿ.ವೆಂಕಟ ಸತ್ಯವತಿ ಅವರು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ಸಚಿವ ಜಿ.ಕಿಶನ್ ರೆಡ್ಡಿ ಅವರ ಗಮನಕ್ಕೆ ತಂದಿದ್ದಾರೆ. ಕಿಶನ್ ರೆಡ್ಡಿ ಅವರು ಕಿರ್ಗಿಸ್ತಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಮೃತ ವಿದ್ಯಾರ್ಥಿಯ ಕುಟುಂಬ ಸದಸ್ಯರಿಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ.

  ಹುಬ್ಬಳ್ಳಿಯಲ್ಲಿ ಹಿಂದೂ ಯವತಿಯ ಮೇಲೆ ಅನ್ಯಕೋಮಿನ ಯುವಕನಿಂದ ಹಲ್ಲೆ; ಆರೋಪಿ ವಶಕ್ಕೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts