

ಹೈದರಾಬಾದ್: ಕ್ಯಾಪ್ಟನ್ ಮಿಲ್ಲರ್ ಹಿಟ್ ಬಳಿಕ ಕಾಲಿವುಡ್ ನಟ ಧನುಷ್, ರಶ್ಮಿಕಾ ಮಂದಣ್ಣ ನಟನೆಯ 'ಕುಬೇರ' ಸಿನಿಮಾದ ಕಿಂಗ್ ನಾಗಾರ್ಜುನ್ ಅವರ ಫಸ್ಟ್ ಲುಕ್ ಅನಾವರಣ ಇದೀಗ ಬಿಡುಗಡೆ ಆಗಿದೆ.
ಇಂದು (ಗುರುವಾರ) ಹೈದರಾಬಾದ್ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ ಪಂದ್ಯದ ವೇಳೆ ನಾಗಾರ್ಜುನ ಅವರು ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಿದ್ದಾರೆ.
ಶ್ರೀ ವೆಂಕಟೇಶ್ವರ ಸಿನಿಮಾಸ್ ಎಲ್ಎಲ್ಪಿ ಮತ್ತು ಅಮಿಗೋಲ್ ಕ್ರಿಯೇಷನ್ಸ್ ಸಂಸ್ಥೆಯ ಮೂಲಕ ಕುಬೇರ ಸಿನಿಮಾ ನಿರ್ಮಾಣ ಮಾಡಲಾಗಿದ್ದು, ಈ ಸಿನಿಮಾಗೆ ಮಾಸ್ ಮ್ಯೂಸಿಕ್ ಡೈರೆಕ್ಟರ್ ದೇವಿ ಶ್ರೀ ಪ್ರಸಾದ್ ಅವರು ಸಂಗೀತ ಸಂಯೋಜಿಸುತ್ತಿದ್ದಾರೆ. ಶೇಖರ್ ಕಮ್ಮಲ ಧನುಷ್ ಅವರೊಂದಿಗೆ ಮೊದಲ ಬಾರಿಗೆ ಸಿನಿಮಾ ಮಾಡುತ್ತಿದ್ದಾರೆ.
ಧನುಷ್ ಮತ್ತು ರಶ್ಮಿಕಾ ಮೊದಲ ಬಾರಿಗೆ ಜೋಡಿಯಾಗಿ ನಟಿಸಿದ್ದಾರೆ. ರಶ್ಮಿಕಾ ಮಧ್ಯಮ ಕುಟುಂಬದ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಅವರ ಲುಕ್ ಕೂಡ ಸಿಂಪಲ್ ಆಗಿದೆ. ತೆಲುಗಿನ ನಟ ಅಕ್ಕಿನೇನಿ ನಾಗಾರ್ಜುನ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಕುಬೇರ ಸಿನಿಮಾದ ಮೂಲಕ ಧನುಷ್, ರಶ್ಮಿಕಾ, ನಾಗಾರ್ಜುನ ಈ ಮೂರನ್ನು ಒಟ್ಟಿಗೆ ಫ್ಯಾನ್ಸ್ ಕಣ್ತುಂಬಿಕೊಳ್ಳಬಹುದಾಗಿದೆ. ಮುಂಬೈನಲ್ಲಿ ‘ಕುಬೇರ’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಗಲಿದೆ.