More

    ವಿಕಲಾಂಗರಿಗೆ 13 ಸ್ಕೂಟರ್​ ಗಿಫ್ಟ್​! ಕೊಟ್ಟ ಮಾತು ಉಳಿಸಿಕೊಂಡ ಲಾರೆನ್ಸ್, ಮನೆ ಕಟ್ಟಿಸಿಕೊಡುವುದಾಗಿಯೂ ಭರವಸೆ​

    ಚೆನ್ನೈ: ಕಾಂಚನ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ನಟ ರಾಘವ ಲಾರೆನ್ಸ್​ ಬಗ್ಗೆ ಯಾರಿಗೂ ಹೆಚ್ಚಿಗೆ ಪರಿಚಯಿಸುವ ಅಗತ್ಯವಿಲ್ಲ. ಎಲ್ಲ ಭಾಷಿಕರಿಗೂ ಲಾರೆನ್ಸ್​ ಮುಖ ಪರಿಚಯವಿದೆ. ಸಿನಿಮಾದ ಆರಂಭದ ದಿನಗಳಲ್ಲಿ ತನ್ನ ಡಾನ್ಸ್​ನಿಂದಲೇ ಎಲ್ಲರ ಗಮನ ಸೆಳೆದ ಅವರು ಲಾರೆನ್ಸ್​ ಮಾಸ್ಟರ್​ ಎಂದೇ ಖ್ಯಾತಿ ಗಳಿಸಿದರು. ಇದೀಗ ನಟನಾಗಿ, ನಿರ್ದೇಶಕನಾಗಿಯೂ ಎಲ್ಲೆಡೆ ತಮ್ಮ ಛಾಪೂ ಮೂಡಿಸುತ್ತಿದ್ದಾರೆ.

    ಅಂದಹಾಗೆ ಲಾರೆನ್ಸ್​ ಸಿನಿಮಾದಲ್ಲಿ ಮಾತ್ರ ಹೀರೋ ಆಗಿರದೆ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ. ಸಾಕಷ್ಟು ಬಡವರಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಶಾಲಾ ಮಕ್ಕಳಿಗೆ ಶಿಕ್ಷಣಕ್ಕೆ ನೆರವಾಗಿದ್ದಾರೆ. ಬಡ ರೋಗಿಗಳ ಚಿಕಿತ್ಸೆಗೆ ಹಣ ಸಹಾಯ ಮಾಡಿದ್ದಾರೆ. ತಮ್ಮ ಸೇವಾ ಮನೋಭಾವದಿಂದಲೇ ಲಾರೆನ್ಸ್​ ಒಳ್ಳೆಯ ಹೆಸರು ಮಾಡಿದ್ದಾರೆ.

    ಇದೀಗ ಲಾರೆನ್ಸ್ ಅಂಗವಿಕಲರಿಗೆ ಅನುಕೂಲವಾಗಲೆಂದು 13 ಸ್ಕೂಟರ್​ ಖರೀದಿಸಿ, ಅವುಗಳನ್ನು ವಿತರಿಸಿದ್ದಾರೆ. ದ್ವಿಚಕ್ರ ವಾಹನಗಳನ್ನು ತ್ರಿಚಕ್ರ ವಾಹನಗಳಾಗಿ (ತ್ರೀ ವೀಲರ್ ಬೈಕ್) ಪರಿವರ್ತಿಸಲಾಗುವುದು ಎಂದು ಹೇಳಿದ್ದಾರೆ. ಈ ಮೂಲಕ ಅಂಗವಿಕಲರಿಗೆ ಕೊಟ್ಟ ಮಾತನ್ನು ಲಾರೆನ್ಸ್​ ಉಳಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಲಾರೆನ್ಸ್​ ತಮ್ಮ ಎಕ್ಸ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

    ನಮಸ್ಕಾರ ಸ್ನೇಹಿತರೇ ಮತ್ತು ಅಭಿಮಾನಿಗಳೇ, ಎರಡು ದಿನಗಳ ಹಿಂದೆ ಪ್ರೆಸ್ ಮೀಟ್‌ನಲ್ಲಿ ನನ್ನ ವಿಕಲಾಂಗ ಹುಡುಗರು ತುಂಬಾ ಧೈರ್ಯದಿಂದ ಮಲ್ಲಕಂಬವನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದ್ದೆ. ಅವರ ದೃಢಸಂಕಲ್ಪ ಮತ್ತು ಶ್ರಮವನ್ನು ನೋಡಿ ನನಗೆ ತುಂಬಾ ಹೆಮ್ಮೆ ಮತ್ತು ಸಂತೋಷವಾಗಿದೆ. ಅವರಿಗೆ ದ್ವಿಚಕ್ರವಾಹನ ಹಾಗೂ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದೆ. ಮೊದಲ ಹಂತವಾಗಿ, 13 ಸ್ಕೂಟರ್​ಗಳನ್ನು ಒದಗಿಸುವ ನನ್ನ ಭರವಸೆ ಇಂದು ಈಡೇರಿದೆ ಮತ್ತು ಎಲ್ಲಾ ಬೈಕ್‌ಗಳನ್ನು ತ್ರಿಚಕ್ರ ವಾಹನಗಳಾಗಿ ಪರಿವರ್ತಿಸಲಾಗುವುದು. ಅವರಿಗೆ ಭರವಸೆ ನೀಡಿದಂತೆ ಶೀಘ್ರದಲ್ಲೇ ಮನೆ ನಿರ್ಮಿಸಿಕೊಡುತ್ತೇನೆ. ಈ ವಿಶೇಷ ದಿನವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ. ನನಗೆ ನಿಮ್ಮೆಲ್ಲರ ಆಶೀರ್ವಾದ ಮತ್ತು ಬೆಂಬಲ ಬೇಕು ಎಂದು ಲಾರೆನ್ಸ್​ ಹೇಳಿದ್ದಾರೆ.

    ಲಾರೆನ್ಸ್​ ಶೇರ್​ ಮಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ರಾಘವ ಲಾರೆನ್ಸ್ ನಿಜಕ್ಕೂ ಶ್ರೇಷ್ಠರು ಮತ್ತು ದೇವತಾ ಮನುಷ್ಟು ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ತಮ್ಮ ಸೇವಾ ಕಾರ್ಯಕ್ರಮಗಳಿಗೆ ಲಕ್ಷಗಟ್ಟಲೆ ಖರ್ಚು ಮಾಡುತ್ತಿರುವ ಲಾರೆನ್ಸ್ ಅವರ ಬಗ್ಗೆ ಎಷ್ಟು ಮೆಚ್ಚುಗೆ ವ್ಯಕ್ತಪಡಿಸಿದರೂ ಅದು ಕಡಿಮೆಯೇ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಲಾರೆನ್ಸ್ ಅವರ ಟ್ವಿಟರ್ ಪೋಸ್ಟ್ 6200 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ.

    ಇನ್ನು ರಾಘವ ಲಾರೆನ್ಸ್ ಅವರು ವೃದ್ಧರು, ಅನಾಥರು ಮತ್ತು ಅಂಗವಿಕಲರಿಗಾಗಿ ಟ್ರಸ್ಟ್ ಸ್ಥಾಪಿಸಿ ಜನರ ಸೇವೆ ಮಾಡುತ್ತಿದ್ದಾರೆ. ಅನೇಕ ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲೂ ಸಹಾಯ ಮಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮಹಿಳಾ ಚಾಲಕರಿಗಾಗಿ ಆಟೋ ಖರೀದಿಸಿದ ಲಾರೆನ್ಸ್, ಇದೀಗ ವಿಕಲಚೇತನರಿಗೆ ಸಹಾಯ ಮಾಡುವ ಮೂಲಕ ಹಲವರಿಗೆ ಸ್ಫೂರ್ತಿಯಾಗಿದ್ದಾರೆ. (ಏಜೆನ್ಸೀಸ್​)

    ನೀನೆ ದೇವರಯ್ಯ! ಅಗಲಿದ ಪತಿ.. ಮೂವರು ಹೆಣ್ಣುಮಕ್ಕಳು… ನಟ ಲಾರೆನ್ಸ್ ಕಾಲಿಗೆ ಬಿದ್ದು ಕಣ್ಣೀರಿಟ್ಟ ಮಹಿಳೆ

    ಯಾವುದೇ ಕಾರಣಕ್ಕೂ ಟೀ ಜತೆ ಈ ಪದಾರ್ಥಗಳನ್ನು ಸೇವಿಸಬೇಡಿ! ಆರೋಗ್ಯಕ್ಕೆ ತುಂಬಾ ಡೇಂಜರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts