More

    ಯಾವುದೇ ಕಾರಣಕ್ಕೂ ಟೀ ಜತೆ ಈ ಪದಾರ್ಥಗಳನ್ನು ಸೇವಿಸಬೇಡಿ! ಆರೋಗ್ಯಕ್ಕೆ ತುಂಬಾ ಡೇಂಜರ್​

    ಜಗತ್ತಿನ ಬಹುತೇಕ ಜನರ ದಿನ ಆರಂಭವಾಗುವುದೇ ಟೀ ಅಥವಾ ಕಾಫಿಯಿಂದ. ದಿನಕ್ಕೆ ಒಂದು ಕಪ್ ಕಾಫಿ-ಟೀ ಕುಡಿಯಲಿಲ್ಲ ಅಂದ್ರೆ ಆ ದಿನ ಏನೋ ಮಿಸ್​ ಮಾಡಿಕೊಂಡಂತೆ ಜನರು ಚಡಪಡಿಸುತ್ತಾರೆ. ಒಂದು ಹೊತ್ತು ಊಟ ಬೇಕಾದರೂ ಬಿಡುತ್ತೇನೆ ಆದರೆ, ಟೀ-ಕಾಫಿ ಬಿಡುವುದಿಲ್ಲ ಎಂದು ಹೇಳುವ ಜನರು ಕೂಡ ನಮ್ಮ ನಡುವೆ ಇದ್ದಾರೆ. ದಿನಕ್ಕೊಂದು ಟೀ ಕುಡಿಯದಿದ್ದರೂ ಸುಸ್ತು, ಚಡಪಡಿಕೆ ಹಾಗೂ ತಲೆ ನೋವು ಅನುಭವಿಸುವವರೂ ಇದ್ದಾರೆ. ಅಷ್ಟೊಂದು ಜನಪ್ರಿಯವಾಗಿದೆ ಈ ಪಾನೀಯ. ಆದರೆ, ಚಹಾ ಕುಡಿಯುವಾಗ ಹಲವರು ತಿಳಿದೋ ತಿಳಿಯದೆಯೋ ಕೆಲವು ತಪ್ಪುಗಳನ್ನು ಮಾಡುತ್ತಾರೆ.

    ಕೆಲವು ರೀತಿಯ ಆಹಾರವನ್ನು ವಿಶೇಷವಾಗಿ ಚಹಾದೊಂದಿಗೆ ತೆಗೆದುಕೊಳ್ಳುವುದು ತುಂಬಾ ಅಪಾಯಕಾರಿ. ಅಂತಹ ಆಹಾರಗಳು ಯಾವುವು? ಅವುಗಳನ್ನು ಚಹಾದೊಂದಿಗೆ ಏಕೆ ತೆಗೆದುಕೊಳ್ಳಬಾರದು ಎಂದು ನಾವೀಗ ತಿಳಿದುಕೊಳ್ಳೋಣ.

    ಚಹಾವನ್ನು ಹೊರತುಪಡಿಸಿ, ಕಿತ್ತಳೆ ಮತ್ತು ನಿಂಬೆಯಂತಹ ಸಿಟ್ರಸ್ ಹಣ್ಣುಗಳನ್ನು ಜತೆಗೆ ಸೇವಿಸಬಾರದು. ಸಿಟ್ರಸ್ ಹಣ್ಣುಗಳು ಹೆಚ್ಚಿನ ಆಮ್ಲೀಯತೆಯನ್ನು ಹೊಂದಿರುತ್ತವೆ, ಇದು ಚಹಾದಲ್ಲಿನ ಕ್ಯಾಟೆಚಿನ್ಸ್ ಎಂಬ ಆ್ಯಂಟಿಆಕ್ಸಿಡೆಂಟ್‌ಗಳನ್ನು ಹೀರಿಕೊಳ್ಳಲು ಅಡ್ಡಿಪಡಿಸುತ್ತದೆ ಮತ್ತು ಹೊಟ್ಟೆ ಉಬ್ಬುವಂತೆ ಮಾಡುತ್ತದೆ.

    ಅನೇಕ ಜನರು ಚಹಾದ ಜತೆಗೆ ಬಿಸ್ಕತ್ತು, ಕೇಕ್ ಮತ್ತು ಚಾಕೊಲೇಟ್‌ಗಳನ್ನು ತಿನ್ನುತ್ತಾರೆ. ಆದರೆ, ಅಧಿಕ ಸಕ್ಕರೆ ಅಂಶವುಳ್ಳ ಆಹಾರಗಳನ್ನು ಚಹಾದೊಂದಿಗೆ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಿ ಮಧುಮೇಹ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

    Tea 1

    ಇನ್ನು ಎಣ್ಣೆಯಲ್ಲಿ ಕರಿದ ಬಜ್ಜಿ, ಪಕೋಡಗಳನ್ನು ಚಹಾದ ಜೊತೆಗೆ ತೆಗೆದುಕೊಳ್ಳಬಾರದು ಎನ್ನುತ್ತಾರೆ ತಜ್ಞರು. ಚಹಾವೂ ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆದರೆ, ಬಜ್ಜಿ, ಪಕೋಡಗಳಂತಹ ಕಠಿಣ ಆಹಾರಗಳನ್ನು ಜತೆಗೆ ತಿನ್ನುವುದರಿಂದ ಯಾವುದೇ ಪ್ರಯೋಜನವಿಲ್ಲ. ಇದಲ್ಲದೆ, ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ. ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

    Tea 2

    ಇದಿಷ್ಟೇ ಅಲ್ಲದೆ, ಮಸಾಲೆಯುಕ್ತ ಆಹಾರಗಳು, ಹಣ್ಣುಗಳು, ಅರಿಶಿನ, ಮೊಸರು, ಕಬ್ಬಿಣಾಂಶ ಭರಿತ ತರಕಾರಿಗಳು, ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಚಹಾದೊಂದಿಗೆ ಯಾವುದೇ ಕಾರಣಕ್ಕೂ ತೆಗೆದುಕೊಳ್ಳಬಾರದು ಎಂದು ತಜ್ಞರು ಹೇಳುತ್ತಾರೆ. (ಏಜೆನ್ಸೀಸ್​)

    ಒಂದು ಕಾಲದಲ್ಲಿ ಕನ್ನಡಿಗರ ಮನಗೆದ್ದಿದ್ದ ಸೌತ್​ ಬ್ಯೂಟಿ ರಾಶಿ ಈಗ ಹೇಗಿದ್ದಾರೆ ಗೊತ್ತಾ? ಫೋಟೋ ವೈರಲ್​

    ಟೀ ಜತೆ ಈ ಹಣ್ಣನ್ನು ಸೇರಿಸಿ ಸೇವಿಸಿದ್ರೆ ಹೃದಯ ಸಮಸ್ಯೆ, ಕ್ಯಾನ್ಸರ್​ ಎಂದಿಗೂ ನಿಮ್ಮ ಬಳಿ ಸುಳಿಯಲ್ಲ!

    ಆಲದ ಮರದ ಬುಡದಲ್ಲಿ 64 ಲಕ್ಷ ರೂ. ಪತ್ತೆ! ಹಣದ ಮೂಲ ಹುಡುಕಿ ಹೊರಟ ಪೊಲೀಸರಿಗೆ ಕಾದಿತ್ತು ಶಾಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts