More

    ಟೀ ಜತೆ ಈ ಹಣ್ಣನ್ನು ಸೇರಿಸಿ ಸೇವಿಸಿದ್ರೆ ಹೃದಯ ಸಮಸ್ಯೆ, ಕ್ಯಾನ್ಸರ್​ ಎಂದಿಗೂ ನಿಮ್ಮ ಬಳಿ ಸುಳಿಯಲ್ಲ!

    ಜಗತ್ತಿನ ಬಹುತೇಕ ಜನರ ದಿನ ಆರಂಭವಾಗುವುದೇ ಟೀ ಅಥವಾ ಕಾಫಿಯಿಂದ. ದಿನಕ್ಕೆ ಒಂದು ಕಪ್ ಕಾಫಿ-ಟೀ ಕುಡಿಯಲಿಲ್ಲ ಅಂದ್ರೆ ಆ ದಿನ ಏನೋ ಮಿಸ್​ ಮಾಡಿಕೊಂಡಂತೆ ಜನರು ಚಡಪಡಿಸುತ್ತಾರೆ. ಒಂದು ಹೊತ್ತು ಊಟ ಬೇಕಾದರೂ ಬಿಡುತ್ತೇನೆ ಆದರೆ, ಟೀ-ಕಾಫಿ ಬಿಡುವುದಿಲ್ಲ ಎಂದು ಹೇಳುವ ಜನರು ಕೂಡ ನಮ್ಮ ನಡುವೆ ಇದ್ದಾರೆ. ದಿನಕ್ಕೊಂದು ಟೀ ಕುಡಿಯದಿದ್ದರೂ ಸುಸ್ತು, ಚಡಪಡಿಕೆ ಹಾಗೂ ತಲೆ ನೋವು ಅನುಭವಿಸುವವರೂ ಇದ್ದಾರೆ. ಅಷ್ಟೊಂದು ಜನಪ್ರಿಯವಾಗಿದೆ ಈ ಪಾನೀಯ.

    ಟೀ-ಕಾಫಿ ಕುಡಿಯುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಕೆಲ ತಜ್ಞರು ಹೇಳಿದರೂ, ಕೆಲ ಆರೋಗ್ಯ ತಜ್ಞರು ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ವಾದಿಸುತ್ತಾರೆ. ನಾವೀಗ ಅಂಥದ್ದೇ ಒಂದು ಚಹಾದ ಚಮತ್ಕಾರದ ಬಗ್ಗೆ ನಿಮಗೆ ತಿಳಿಸುತ್ತೇವೆ. ಈ ರೀತಿಯ ಚಹಾವನ್ನು ಪ್ರತಿನಿತ್ಯ ಕುಡಿದರೆ ಮೂತ್ರನಾಳದ ಸೋಂಕು, ಹೃದ್ರೋಗ, ಕ್ಯಾನ್ಸರ್ ಇತ್ಯಾದಿಗಳು ಬರುವುದಿಲ್ಲ ಎಂದು ಅಧ್ಯಯನಗಳು ಹೇಳಿವೆ.

    ಕ್ರ್ಯಾನ್ ಬೆರ್ರಿ ಚಹಾವು ಈ ಎಲ್ಲಾ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಶೀತದ ಸಮಯದಲ್ಲಿ ನೀವಿದನ್ನು ಸೇವಿಸಿದರೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ, ದೇಹದಲ್ಲಿನ ಸೋಂಕುಗಳನ್ನು ತಡೆಗಟ್ಟಲು ಮತ್ತು ತೂಕವನ್ನು ನಿಯಂತ್ರಿಸಲು ಕ್ರ್ಯಾನ್ ಬೆರ್ರಿ ಟೀ ಒಳ್ಳೆಯದು. ಈ ಚಹಾದ ಪ್ರಯೋಜನಗಳನ್ನು ವಿವರವಾಗಿ ತಿಳಿಯೋಣ.

    ಮೂತ್ರನಾಳದ ಸೋಂಕು
    ಮೂತ್ರನಾಳದ ಸೋಂಕು ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ನೀವು ನಿಯಮಿತವಾಗಿ ಕ್ರ್ಯಾನ್ ಬೆರ್ರಿ ಚಹಾವನ್ನು ಸೇವಿಸಿದರೆ, ಈ ರೋಗವು ಬರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಕ್ರ್ಯಾನ್ ಬೆರ್ರಿಗಳಲ್ಲಿರುವ ಅಂಶಗಳು ಮೂತ್ರಕೋಶದ ಗೋಡೆಗೆ ಬ್ಯಾಕ್ಟೀರಿಯಾ ಅಂಟಿಕೊಳ್ಳದಂತೆ ತಡೆಯುತ್ತದೆ.

    Cranberry tea

    ಹೃದ್ರೋಗ
    ಕ್ರ್ಯಾನ್ ಬೆರ್ರಿ ಟೀ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಧ್ಯಯನಗಳ ಪ್ರಕಾರ,ಕ್ರ್ಯಾನ್ ಬೆರ್ರಿಗಳಲ್ಲಿ ಕಂಡುಬರುವ ಪಾಲಿಫಿನಾಲ್​ಗಳು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.

    ಅಲ್ಸರ್​ ನಿವಾರಣೆ
    ಜರ್ನಲ್ ಆಫ್ ರಿಸರ್ಚ್ ಇನ್ ಫಾರ್ಮಸಿ ಪ್ರಾಕ್ಟೀಸ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕ್ರ್ಯಾನ್‌ ಬೆರ್ರಿ ಚಹಾವನ್ನು ಕುಡಿಯುವುದು ಜೀರ್ಣಕ್ರಿಯೆಗೆ ತುಂಬಾ ಸಹಕಾರಿಯಾಗಿದೆ. ಈ ಚಹಾವು ಹೊಟ್ಟೆಯಲ್ಲಿ ಹೆಲಿಕೋಬ್ಯಾಕ್ಟರ್ ಪೈಲೋರಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದರಿಂದಾಗಿ ಹುಣ್ಣುಗಳು ಬರದಂತೆ ತಡೆಯುತ್ತದೆ.

    ಕ್ರ್ಯಾನ್‌ ಬೆರ್ರಿ ಟೀ ತಯಾರಿಸುವುದು ಹೇಗೆ?
    ಒಣಗಿದ ಕ್ರ್ಯಾನ್​ ಬೆರ್ರಿಗಳು ಎಲ್ಲಾ ಕಡೆ ಸುಲಭವಾಗಿ ದೊರೆಯುತ್ತದೆ. ಸ್ವಲ್ಪ ನೀರನ್ನು ಕುದಿಸಿ ಮತ್ತು ಅದಕ್ಕೆ ಕ್ರ್ಯಾನ್​ ಬೆರ್ರಿಗಳನ್ನು ಸೇರಿಸಿ, ಚೆನ್ನಾಗಿ ಕುದಿಸಿ. ಕ್ರ್ಯಾನ್​ ಬೆರ್ರಿಗಳು ರಸ ಬಿಟ್ಟ ಬಳಿಕ ಸಿಹಿಗಾಗಿ ಸಕ್ಕರೆಯನ್ನು ಸೇರಿಸಿ ಸೇವಿಸಬಹುದು. (ಏಜೆನ್ಸೀಸ್​)

    ಏನೇ ಮಾಡಿದ್ರೂ ಅದು ಬಂದೇ ಬರುತ್ತದೆ, ಎಲ್ಲವೂ ಹಣಕ್ಕಾಗಿ: ನಟಿ ಓವಿಯಾ ಓಪನ್​ ಟಾಕ್​

    ಈ ರೀತಿಯ ಪಾತ್ರಗಳಿಂದಾಗಿ ನನ್ನನ್ನು ಕೀಳಾಗಿ ಕಂಡರು! ನನ್ನ ಕಣ್ಣೀರು ಮಾರಾಟಕ್ಕಿಲ್ಲ ಎಂದ ಖ್ಯಾತ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts