More

    ಈ ರೀತಿಯ ಪಾತ್ರಗಳಿಂದಾಗಿ ನನ್ನನ್ನು ಕೀಳಾಗಿ ಕಂಡರು! ನನ್ನ ಕಣ್ಣೀರು ಮಾರಾಟಕ್ಕಿಲ್ಲ ಎಂದ ಖ್ಯಾತ ನಟಿ

    ಚೆನ್ನೈ: ಈಗಾಗಲೇ ಸಾಕಷ್ಟು ನಟಿಯರು ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕರು, ನಟರು ಹಾಗೂ ನಿರ್ಮಾಪಕರು ಅವಕಾಶದ ಹೆಸರಿನಲ್ಲಿ ತಮ್ಮ ಬಯಕೆಗಳನ್ನು ಈಡೇರಿಸುವಂತೆ ನಟಿಯರನ್ನು ಕೇಳುವುದು ಸಿನಿ ಇಂಡಸ್ಟ್ರಿಗೆ ಅಂಟಿಕೊಂಡಿರುವ ಶಾಪವಾಗಿದೆ. ಬಾಲಿವುಡ್​, ಟಾಲಿವುಡ್​, ಕಾಲಿವುಡ್​, ಸ್ಯಾಂಡಲ್​ವುಡ್​ ಮತ್ತು ಮಾಲಿವುಡ್​ನಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ಗೆ ಅನೇಕ ಕಲಾವಿದೆಯರು ಸಂತ್ರಸ್ತೆಯರಾಗಿದ್ದಾರೆ. ಇನ್ನು ಕೆಲವರು ಅದನ್ನು ಎದುರಿಸಿದ್ದಾರೆ. ಸಾಕಷ್ಟು ನಟಿಯರು ತಮ್ಮ ಕಹಿ ಅನುಭವಗಳನ್ನು ಧೈರ್ಯವಾಗಿ ಹೇಳಿಕೊಂಡಿದ್ದು, ಇದೀಗ ಆ ಸಾಲಿಗೆ ಮತ್ತೊಬ್ಬ ನಟಿ ಮಲ್ಲಿಕಾ ಜಗುಳಾ ಸೇರಿಕೊಂಡಿದ್ದಾರೆ.

    ಮಲ್ಲಿಕಾ ಜಗುಳ ಅವರು ಅನೇಕ ಸೀರಿಯಲ್​ಗಳಲ್ಲಿ ನಟಿಸಿದ್ದಾರೆ. ಸೀರಿಯಲ್​ಗಳು ಮಾತ್ರವಲ್ಲದೆ, ಕೆಲ ಸಿನಿಮಾಗಳಲ್ಲೂ ನಟನೆ ಮಾಡಿದ್ದಾರೆ. ಸೀರಿಯಲ್​ಗಳಲ್ಲಿ ವಿಲ್ಲನ್​ ಪಾತ್ರಗಳಲ್ಲೇ ನಟಿಸಿದ್ದೇ ಹೆಚ್ಚು. ಅವಕಾಶ ವಂಚಿತರಾಗಿ ಕಿರುತೆರೆಗೆ ರೀ ಎಂಟ್ರಿ ಕೊಟ್ಟಿರುವ ನಟಿ ಮಲ್ಲಿಕಾ ಜಗುಳ, ತಮ್ಮ ರೀ ಎಂಟ್ರಿ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ತೆಲುಗಿನವರಿಗೆ ಇಂಡಸ್ಟ್ರಿಯಲ್ಲಿ ಅವಕಾಶ ಸಿಗುತ್ತಿಲ್ಲ. ಮಲಯಾಳಂ, ಕನ್ನಡ, ಹಿಂದಿ ಭಾಷೆಗಳಿಂದ ಕಲಾವಿದರನ್ನು ಕರೆತರಲಾಗುತ್ತಿದೆ. ಅವಕಾಶಗಳು ಸಿಗದಿದ್ದಾಗ ಖಿನ್ನತೆಗೆ ಒಳಗಾಗಿದ್ದೆ. ಅದೇ ಸಮಯದಲ್ಲಿ ಆರೋಗ್ಯ ಸಮಸ್ಯೆಗಳು ಉದ್ಭವಿಸಿದವು. ಕನಿಷ್ಠ ನಿಲ್ಲಲೂ ಸಾಧ್ಯವಾಗದೆ ಆಸ್ಪತ್ರೆ ಸೇರಿದ್ದೆ. ಒಂದು ಹಂತದಲ್ಲಿ, ನಾನು ಸತ್ತು ಮತ್ತೆ ಬದುಕಿದ್ದೇನೆ ಎಂದು ಮಲ್ಲಿಕಾ ಜಗುಳ ಹೇಳಿದ್ದಾರೆ.

    ಚಿತ್ರರಂಗವೆಂದರೆ ಕಲರ್ ಫುಲ್ ಲೋಕ ಎಂದು ಹಲವರು ಭಾವಿಸುತ್ತಾರೆ. ಆದರೆ ಇಲ್ಲಿ ತುಂಬಾ ಕಷ್ಟಗಳಿವೆ. ಅದರಲ್ಲೂ ನಟಿಯರಿಗೆ ಇದು ಮುಳ್ಳಿನ ಬದುಕು ಎಂದೇ ಹೇಳಬೇಕು. ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್‌ಗಾಗಿ ಅನೇಕ ಯುವತಿಯರು ತಮ್ಮ ಜೀವನವನ್ನು ಹಾಳು ಮಾಡಿಕೊಂಡಿದ್ದಾರೆ. ಇಂಡಸ್ಟ್ರಿಗೆ ಬಂದ ನಟಿಯರು ನೇರವಾಗಿ ಅಥವಾ ಪರೋಕ್ಷವಾಗಿ ಕಾಸ್ಟಿಂಗ್ ಕೌಚ್ ಎದುರಿಸಿದ್ದಾರೆ. ನಾನು ಕೂಡ ಕಾಸ್ಟಿಂಗ್ ಕೌಚ್‌ ಎದುರಿಸಿದ್ದೇನೆ. ಕರೊನಾ ನಂತರವಂತೂ ನಾನು ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದೇನೆ ಎಂದರು.

    ಕಷ್ಟದ ಸಮಯದಲ್ಲಿ ನಾನೂ ಸೀರೆ ಮಾರಿದ್ದೆ. ಹೆಚ್ಚು ವಿಲನ್​ ಪಾತ್ರಗಳನ್ನು ಮಾಡಿದ್ದರಿಂದ ನನ್ನನ್ನು ಕೀಳಾಗಿ ಕಾಣಲಾಯಿತು. ನನ್ನ ವೃತ್ತಿಜೀವನದಲ್ಲಿ ನನಗೆ ಅಂತಹ ಅನೇಕ ಪಾತ್ರಗಳು ಸಿಕ್ಕಿವೆ. ಅನಿವಾರ್ಯ ಕಾರಣಗಳಿಂದ ನಾನು ಆ ಪಾತ್ರಗಳಲ್ಲಿ ನಟಿಸಬೇಕಾಗಿತ್ತು. ಅವಕಾಶಕ್ಕಾಗಿ ಕೆಲವರು ನನ್ನನ್ನು ಮಂಚಕ್ಕೆ ಕರೆದರು. ಆದರೆ ನಾನು ಒಪ್ಪಲಿಲ್ಲ. ಇದರ ಪರಿಣಾಮ ಒಂದು ತಿಂಗಳ ಕಾಲ ನನಗೆ ಚಿತ್ರಹಿಂಸೆ ನೀಡಲಾಯಿತು. ಕ್ರಮೇಣ ಸಿನಿಮಾ ಅವಕಾಶಗಳು ಕಡಿಮೆಯಾದವು. ಆದರೂ ನಾನು ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಧಾರಾವಾಹಿಗಳಲ್ಲಿ ಸಾಲು ಸಾಲು ಅವಕಾಶಗಳು ಬಂದವು. ನನ್ನನ್ನು ನಾನು ಸಾಬೀತುಪಡಿಸಿದೆ. ನಾನು ಎಂದಿಗೂ ನನ್ನ ಕಣ್ಣೀರನ್ನು ಮಾರುವುದಿಲ್ಲ ಮತ್ತು ಕಣ್ಣೀರನ್ನು ತೋರಿಸುವುದಿಲ್ಲ ಎಂದು ಮಲ್ಲಿಕಾ ಜಗುಳ ಹೇಳಿದ್ದಾರೆ. ಮಲ್ಲಿಕಾ ಹೇಳಿದ ಮಾತು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. (ಏಜೆನ್ಸೀಸ್​)

    ಏನೇ ಮಾಡಿದ್ರೂ ಅದು ಬಂದೇ ಬರುತ್ತದೆ, ಎಲ್ಲವೂ ಹಣಕ್ಕಾಗಿ: ನಟಿ ಓವಿಯಾ ಓಪನ್​ ಟಾಕ್​

    ಚುನಾವಣಾ ಬಾಂಡ್​​, ಇಡಿ, ಕುಟುಂಬ ರಾಜಕಾರಣದ ಬಗ್ಗೆ ಮಾತು! ಪ್ರಧಾನಿ ಮೋದಿ ಸಂದರ್ಶನದ ಹೈಲೆಟ್ಸ್​ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts