More

  ಮದುವೆ ಆಗಬಾರದು, ಯಾರ ವಿವಾಹಕ್ಕೂ ಹೋಗಬಾರದು… ನಟಿ ಹನಿ ರೋಸ್ ನಿರ್ಧಾರದ ಹಿಂದಿದೆ ಈ ಕಾರಣ!

  ತಮಿಳುನಾಡು: ಮಲಯಾಳಂ ಬ್ಯೂಟಿ, ನಟಿ ಹನಿ ರೋಸ್ ತಮ್ಮ ಸಿನಿಮಾಗಳ ಬದಲಿಗೆ ಸೋಷಿಯಲ್ ಮೀಡಿಯಾದಿಂದಲೇ ಹೆಚ್ಚು ಸುದ್ದಿಯಾಗುತ್ತಾರೆ ಮತ್ತು ಸದ್ದು ಮಾಡುತ್ತಾರೆ. ನಟಿಯ ದೇಹ ಸೌಂದರ್ಯಕ್ಕೆ ಫಿದಾ ಆಗಿರುವ ಅದೆಷ್ಟೋ ಪಡ್ಡೆ ಹುಡುಗರು, ಹನಿ ಹಂಚಿಕೊಳ್ಳುವ ಫೋಟೋ, ವಿಡಿಯೋಗಳನ್ನು ಅಧಿಕ ಸಂಖ್ಯೆಯಲ್ಲಿ ಫಾಲೋ ಮಾಡುತ್ತಾರೆ. ತಮಿಳು, ಮಲಯಾಳಂ, ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ನಟಿ, ತಮ್ಮ ಮೈಮಾಟದಿಂದಲೇ ಎಲ್ಲರ ಗಮನಸೆಳೆಯುತ್ತಾರೆ.

  ಇದನ್ನೂ ಓದಿ: ನಾನು ಬದುಕಿರುವವರೆಗೂ ಸಂವಿಧಾನ ಬದಲಿಸಲು ಬಿಡೋಲ್ಲ: ಟೀಕಿಸಿದವರಿಗೆ ಪ್ರಧಾನಿ ತಿರುಗೇಟು​


  ಸದ್ಯ ತೆಲುಗು, ತಮಿಳು ಚಿತ್ರಗಳಲ್ಲಿ ಬ್ಯುಸಿಯಿರುವ ನಟಿ ಒಂದಲ್ಲ ಒಂದು ವಿಷಯಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆಯಲ್ಲಿರುತ್ತಾರೆ. ತಮ್ಮ ಬಾಲ್ಯದ ನೆನಪು, ಸಿನಿಮಾಗಳಲ್ಲಿ ಎದುರಾದ ಪರಿಸ್ಥಿತಿ, ಆನಂದಿಸಿದ ಕ್ಷಣ, ಬಾಲ್ಯದ ಪತ್ರಗಳು ಹೀಗೆ ಹಲವಾರು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡುವ ನಟಿ ಹನಿ ರೋಸ್​, ಇದೀಗ ಮತ್ತೊಮ್ಮ ತಮ್ಮ ಮದುವೆ ಕುರಿತು ಶಾಕಿಂಗ್ ನಿರ್ಧಾರ ವ್ಯಕ್ತಪಡಿಸಿದ್ದಾರೆ ಹಾಗೂ ಇನ್ನು ಮುಂದಿನ ದಿನಗಳಲ್ಲಿ ಯಾರ ವಿವಾಹ ಸಮಾರಂಭಗಳಿಗೂ ಹೋಗಲ್ಲ ಎಂದು ಖಡಕ್ ಆಗಿ ನಿರ್ಧರಿಸಿದ್ದಾರೆ.

  ನಟಿಯ ನಿರ್ಧಾರದ ಸುದ್ದಿ ಕೇಳಿ ಭಾರೀ ಆಘಾತಕೊಳ್ಳಗಾಗಿರುವ ಅಭಿಮಾನಿಗಳು, ಯಾಕಿಂತ ನಿರ್ಧಾರ ಕೈಗೊಂಡಿದ್ದೀರಿ? ದಾಂಪತ್ಯ ಜೀವನಕ್ಕೆ ಕಾಲಿಡದಿರಲು ಕಾರಣವೇನು? ಅಂತದ್ದೇನಾಯ್ತು, ನಮ್ಮೊಂದಿಗೆ ಹಂಚಿಕೊಳ್ಳಿ ಎಂದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮೂಲಕ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅಸಲಿಗೆ ಹನಿ ರೋಸ್ ಈ ನಿರ್ಧಾರವನ್ನು ದುಡುಕಿ ಕೈಗೊಂಡಿಲ್ಲ ಎಂಬುದು ಅವರ ನಿರ್ಧಾರದಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ. ಅದರ ಹಿಂದಿರುವ ಕಾರಣ ಹೀಗಿದೆ.

  ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಆತಿಥ್ಯಕ್ಕೆ 3 ತಾಣ ಅಂತಿಮಗೊಳಿಸಿದ ಪಿಸಿಬಿ

  ಯಾರ ಮದುವೆ ಸಮಾರಂಭಗಳಿಗೆ ಹೋದರೂ ಎಲ್ಲರೂ ನನ್ನನ್ನೇ ನೋಡುತ್ತಾರೆ. ಇಂತಹ ಕಾರ್ಯಕ್ರಮಗಳಿಗೆ ಹೋದರೆ ಸಾಕು, ಎಲ್ಲರ ಕಣ್ಣು ನನ್ನ ಮೇಲೆಯೇ ಇರುತ್ತದೆ ಎಂದಿರುವ ನಟಿ, ಈ ಕಾರಣಗಳಿಂದ ಯಾರ ವಿವಾಹಗಳಿಗೆ ಹೋಗಬಾರದು ಮತ್ತು ಮದುವೆ ಆಗಬಾರದು ಎಂದು ನಾನು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.

  ಇಬ್ಬರ ಜೀವನದಲ್ಲಿ ಮಧ್ಯಪ್ರವೇಶಿಸುವ ಹಕ್ಕು ಯಾವನಿಗೂ ಇಲ್ಲ: ಸಿಡಿದೆದ್ದ ಗೌತಮ್​ ಗಂಭೀರ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts