More

    ರಾಹುಲ್​ ಆನ್​ ಫೈರ್​ ಎಂದು ಪೋಸ್ಟ್​ ಮಾಡಿದ ಪಾಕ್​ ಮಾಜಿ ಸಚಿವ; ಬಿಜೆಪಿ ನಾಯಕರು ಕೊಟ್ಟ ರಿಯಾಕ್ಷನ್​ ವೈರಲ್

    ನವದೆಹಲಿ: ದೇಶದಲ್ಲಿ 18ನೇ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾಜಕೀಯ ಪಕ್ಷಗಳ ನಾಯಕರು ಬಿರುಸಿನ ಮತಬೇಟೆಯಲ್ಲಿ ನಿರತರಾಗಿದ್ದಾರೆ. ಇನ್ನೂ ಈ ನಡುವೆ ಪಾಕಿಸ್ತಾನದ ರಾಜಕೀಯ ನಾಯಕರು ಭಾರತದ ಕುರಿತು ನೀಡುತ್ತಿರುವ ಹೇಳಿಕೆಗಳು ವಿಶ್ವದೆಲ್ಲೆಡೆ ಚರ್ಚೆಯಾಗುತ್ತಿದ್ದು, ಪಾಕಿಸ್ತಾನದ ಮಾಜಿ ಸಚಿವರೊಬ್ಬರು ರಾಹುಲ್​ ಗಾಂಧಿ ಭಾಷಣವನ್ನು ಉಲ್ಲೇಖಿಸಿ ಟ್ವೀಟ್​ ಮಾಡಿರುವುದು ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದೆ.

    ಈ ಕುರಿತು ಗುಜರಾತ್​ನ ಆನಂದ್​ನಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ಕಾಂಗ್ರೆಸ್​ ಸಾಯುತ್ತಿದ್ದರೆ ಅತ್ತ ಪಾಕಿಸ್ತಾನ ಅಳುತ್ತಿದೆ. ಇದನ್ನು ನೋಡಿದರೆ ಕಾಂಗ್ರೆಸ್​ಗೆ ಪಾಕಿಸ್ತಾನದ ಜೊತೆಗೆ ಸಹಭಾಗಿತ್ವ ಇರುವುದು ಸ್ಪಷ್ಟವಾಗಿ ಕಾಣುತ್ತಿದೆ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ದೇಶದಲ್ಲಿ ಎರಡು ಸಂವಿಧಾನಗಳಿದ್ದವು, ಎರಡು ಧ್ವಜಗಳಿದ್ದವು, ಈ ಸಂವಿಧಾನವನ್ನು ಹೊತ್ತು ಕುಣಿದ ಪ್ರಭುಗಳ ಕುಟುಂಬ ದೇಶದಲ್ಲಿ ಸಂವಿಧಾನ ಜಾರಿಯಾಗಲು ಬಿಡಲಿಲ್ಲ.

    ಕಾಕತಾಳೀಯವೆಂಬಂತೆ ಇಂದು ಭಾರತದಲ್ಲಿ ಕಾಂಗ್ರೆಸ್ ದುರ್ಬಲವಾಗುತ್ತಿದೆ. ತಮಾಷೆ ಎಂದರೆ ಇಲ್ಲಿ ಕಾಂಗ್ರೆಸ್ ಸಾಯುತ್ತಿದೆ ಮತ್ತು ಅಲ್ಲಿ ಪಾಕಿಸ್ತಾನ ಅಳುತ್ತಿದೆ. ಈಗ ಪಾಕಿಸ್ತಾನದ ನಾಯಕರು ಕಾಂಗ್ರೆಸ್‌ಗಾಗಿ ಪ್ರಾರ್ಥಿಸುತ್ತಿದ್ದಾರೆ. ಕಾಂಗ್ರೆಸ್​ ಸರ್ಕಾರ ನಮ್ಮ ದೇಶದಲ್ಲಿದ್ದ ವರ್ಷಗಳಲ್ಲಿ ದೊಡ್ಡ ರೌಡಿಯಂತೆ ವರ್ತಿಸಿತ್ತು, ಆದರೆ ಈಗ ಭಯೋತ್ಪಾದನೆಯ ಟೈರ್ ಪಂಕ್ಚರ್ ಆಗಿದೆ. ಒಂದು ಕಾಲದಲ್ಲಿ ಭಯೋತ್ಪಾದಕರನ್ನು ರಫ್ತು ಮಾಡುತ್ತಿದ್ದ ದೇಶ ಈಗ ಹಿಟ್ಟು ಆಮದು ಮಾಡಿಕೊಳ್ಳುತ್ತಿದೆ, ಕೈಯಲ್ಲಿ ಬಾಂಬ್​ ಹಿಡಿದಿದ್ದವರು ಇಂದು ಭಿಕ್ಷಾ ಪಾತ್ರೆ ಹಿಡಿದಿದ್ದಾರೆ ಎಂದು ಪ್ರಧಾನಿ ಮೋದಿ ಲೇವಡಿಯಾಡಿದ್ದಾರೆ.

    ಇದನ್ನೂ ಓದಿ: ಟಿ-20 ವಿಶ್ವಕಪ್​ನಲ್ಲಿ ಈ ನಾಲ್ಕು ತಂಡಗಳು ಸೆಮಿಫೈನಲ್​​ಗೇರುವುದು ಖಚಿತ: ಯುವರಾಜ್​ ಸಿಂಗ್

    ಇತ್ತ ಪಾಕ್​ ನಾಯಕನ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಅಮಿತ್​ ಮಾಳವಿಯಾ, ಇಮ್ರಾನ್​ ಖಾನ್​ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ ಫವಾದ್​ ಹುಸೇನ್​ ಎಂಬಾತ ರಾಹುಲ್​ ಗಾಂಧಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಇದನ್ನೂ ನೋಡಿದರೆ ಕಾಂಗ್ರೆಸ್​ ಪಾಕಿಸ್ತಾನದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದೆಯೇ ಎಂದು ಭಾಸವಾಗುತ್ತಿದೆ. ಏಕೆಂದರೆ ಕಾಂಗ್ರೆಸ್​ನ ಪ್ರಣಾಳಿಕೆ ನೋಡಿದ ಬಳಿಕ ಮುಸ್ಲಿಂ ಲೀಗ್​ನ ಚಹರೆ ಹಾಗೂ ಗಡಿಯಾಚೆ ಪಾಕಿಸ್ತಾನದೊಂದಿಗೆ ಸಂಬಂಧ ಇರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

    ಪಾಕ್​ ಮಾಜಿ ಸಚಿವನ ಪೋಸ್ಟ್​ನಲ್ಲಿ ಏನಿದೆ?

    ಪಾಕಿಸ್ತಾನದ ಮಾಜಿ ಸಚಿವ ಫವಾದ್​ ಹುಸೇನ್​ ಹಂಚಿಕೊಂಡಿರುವ ವಿಡಿಯೋವನ್ನು ನೋಡುವುದಾದರೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಎಂದಿನಂತೆ ಕಾರ್ಯಕ್ರಮ ಒಂದರಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿಯನ್ನು ನಡೆಸುತ್ತಿರುತ್ತಾರೆ. ಇದನ್ನು ಹಂಚಿಕೊಂಡಿರುವ ಫವಾದ್​ ರಾಹುಲ್​ ಆನ್​ ಫೈರ್​ ಎಂದು ಬರೆದುಕೊಂಡಿದ್ದಾರೆ. ಇತ್ತ ಈ ಪೋಸ್ಟ್ ವೈರಲ್​ ಆಗುತ್ತಿದ್ದಂತೆ ಅನೇಕರು ಕಿಡಿಕಾರಿದ್ದು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಪಾಲಿಗೆ ಇದು ಮುಳುವಾಗಲಿದೆಯಾ ಎಂದು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts