More

    ಅಶ್ಲೀಲ ವಿಡಿಯೋ ಪ್ರಕರಣ; ಪ್ರಜ್ವಲ್​ ರೇವಣ್ಣ ವಿರುದ್ಧ ಲುಕ್​ಔಟ್​ ನೋಟಿಸ್​ ಜಾರಿ ಮಾಡಿದ ಸರ್ಕಾರ

    ಬೆಂಗಳೂರು: ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸಂಸದ ಪ್ರಜ್ವಲ್​ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮಹತ್ವದ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರ ಲುಕ್​ ಔಟ್​ ನೋಟಿಸ್​ ಜಾರಿ ಮಾಡಿದೆ.

    ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಂಸದ ಪ್ರಜ್ವಲ್​ ರೇವಣ್ಣ ಹಾಗೂ ಶಾಸಕ ಎಚ್.ಡಿ. ರೇವಣ್ಣಗೆ ವಿಶೇಷ ತನಿಖಾ ತಂಡ ನೋಟಿಸ್​ ಜಾರಿ ಮಾಡಿತ್ತು. ನೋಟಿಸ್​ಗೆ ತಮ್ಮ ವಕೀಲರ ಮೂಲಕ ಉತ್ತರಿಸಿದ್ದ ಪ್ರಜ್ವಲ್​ 7 ದಿನಗಳ ಕಾಲಾವಕಾಶ ಕೋರಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣಗೆ ಎಸ್​​ಐಟಿ ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ.

    ಪ್ರಜ್ವಲ್​ ರೇವಣ್ಣ ಎಲ್ಲೇ ಕಂಡರೂ ಕೂಡಲೇ ವಶಕ್ಕೆ ಪಡೆಯುವಂತೆ ನೋಟಿಸ್​ನಲ್ಲಿ ಸೂಚಿಸಲಾಗಿದ್ದು, ವಿಶ್ವದ ಎಲ್ಲಾ ಏರ್​ಪೋರ್ಟ್​ಗಳಿಗೂ ಲುಕ್​ಔಟ್​ ನೋಟಿಸ್​ ಜಾರಿ ಮಾಡಲಾಗಿದ್ದು, ವಿಶೇಷ ತನಿಖಾ ದಳ ಇಂಟರ್​ಪೋಲ್​ನ ಸಹಾಯ ಕೋರಿರುವುದಾಗಿ ವರದಿಯಾಗಿದೆ. ಮೇ 15 ಅಥವಾ 16ರಂದು ಪ್ರಜ್ವಲ್​ ರೇವಣ್ಣ ಭಾರತಕ್ಕೆ ವಾಪಸ್​ ಆಗಬಹುದು ಎಂದು ಹೇಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts