ಎಸ್​ಆರ್​ಎಚ್​-ಗುಜರಾತ್​ ನಡುವಿನ ಪಂದ್ಯ ರದ್ದಾದರೆ ಯಾವ ತಂಡಕ್ಕೆ ಹೆಚ್ಚಿನ ಲಾಭ?; ಹೀಗಿದೆ ಪ್ಲೇಆಫ್​ ಲೆಕ್ಕಾಚಾರ

IPL Teams
Published on

ಹೈದರಾಬಾದ್: ಇಲ್ಲಿನ ರಾಜೀವ್​ ಗಾಂಧಿ ಆಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 17ನೇ ಆವೃತ್ತಿಯ 66ನೇ ಐಪಿಎಲ್​ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ಹಾಗೂ ಸನ್ರೈಸರ್ಸ್​ ಹೈದರಾಬಾದ್​ ಮುಖಾಮುಖಿಯಾಗಲಿದ್ದು, ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ.

ಆಡಿರುವ 12 ಪಂದ್ಯಗಳ ಪೈಕಿ ಏಳರಲ್ಲಿ ಗೆದ್ದು, 5ರಲ್ಲಿ ಸೋಲು ಕಂಡಿರುವ ಎಸ್​ಆರ್​ಎಚ್​ ಪ್ಲೇಆಫ್​ ಹಾದಿಯನ್ನು ಸುಗಮವಾಗಿರಿಸಿಕೊಂಡಿದ್ದು, ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಜಯಿಸಿದರೆ ಪ್ಲೇಆಫ್​ ಪ್ರವೇಶಿಸಿದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದುಗೊಂಡರೆ ಎಸ್​ಆರ್​ಎಚ್​ ಪ್ಲೇಆಫ್​ ಹಾದಿ ಇನ್ನಷ್ಟು ಸುಗಮವಾಗಲಿದೆ.

ಆಗ ನಾಲ್ಕನೇ ಸ್ಥಾನಕ್ಕೆ ಆರ್​ಸಿಬಿ ಹಾಗೂ ಸಿಎಸ್​ಕೆ ನಡುವೆ ಪೈಪೋಟಿ ಏರ್ಪಡಲಿದ್ದು, ಅಂತಿಮವಾಗಿ ಯಾವ ತಂಡ ಪ್ಲೇಆಫ್​ ಪ್ರವೇಶಿಸಲಿದೆ ಎಂದು ಕಾದು ನೋಡಬೇಕಿದೆ. ಏಕೆಂದರೆ ನಾಲ್ಕನೇ ಸ್ಥಾನಕ್ಕಾಗಿ ನಾಲ್ಕು ತಂಡಗಳ ನಡುವೆ ಪೈಫೋಟಿ ಏರ್ಪಟ್ಟಿದ್ದು, ಪ್ರಮುಖವಾಗಿ ಆರ್​ಸಿಬಿ ಹಾಗೂ ಸಿಎಸ್​ಕೆ ತಂಡಗಳ ಹೆಸರು ಕೇಳಿ ಬರುತ್ತಿದೆ. ಡೆಲ್ಲಿ ಹಾಗೂ ಲಖನೌ ಹೆಸರು ಕೂಡ ಚಾಲ್ತಿಯಲ್ಲಿದ್ದು, ಒಂದು ವೇಳೆ ಆರ್​ಸಿಬಿ ಅಥವಾ ಸಿಎಸ್​ಕೆ ಬದಲಾಗಿ ಲಖನೌ ಪ್ಲೇಆಫ್​ ಪ್ರವೇಶಿಸಬೇಕಾದರೆ ಬೃಹತ್​ ಅಂತರದಲ್ಲಿ ತನ್ನ ಮುಂದಿನ ಪಂದ್ಯವನ್ನು ಗೆಲ್ಲಬೇಕಿದೆ.

ಒಂದು ವೇಳೆ ಎಸ್​ಆರ್​ಎಚ್​ ಹಾಗೂ ಗುಜರಾತ್​ ನಡುವಿನ ಪಂದ್ಯ ರದ್ದುಗೊಂಡರೆ ಸನ್​ರೈಸರ್ಸ್​ ಒಂದು ಅಂಕ ಪಡೆಯುವ ಮೂಲಕ ಪ್ಲೇಆಫ್​ ಪ್ರವೇಶಿಸಲಿದೆ. ಹೀಗಾಗಿ ಎಲ್ಲರ ಚಿತ್ತ ಈಗ ಆರ್​ಸಿಬಿ ಹಾಗೂ ಸಿಎಸ್​ಕೆ ನಡುವಿನ ಪಂದ್ಯದ ಮೇಲೆ ಬಿದ್ದಿದ್ದು, ಅಂತಿಮವಾಗಿ ಯಾವ ತಂಡ ವಿಜಯಶಾಲಿಯಾಗಲಿದೆ ಎಂದು ನೋಡಲು ಮೇ 18ರವರೆಗೆ ಕಾಯಬೇಕಿದೆ. ಇದರ ಹೊರತಾಗಿಯೂ ಲಖನೌ ಹಾಗೂ ಡೆಲ್ಲಿ ತಂಡಗಳ ಹೆಸರು ಕೇಳಿ ಬರುತ್ತಿದ್ದು, ಒಂದು ವೇಳೆ ಈ ಎರಡರಲ್ಲಿ ಒಂದು ತಂಡ ಪ್ಲೇಆಫ್​ ಪ್ರವೇಶಿಸಬೇಕಿದ್ದರೆ ಲೆಕ್ಕಾಚಾರ ತಲೆಕೆಳಗಾಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net