More

    ನೀನೆ ದೇವರಯ್ಯ! ಅಗಲಿದ ಪತಿ.. ಮೂವರು ಹೆಣ್ಣುಮಕ್ಕಳು… ನಟ ಲಾರೆನ್ಸ್ ಕಾಲಿಗೆ ಬಿದ್ದು ಕಣ್ಣೀರಿಟ್ಟ ಮಹಿಳೆ

    ಕಾಂಚನ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ನಟ ರಾಘವ ಲಾರೆನ್ಸ್​ ಬಗ್ಗೆ ಯಾರಿಗೂ ಹೆಚ್ಚಿಗೆ ಪರಿಚಯಿಸುವ ಅಗತ್ಯವಿಲ್ಲ. ಎಲ್ಲ ಭಾಷಿಕರಿಗೂ ಲಾರೆನ್ಸ್​ ಮುಖ ಪರಿಚಯವಿದೆ. ಸಿನಿಮಾದ ಆರಂಭದ ದಿನಗಳಲ್ಲಿ ತನ್ನ ಡಾನ್ಸ್​ನಿಂದಲೇ ಎಲ್ಲರ ಗಮನ ಸೆಳೆದ ಅವರು ಲಾರೆನ್ಸ್​ ಮಾಸ್ಟರ್​ ಎಂದೇ ಖ್ಯಾತಿ ಗಳಿಸಿದರು. ಇದೀಗ ನಟನಾಗಿ, ನಿರ್ದೇಶಕನಾಗಿಯೂ ಎಲ್ಲೆಡೆ ತಮ್ಮ ಛಾಪೂ ಮೂಡಿಸುತ್ತಿದ್ದಾರೆ. ಅಂದಹಾಗೆ ಲಾರೆನ್ಸ್​ ಸಿನಿಮಾದಲ್ಲಿ ಮಾತ್ರ ಹೀರೋ ಆಗಿರದೆ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ. ಸಾಕಷ್ಟು ಬಡವರಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಶಾಲಾ ಮಕ್ಕಳಿಗೆ ಶಿಕ್ಷಣಕ್ಕೆ ನೆರವಾಗಿದ್ದಾರೆ. ಬಡ ರೋಗಿಗಳ ಚಿಕಿತ್ಸೆಗೆ ಹಣ ಸಹಾಯ ಮಾಡಿದ್ದಾರೆ. ತಮ್ಮ ಸೇವಾ ಮನೋಭಾವದಿಂದಲೇ ಲಾರೆನ್ಸ್​ ಒಳ್ಳೆಯ ಹೆಸರು ಮಾಡಿದ್ದಾರೆ.

    ಇಲ್ಲಿಯವರೆಗೆ ಲಾರೆನ್ಸ್​ ಸಹಾಯದ ಬಗ್ಗೆ ಹಲವಾರು ಸುದ್ದಿಗಳನ್ನು ಕೇಳಿದ್ದೇವೆ. ಇದೀಗ ಲಾರೆನ್ಸ್ ಮಾಸ್ಟರ್ ಅನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಹಾಸ್ಯ ನಟ ಕೆಪಿವೈ ಬಾಲಾ ಬಡವರಿಗೆ ನೆರವಾಗಿದ್ದಾದ್ದು, ಈ ಸುದ್ದಿ ಕಾಲಿವುಡ್ ನಲ್ಲಿ ಸಂಚಲನ ಮೂಡಿಸಿದ್ದಲ್ಲದೆ ಸೋಶಿಯಲ್ ಮೀಡಿಯಾದಲ್ಲೂ ಸ್ಫೂರ್ತಿಯನ್ನು ಹರಡಿದೆ.

    ಅನೇಕರು ತಮ್ಮ ನೆಚ್ಚಿನ ನಾಯಕರ ಬಗ್ಗೆ ಮಾತನಾಡುತ್ತಾರೆ. ಆದರೆ, ಕೆಲವರು ಮಾತ್ರ ಅವರನ್ನೇ ಉದಾಹರಣೆಯಾಗಿ ತೆಗೆದುಕೊಂಡು ಅವರ ಹಾದಿಯಲ್ಲಿ ಮುಂದುವರಿಯುತ್ತಾರೆ. ಈ ಅನುಕ್ರಮದಲ್ಲಿ ಬಾಲಾ ಎಂಬ ಹಾಸ್ಯನಟ ಕಾಲಿವುಡ್‌ನಲ್ಲಿ ಸಂಚಲನ ಮೂಡಿಸಿದ್ದಾರೆ. ಚಿಕ್ಕ ಕಾಮಿಡಿ ಶೋ ಮೂಲಕ ತೆರೆ ಮೇಲೆ ಕಾಣಿಸಿಕೊಂಡರೂ ಅವರ ನಟನೆಗೆ ಉತ್ತಮ ಮನ್ನಣೆ ದೊರೆತಿದೆ. ಹೀಗಾಗಿ ತಮಿಳುನಾಡಿನಲ್ಲಿ ಬಾಲಾಗೆ ಒಳ್ಳೆಯ ಹೆಸರಿದೆ. ಈ ವ್ಯಕ್ತಿ ತನ್ನ ಆದಾಯವನ್ನು ಬಡವರಿಗೆ ಸಹಾಯ ಮಾಡಲು ಬಳಸುತ್ತಿದ್ದಾನೆ. ತಮ್ಮ ನೆಚ್ಚಿನ ನಾಯಕ ಲಾರೆನ್ಸ್ ಎಂದು ಹೇಳಿರುವ ಬಾಲಾ, ಸಹಾಯ ಮಾಡಲು ಅವರೇ ನನಗೆ ಸ್ಫೂರ್ತಿ ಎಂದಿದ್ದಾರೆ.

    ಇತ್ತೀಚಿಗೆ ಲಾರೆನ್ಸ್​ ಮತ್ತು ಬಾಲಾ ಬಡ ಮಹಿಳೆಯೊಬ್ಬರಿಗೆ ಸಹಾಯ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಸಹಾಯ ಪಡೆದ ಮಹಿಳೆಯ ಹೆಸರು ಮುರುಗಮ್ಮಳ್​. ಈಕೆ ತಮಿಳುನಾಡಿನ ಮಹಿಳೆ. ಇವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಮುರುಗಮ್ಮಳ್​ ಮದುವೆಯಾದ ಕೆಲವೇ ವರ್ಷಗಳಲ್ಲಿ ತನ್ನ ಗಂಡನನ್ನು ಕಳೆದುಕೊಂಡರು. ಹೆಣ್ಣು ಮಕ್ಕಳನ್ನು ಪೋಷಿಸಲು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಸಾಕಷ್ಟು ಶ್ರಮಪಡುತ್ತಿದ್ದರು.

    ಮುರುಗಮ್ಮಳ್​ ಅವರಿಗೆ ಆಟೋ ಓಡಿಸುವ ಆಸೆಯಿದ್ದರೂ ಆಟೋ ಖರೀದಿ ಮಾಡುವಷ್ಟು ಆರ್ಥಿಕ ಶಕ್ತಿ ಹೊಂದಿಲ್ಲ. ಇದನ್ನು ತಿಳಿದ ಬಾಲಾ, ಈ ವಿಚಾರವನ್ನು ಲಾರೆನ್ಸ್ ಅವರ ಗಮನಕ್ಕೆ ತಂದರು. ಇದಕ್ಕೆ ತಕ್ಷಣ ಸ್ಪಂದಿಸಿದ ಲಾರೆನ್ಸ್ ಆಕೆಗೆ 3 ಲಕ್ಷ ರೂಪಾಯಿಗೆ ಆಟೋ ಖರೀದಿಸಿದ್ದಾರೆ. ಅವಳ ಕಷ್ಟಕ್ಕೆ ಇಬ್ಬರೂ ಜೊತೆಯಾಗಿ ನಿಲ್ಲುವ ಮೂಲಕ ಬಡಕುಟುಂಬಕ್ಕೆ ಆಸರೆಯಾಗಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇನ್ನು ಬಾಲಾ ಅವರು ಈಗಾಗಲೇ ಅನೇಕ ಬಡವರಿಗೆ ಸಹಾಯ ಮಾಡಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್​ಗಳ ರೂಪದಲ್ಲಿ ಹಂಚಿಕೊಳ್ಳಿ. (ಏಜೆನ್ಸೀಸ್​)

    ಆರ್​​ಸಿಬಿಗೆ ಸೇರಿಕೊಳ್ಳಲಿದ್ದಾರೆ ರೋಹಿತ್​ ಶರ್ಮ!? ನಾಯಕತ್ವವೂ ಕೂಡ ಹಿಟ್​ಮ್ಯಾನ್​ ಹೆಗಲಿಗೆ

    ಇಂದು ಹೃದಯಾಘಾತದಿಂದ ಮೃತಪಟ್ಟ ಡೇನಿಯಲ್​ ಬಾಲಾಜಿ ಕನ್ನಡದ ಖ್ಯಾತ ನಟನ ಸಹೋದರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts