More

  ತೊದಲು ಮಾತನಾಡುವ ಆಲಿಯಾಳ 1 ವರ್ಷದ ಮಗು 250 ಕೋಟಿ ರೂ. ಒಡತಿ

  ಮುಂಬೈ: ಬಾಲಿವುಡ್​​ ನಟ ರಣಬೀರ್​ ಕಪೂರ್​, ಆಲಿಯಾ ಭಟ್​ ದಂಪತಿಗೆ ರಹಾ ಕಪೂರ್​ ಎನ್ನುವ ಮುದ್ದಾದ ಮಗಳಿದ್ದಾಳೆ. ಸರಿಸುಮಾರ 1 ವರ್ಷದ ರಹಾ ಈಗಾಗಲೇ ಕೋಟಿ.. ಕೋಟಿ ಆಸ್ತಿಯ ಒಡತಿ ಎನ್ನುವ ಸುದ್ದಿಯೊಂದು ಸಖತ್​ ವೈರಲ್​ ಆಗಿದೆ.

  ತೊದಲು ಮಾತನಾಡುವ ಆಲಿಯಾಳ 1 ವರ್ಷದ ಮಗು 250 ಕೋಟಿ ರೂ. ಒಡತಿ

  ರಣಬೀರ್​ ಕಪೂರ್ ಮತ್ತು ಆಲಿಯಾ ಮಗಳಿಗೆ ಒಂದು ವರ್ಷ ತುಂಬಿದೆ ಅಷ್ಟೆ. ಇತ್ತೀಚೆಗೆ ಅಷ್ಟೆ ದಂಪತಿ ತಮ್ಮ ಮುದ್ದಿನ ಮಗಳಾದ ರಹಾ ಕಪೂರ್​ ಮುಖವನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದರು. ಇದೀಗ  ಮಗಳಿಗೆ ಕೋಟಿ.. ಕೋಟಿ ಬೆಲೆ ಬಾಳುವ ಬಂಗಲೆ ಖರೀದಿ ಮಾಡಿ ಆಕೆ ಹೆಸರಿಗೆ ಬರೆದಿದ್ದಾರೆ ಎನ್ನಲಾಗಿದೆ.

  ತೊದಲು ಮಾತನಾಡುವ ಆಲಿಯಾಳ 1 ವರ್ಷದ ಮಗು 250 ಕೋಟಿ ರೂ. ಒಡತಿ

  ಈ ಸ್ಟಾರ್‌ ದಂಪತಿ ಮುಂಬೈನಲ್ಲಿ ಐಷಾರಾಮಿ ಬಂಗಲೆಯನ್ನು ಮಗಳು ರಾಹಾ ಹೆಸರಲ್ಲಿ ಖರೀದಿಸಿದ್ದಾರೆ.  ರಾಹಾ ಕಪೂರ್‌ 250 ಕೋಟಿ ರೂ. ಮೌಲ್ಯದ ಬಂಗಲೆಗೆ ಒಡತಿಯಾಗಿದ್ದಾಳೆ.ಇದೀಗ ರಾಹಾ ಕಪೂರ್‌ ಬಹಳ ಚಿಕ್ಕ ವಯಸ್ಸಿನ ಅತೀ ಹೆಚ್ಚು ಆಸ್ತಿ ಹೊಂದಿದ ಸ್ಟಾರ್‌ ಕಿಡ್‌ ಅನ್ನೋ ಖ್ಯಾತಿ ಪಡೆದಿದ್ದಾರೆ.

  ತೊದಲು ಮಾತನಾಡುವ ಆಲಿಯಾಳ 1 ವರ್ಷದ ಮಗು 250 ಕೋಟಿ ರೂ. ಒಡತಿ

  ಕೃಷ್ಣ ರಾಜ್ ಬಂಗಲೆಗೂ ಹಾಗೂ ಕಪೂರ್ ಕುಟುಂಬಕ್ಕೂ ನಂಟಿದೆ. ದಿವಂಗತ ಹಿರಿಯ ನಟ ರಾಜ್ ಕಪೂರ್ ಮತ್ತು ಅವರ ಪತ್ನಿ ಕೃಷ್ಣ ರಾಜ್ ಈ ಬಂಗಲೆಯನ್ನು ಹೊಂದಿದ್ದರು. ರಣಬೀರ್ ಕಪೂರ್ ಈ ಪಿತ್ರಾರ್ಜಿತ ಆಸ್ತಿಯಲ್ಲಿ ಕಪೂರ್ ಕುಟುಂಬದಲ್ಲಿ ಏಕೈಕ ಮೊಮ್ಮಗ ಆಗಿದ್ದಾರೆ. ರಣಬೀರ್‌ ಕಪೂರ್‌ ತಂದೆ ರಿಷಿ ಕಪೂರ್ ಸಾಯುವುದಕ್ಕೂ ಮುನ್ನ ಸೈಟ್‌ಗೆ ಭೇಟಿದ್ದರು. ಹಾಗೆ ಇದನ್ನು ಇಷ್ಟಪಟ್ಟಿದ್ದರ ಕಾರಣ ಈ ದುಬಾರಿ ಮೌಲ್ಯದ ಬಂಗಲೆಯನ್ನು ರಾಹಾ ಹೆಸರಿಗೆ ರಿಜಿಸ್ಟರ್ ಮಾಡಿದ್ದಾರೆ.

  ರಣ್‌ಬೀರ್-ಆಲಿಯಾ ಹೆಸರಲ್ಲಿ ಮುಂಬೈ ಬಾಂದ್ರಾದಲ್ಲಿ ಈಗಾಗಲೇ 60 ಕೋಟಿಗೂ ಹೆಚ್ಚು ಮೌಲ್ಯದ 4 ಫ್ಲಾಟ್‌ಗಳನ್ನು ಹೊಂದಿದ್ದಾರೆ. ಇದರ ಜೊತೆಗೆ ಐಷಾರಾಮಿ ಬಂಗಲೆ ಖರೀದಿಸಿದ್ದು ಸೋಶಿಯಲ್‌ ಮಿಡಿಯಾದಲ್ಲಿ ಚರ್ಚೆ ಶೂರುವಾಗಿದೆ.  ಆಲಿಯಾ ಈಗ ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು.  ಒಂದು ಚಿತ್ರಕ್ಕೆ ಸುಮಾರು 20-25 ಕೋಟಿ ರೂ. ಇದೆ. ‘ಗಂಗೂಬಾಯಿ ಕಥಿವಾಡಿ’ ಚಿತ್ರಕ್ಕಾಗಿ ಅವರು ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ರಣಬೀರ್​ ಕಪೂರ್​ ಅನಿಮಲ್​ ಚಿತ್ರದ ಬಳಿಕ ಸಾಕಷ್ಟು ಹೆಸರು ಗಳಿಸಿದ್ದು, ದಂಪತಿ ಕೈಯಲ್ಲಿ ಹಲವಾರು ಚಿತ್ರಗಳಿವೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts