More

    ಇಂದು ಹೃದಯಾಘಾತದಿಂದ ಮೃತಪಟ್ಟ ಡೇನಿಯಲ್​ ಬಾಲಾಜಿ ಕನ್ನಡದ ಖ್ಯಾತ ನಟನ ಸಹೋದರ!

    ಚೆನ್ನೈ: ರಾಕಿಂಗ್​ ಸ್ಟಾರ್​ ಯಶ್​ಗೆ ಅತಿದೊಡ್ಡ ಯಶಸ್ಸು ತಂದುಕೊಟ್ಟ ಕಿರಾತಕ ಸಿನಿಮಾದಲ್ಲಿ ಖಡಕ್​ ಖಳನಾಯಕನಾಗಿ ತೆರೆಯ ಮೇಲೆ ಅಬ್ಬರಿಸಿದ್ದ ನಟ ಡೇನಿಯಲ್​ ಬಾಲಾಜಿ ಹೃದಯಾಘಾತದಿಂದ ತಮಿಳುನಾಡಿನ ಚೆನ್ನೈ ಆಸ್ಪತ್ರೆಯಲ್ಲಿಂದು ಕೊನೆಯುಸಿರೆಳೆದಿದ್ದಾರೆ. ಬಾಲಾಜಿ ಸಾವು ಚಿತ್ರರಂಗದಕ್ಕೆ ಒಂದು ದೊಡ್ಡ ಆಘಾತವಾಗಿದೆ.

    ವಿಜಯ್​ ಅಭಿನಯದ ಬಿಗಿಲ್​, ಭೈರವ ಸಿನಿಮಾಗಳಲ್ಲಿ ಬಾಲಾಜಿ ನಟಿಸಿದ್ದರು. ಅಲ್ಲದೆ, ಕಾಖಾಕಾಖಾ, ವೆಟ್ಟೈಯಾಟು ವಿಳೈಯಾಡು, ಪೊಲ್ಲಾದವನ್​, ಎನ್ನೈ ಅರಿಂದಾಲ್​ ಸೇರಿಂದತೆ ಅನೇಕ ಸೂಪರ್​ ಹಿಟ್​ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಕಿರಾತಕ ಜತೆಗೆ ಶಿವಾಜಿ ನಗರ, ಬೆಂಗಳೂರು ಅಂಡರ್​ವರ್ಲ್ಡ್ ಹಾಗೂ ಡವ್​ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಇವರು ಸಿನಿರಸಿಕರಿಗೆ ಚಿರಪರಿಚಿತರು ಎಂದು ಹೇಳಬಹುದಾಗಿದೆ.

    ಮಾರ್ಚ್​ 29ರಂದು ಎದೆ ನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ಶನಿವಾರ (ಮಾರ್ಚ್​ 30) ಕೊನೆಯುಸಿರು ಎಳೆದಿದ್ದಾರೆ. ಚೆನ್ನೈನ ಪುರಸೈವಾಲ್ಕಂನಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

    ನಟ ಮುರಳಿ ಸಹೋದರ
    ಡೇನಿಯಲ್​ ಬಾಲಾಜಿ ಅವರು ಖ್ಯಾತ ದಿವಂಗತ ನಟ ಮುರಳಿ ಅವರ ಕಿರಿಯ ಸಹೋದರ. ಆದರೆ, ಇಬ್ಬರು ಒಡಹುಟ್ಟಿದವರಲ್ಲ. ಬಾಲಾಜಿ ಅವರ ತಾಯಿ ಮತ್ತು ಮುರಳಿ ಅವರ ತಾಯಿ ಅಕ್ಕ-ತಂಗಿಯರು. ಮುರಳಿ ಅವರು ಕನ್ನಡದಲ್ಲಿ ಸುಮಾರು 9 ಸಿನಿಮಾಗಳನ್ನು ಮಾಡಿದ್ದಾರೆ. ಅದರಲ್ಲಿ ಅಜೇಯ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತು. ಇಂದಿಗೂ ಈ ಎಲ್ಲರ ಅಚ್ಚುಮೆಚ್ಚಾಗಿದೆ. ಮುರಳಿ ಅವರ ತಂದೆ ಸಿದ್ದಲಿಂಗಯ್ಯ ಅವರು ಕನ್ನಡದ ನಿರ್ದೇಶಕ, ಚಿತ್ರಕತೆಗಾರ ಹಾಗೂ ನಿರ್ಮಾಪಕ. ಸಾಕಷ್ಟು ಕನ್ನಡ ಸಿನಿಮಾಗಳನ್ನು ಮಾಡಿದ್ದಾರೆ. ಮರಳಿ ಅವರು ಕನ್ನಡಕ್ಕಿಂತ ತಮಿಳಿನಲ್ಲಿ ಒಳ್ಳೆಯ ಹೆಸರು ಮಾಡಿದರು. 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದು, ಅನೇಕ ಸೂಪರ್​ ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಕನ್ನಡದ ಡಕೋಟ ಎಕ್ಸ್​ಪ್ರೆಸ್​ ಸಿನಿಮಾವನ್ನು ಮೊದಲು ಮಾಡಿದ್ದೇ ಮುರಳಿ ಅವರು. ಇನ್ನು ಮುರಳಿ ಅವರ ಪುತ್ರ ಅಥರ್ವ ಸದ್ಯ ತಮಿಳುನಾಡಿನಲ್ಲಿ ಸ್ಟಾರ್​ ನಟನ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

    ಮುರಳಿ ಬಗ್ಗೆ ಬಾಲಾಜಿ ಮಾತು
    ಬಾಲಾಜಿ ಮತ್ತು ಮುರಳಿ ಎಂದಿಗೂ ಒಟ್ಟಿಗೆ ಅಭಿನಯಿಸಿಲ್ಲ. ಬಾಲಾಜಿ ನಟನೆ ಶುರು ಮಾಡಿದಾಗ ಸಹೋದರ ಮುರಳಿ ತಮಿಳು ಸಿನಿಮಾದಲ್ಲಿ ಮುಂಚೂಣಿ Daniel Balaji 1ನಾಯಕರಾಗಿದ್ದರು. ಅಣ್ಣ ಯಾವುದೇ ಸಲಹೆಯನ್ನು ಪಡೆಯದೇ ಬಾಲಾಜಿ ಕೂಡ ಸ್ವತಂತ್ರವಾಗಿ ಸಿನಿಮಾದಲ್ಲಿ ಮಿಂಚಿದರು. ನಾನು ಸ್ಕೂಲ್​ನಲ್ಲಿ ಇರುವಾಗಲೇ ಸಹೋದರ ಬಾಲಾಜಿ ನಟರಾಗಿದ್ದರು. ಕಾಲೇಜಿಗೆ ಬಂದಾಗ ಸ್ಟಾರ್​ ನಟನ ಪಟ್ಟ ಸಿಕ್ಕಿತ್ತು. ನಾನು ಅವರನ್ನು ಹೆಚ್ಚಾಗಿ ಭೇಟಿಯಾಗುತ್ತಿರಲಿಲ್ಲ. ಸಹೋದರ ಸಲಹೆ ಪಡೆದುಕೋ ಎಂದು ಕೆಲವರು ಹೇಳುತ್ತಿದ್ದರು. ಆದರೆ, ನಾನು ಹೋಗುತ್ತಿರಲಿಲ್ಲ. ಆದರೆ, ಕಾಲೇಜು ವಿದ್ಯಾಭ್ಯಾಸ ಮುಗಿದಾಗ ಮುರಳಿ ಅಣ್ಣನೆ ಒಂದು ದಿನ ನನ್ನನ್ನು ಕರೆದರು. ನಾನು ಹೋದೆ. ಒಳ್ಳೆಯ ಕ್ಷಣಗಳನ್ನು ಕಳೆದೆನು. ಮುರಳಿ ಅಣ್ಣ ದೊಡ್ಡ ಸ್ಟಾರ್​ ಆಗಿದ್ದರಿಂದ ಅವರು ನನ್ನನ್ನು ಹೇಗೆ ಸ್ವಾಗತಿಸುತ್ತಾರೆ ಅಂದುಕೊಂಡಿದ್ದೆ. ಆದರೆ, ಸ್ಟಾರ್​ ನಟನೆಂಬ ಪಟ್ಟವನ್ನು ಪಕ್ಕಕ್ಕಿಟ್ಟು ಮಾಮೂಲಿಯಂತೆ ನನ್ನೊಂದಿಗೆ ಮಾತನಾಡಿದರು ಎಂದು ಹಿಂದೊಮ್ಮೆ ಸಂದರ್ಶನದಲ್ಲಿ ಡೇನಿಯಲ್​ ಬಾಲಾಜಿ ಹೇಳಿದ್ದರು.

    ನಾನು ಅವರೊಂದಿಗೆ ಮಾತನಾಡುವಾಗ ನಟನೆಯನ್ನು ಕೀಟಲೆ ಮಾಡುತ್ತಿದ್ದೆ. ಆಗ ನನ್ನನ್ನು ನೋಡಿ ನೀನು ವಿಲ್ಲನ್​ ಪಾತ್ರ ಮಾಡಲು ಬಯಸಿದ್ದೀಯಾ ಎಂದು ಪ್ರಶ್ನಿಸಿದರು. ಇಲ್ಲ ನಾನು ಇಲ್ಲಿರುವುದೇ ಹೀರೋ ಆಗಲು ಎನ್ನುತ್ತಿದ್ದೆ. ಮುರಳಿ ಅಣ್ಣನ ತಂದೆ ನಿರ್ದೇಶಕರು. ಅವರು ಹಲವಾರು ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ನನ್ನನ್ನು ನಿರ್ದೇಶಿಸಲು ಸಾಧ್ಯವಾಗುತ್ತಿಲ್ಲ ಎಂದು ಒಮ್ಮೆ ವಿಷಾದಿಸಿದರು. ಅವರ ಆಸೆಗಾಗಿ ಕನ್ನಡದ ಕೆಲವು ಚಿತ್ರಗಳಲ್ಲಿ ನಟಿಸಿದ್ದೇನೆ ಎಂದು ಡೇನಿಯಲ್​ ಬಾಲಾಜಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

    ಸಾವಿನಲ್ಲೂ ಸಾರ್ಥಕತೆ ಮೆರೆದ ಡೇನಿಯಲ್​ ಬಾಲಾಜಿ
    ನಟ ಡೇನಿಯಲ್​ ಬಾಲಾಜಿ ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, ಈ ವಿಚಾರ ಅಭಿಮಾನಿಗಳನ್ನು ಮತ್ತಷ್ಟು ಭಾವುಕವಾಗಿಸಿದೆ. ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಡೇನಿಯಲ್​ ಬಾಲಾಜಿ ಕತ್ತಲೆಯಲ್ಲಿದವರ ಬಾಳನ್ನು ಬೆಳಕಾಗಿಸಿದ್ದಾರೆ. ಸಾವಿನ ಸುದ್ದಿ ಕೇಳಿ ಆತಂಕದಲ್ಲಿದ್ದ ಅಭಿಮಾನಿಗಳು ಈ ವಿಷಯ ಕೇಳಿ ಮತ್ತಷ್ಟು ಭಾವುಕರಾಗಿದ್ದಾರೆ.

    ಚೆನ್ನೈನ ಪುರಸೈವಾಲ್ಕಂನಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ತಿರುವನ್ಮಿಯೂರಿನ ಅವರ ನಿವಾಸದಲ್ಲಿ ನಡೆಯಲಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಸಿನಿಮಾ ರಂಗ ಹೊರತುಪಡಿಸಿ ಧಾರ್ಮಿಕ ಕಾರ್ಯಗಳಲ್ಲೂ ಡೇನಿಯಲ್​ ಬಾಲಾಜಿ ಸಕ್ರಿಯರಾಗಿದ್ದು, ಅನೇಕ ದೇವಾಲಯಗಳನ್ನು ಕಟ್ಟಿಸಿದ್ದಾರೆ. ನಟನ ಅಗಲಿಕೆಗೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. (ಏಜೆನ್ಸೀಸ್​)

    ಭಾರತದ ಈ ಪುರುಷರಿಂದ ಗರ್ಭಧರಿಸಲು ಮಹಿಳೆಯರು ವಿದೇಶದಿಂದಲೂ ಬರ್ತಾರೆ! ನಂಬದಿದ್ರೂ ಇದೇ ಸತ್ಯ

    ಬುಕ್​​ ಮಾಡಿದ್ದು ಮೊಬೈಲ್​ ಆದ್ರೆ ಬಂದಿದ್ದು ಕಲ್ಲು! ಗ್ರಾಹಕನ ಆಕ್ರೋಶಕ್ಕೆ ಹೆದರಿದ ಫ್ಲಿಪ್​ಕಾರ್ಟ್ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts