More

    IPL 2024: ರುತುರಾಜ್, ಶಿವಂ ದುಬೆ​ ಸಿಡಿಲಬ್ಬರದ ಬ್ಯಾಟಿಂಗ್: ಲಕ್ನೋಗೆ 211ರನ್​ಗಳ ಬೃಹತ್​ ಗುರಿ!

    ಚೆನ್ನೈ: ರುತುರಾಜ್ ಗಾಯಕ್ವಾಡ್​​(108) ಅವರ ಅಮೋಘ ಶತಕ, ಶಿವಂ ದುಬೆ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಸಿಎಸ್​ಕೆ 20 ಓವರ್​ಗಳಲ್ಲಿ 210 ರನ್​ಗಳನ್ನು ಕಲೆಹಾಕಿದ್ದು, ಲಕ್ನೋಗೆ ಗೆಲ್ಲಲು 211ರನ್​ಗಳ ಬೃಹತ್ ಗುರಿ ನೀಡಿದೆ.

    ಇದನ್ನೂ ಓದಿ: ಆಂಧ್ರ ಚುನಾವಣೆ: ಜನಸೇನಾ ಸಂಸ್ಥಾಪಕ ಪವನ್ ಕಲ್ಯಾಣ್ ಆಸ್ತಿಯ ಮೌಲ್ಯ ಎಷ್ಟು ಗೊತ್ತಾ…?

    ಇಲ್ಲಿನ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ನ 39ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 211 ರನ್​​​​ಗಳ ಬೃಹತ್​ ಟಾರ್ಗೆಟ್​ ಅನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ನೀಡಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಬಂದ ಸಿಎಸ್​ಕೆಗೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ನಾಯಕ ರುತುರಾಜ್​ ಜೊತೆಗೆ ಓಪನಿಂಗ್ ಮಾಡಲು ಬಂದ ಅಜಿಂಕಾ ರಹಾನೆ (1) ಬೇಗನೆ ರನ್​ ಔಟ್​ ಆದರು. ಇದರ ಹಿಂದೆಯೇ ಡೇರಿಲ್ ಮಿಚೆಲ್ (11), ರವೀಂದ್ರ ಜಡೇಜಾ (16) ವಿಕೆಟ್​ ಕಳೆದುಕೊಂಡು ಮಧ್ಯಮ ಕ್ರಮಾಂಕ ಕುಸಿತ ಕಂಡಿತ್ತು.

    ಲಕ್ನೋ ಪರ ಹೆನ್ರಿ 28ಕ್ಕೆ 1 ವಿಕೆಟ್, ಮೋಶಿನ ಖಾನ್ 50ಕ್ಕೆ1, ಯಶ್​ ಠಾಕುರ್​ 47ಕ್ಕೆ1 ವಿಕೆಟ್ ಪಡೆದರು.

    ಬಿಜೆಪಿಗೆ ಮತ ನೀಡಿ, ಮಮತಾ ಬ್ಯಾನರ್ಜಿ ಗೂಂಡಾಗಳನ್ನು ತಲೆ ಕೆಳಗಾಗಿ ನೇತು ಹಾಕ್ತೀವಿ: ಅಮಿತ್ ಷಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts