More

    ಬಾಂಗ್ಲಾದಲ್ಲಿ ಭಾರತದ ಮಹಿಳೆಯರಿಂದ ಶುಭಾರಂಭ; ಮೊದಲ ಟಿ20 ಪಂದ್ಯದಲ್ಲಿ 44 ರನ್​ ಜಯಭೇರಿ

    ಸೈಲೆಟ್​: ವೇಗಿಗಳಾದ ರೇಣುಕಾ ಸಿಂಗ್​ (18ಕ್ಕೆ 3) ಮತ್ತು ಪೂಜಾ ವಸ್ತ್ರಾಕರ್​ (25ಕ್ಕೆ 2) ಬಿಗಿ ದಾಳಿಯ ನೆರವಿನಿಂದ ಭಾರತ ತಂಡ ಮಹಿಳೆಯರ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ವಿರುದ್ಧ 44 ರನ್​ಗಳಿಂದ ಸುಲಭ ಗೆಲುವು ದಾಖಲಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1&0 ಮುನ್ನಡೆ ಸಾಧಿಸಿದೆ.

    ಭಾನುವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ಗೆ ಇಳಿದ ಭಾರತ ಶೆಫಾಲಿ ವರ್ಮ (31), ಯಸ್ತಿಕಾ ಭಾಟಿಯಾ (36), ನಾಯಕಿ ಹರ್ಮಾನ್​ಪ್ರೀತ್​ ಕೌರ್​ (30) ಉಪಯುಕ್ತ ಕೊಡುಗೆಯಿಂದ 7 ವಿಕೆಟ್​ಗೆ 145 ರನ್​ ಪೇರಿಸಿತು. ಪ್ರತಿಯಾಗಿ ಬಾಂಗ್ಲಾ 8 ವಿಕೆಟ್​ಗೆ 101 ರನ್​ ಗಳಿಸಲಷ್ಟೇ ಶಕ್ತವಾಯಿತು. ಸರಣಿಯ 2ನೇ ಪಂದ್ಯ ಮಂಗಳವಾರ ನಡೆಯಲಿದೆ.

    ಭಾರತ ಪರ ಸಜೀವನ್​ ಸಜನಾ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು.

    ಭಾರತ: 7 ವಿಕೆಟ್​ಗೆ 145 (ಸ್ಮೃತಿ 9, ಶೆಫಾಲಿ 31, ಯಸ್ತಿಕಾ 36, ಹರ್ಮಾನ್​ಪ್ರೀತ್​ 30, ರಿಚಾ 23, ಸಜೀವನ್​ 11, ಅಕ್ತೆರ್​ 13ಕ್ಕೆ 2, ರಬೆಯಾ 23ಕ್ಕೆ 3), ಬಾಂಗ್ಲಾದೇಶ: 8 ವಿಕೆಟ್​ಗೆ 101 (ನಿಗರ್​ ಸುಲ್ತಾನ 51, ಅಕ್ತೆರ್​ 11, ರೇಣುಕಾ ಸಿಂಗ್​ 18ಕ್ಕೆ 3, ಪೂಜಾ 25ಕ್ಕೆ 2, ಶ್ರೇಯಾಂಕಾ 24ಕ್ಕೆ 1). ಪಂದ್ಯಶ್ರೇಷ್ಠ: ರೇಣುಕಾ ಸಿಂಗ್​.

    ಏಷ್ಯನ್​ ಕಿರಿಯರ ಅಥ್ಲೆಟಿಕ್ಸ್​ನಲ್ಲಿ ರಾಜ್ಯದ ಉನ್ನತಿ, ನಿಯೋಲ್​ಗೆ ಕಂಚಿನ ಪದಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts