More

    ಮಂಡೆಕೋಲು ದೇವಳ ಜಾತ್ರೋತ್ಸವ ಸಂಪನ್ನ

    ಸುಳ್ಯ: ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶನಿವಾರ ವೈಭವದ ಮಹಾವಿಷ್ಣುಮೂರ್ತಿ ದೈವದ ನಡಾವಳಿಯೊಂದಿಗೆ ಮೂರು ದಿನದ ಜಾತ್ರೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು.

    ಶನಿವಾರ ದೇಗುಲದ ಬಡಗು ದಿಕ್ಕಿನಲ್ಲಿರುವ ವಿಷ್ಣುಮೂರ್ತಿ ದೈವದ ಕಟ್ಟೆಯ ಸನಿಹ ಶ್ರೀ ವಿಷ್ಣುಮೂರ್ತಿ ದೈವದ ನಡಾವಳಿ ನಡೆಯಿತು. ಭಕ್ತರು ಹಾಜರಿದ್ದು ದೈವದ ಪ್ರಸಾದ ಸ್ವೀಕರಿಸಿದರು. ನಂತರ ಅನ್ನಸಂತರ್ಪಣೆ ನಡೆಯಿತು. ಇಪ್ಪತ್ತಾರು ವರ್ಷ ಬಳಿಕ ದೇಗುಲದಲ್ಲಿ ಪುನಃಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದಿದ್ದು, ಶನಿವಾರ ವೈಭವದ ವಿಷ್ಣುಮೂರ್ತಿ ದೈವದ ನಡಾವಳಿ ನಡೆಯುವುದರೊಂದಿಗೆ ಕಳೆದ ಇಪ್ಪತ್ತು ದಿನಗಳಿಂದ ದೇಗುಲದಲ್ಲಿ ನಡೆಯುತ್ತಿದ್ದ ವಿವಿಧ ಧಾರ್ಮಿಕ, ವೈದಿಕ, ತಾಂತ್ರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಂತಿಮ ತೆರೆ ಎಳೆದಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts