ಕಡಬ ವ್ಯಾಘ್ರ ಚಾಮುಂಡಿ ದೈವಸ್ಥಾನದ ದಾರಂದ ಮೂಹೂರ್ತ

Daranda muhutha
ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದ ಬಾಗಿಲ ದಾರಂದ ಮೂಹೂರ್ತ ಕಾರ್ಯಕ್ರಮ ನಡೆಯಿತು.
Published on

ಕಡಬ: ಜೀರ್ಣೋದ್ಧಾರ ನಡೆಯುತ್ತಿರುವ ಕಡಬ ಶ್ರೀಕಂಠ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಸಂಬಂಧಿಸಿದ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದ ಬಾಗಿಲ ದಾರಂದ ಮೂಹೂರ್ತ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಅರ್ಚಕ ಕೇಶವ ಬೈಪಾಡಿತ್ತಾಯ ಧಾರ್ಮಿಕ ವಿಧಿವಿಧಾನ ನೇರವೇರಿಸಿದರು.

ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ನಾಕ್ ಮೇಲಿನಮನೆ, ಕಾರ್ಯದರ್ಶಿ ಮೋನಪ್ಪ ಗೌಡ ನಾಡೋಳಿ, ಉಪಾಧ್ಯಕ್ಷೆ ಪುಲಸ್ತ್ಯಾ ರೈ, ದೇವಸ್ಥಾನದ ನಂದಿ ನಿರ್ವಾಹಣಾ ಸಮಿತಿ ಗೌರವಾಧ್ಯಕ್ಷ ವಿಶ್ವನಾಥ ರೈ ಪೆರ್ಲ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮುತ್ತು ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net