ನವದೆಹಲಿ: ಕಳೆದ ಪಂದ್ಯದಲ್ಲಿ ನಾಯಕ ರಿಷಭ್ ಪಂತ್ ನಡೆಸಿದ ಬ್ಯಾಟಿಂಗ್‌ನಿಂದ ಪ್ಲೇಆ್ಗೇರುವ ಪ್ರಬಲ ತಂಡ ಎನಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್-17ರಲ್ಲಿ ಶನಿವಾರ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಎರಡೂ ತಂಡಗಳು ಹಾಲಿ ಟೂರ್ನಿಯಲ್ಲಿ ಅಸ್ಥಿರ ನಿರ್ವಹಣೆಯಿಂದ ಹಿನ್ನಡೆ ಅನುಭವಿಸಿದ್ದು, ಈ ಪಂದ್ಯ ಪ್ರಮುಖ ಎನಿಸಿದೆ.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಹಾಲಿ ಟೂರ್ನಿಯಲ್ಲಿ 2 ಪಂದ್ಯಗಳು ನಡೆದಿದ್ದು, 900ಕ್ಕೂ ಅಧಿಕ ರನ್ ದಾಖಲಾಗಿವೆ. ಈ ವರ್ಷ ಡೆಲ್ಲಿ-ಮುಂಬೈ ನಡುವಿನ 2ನೇ ಮುಖಾಮುಖಿ ಇದಾಗಿದ್ದು, ಏ.17ರಂದು ನಡೆದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ರನ್‌ಹೊಳೆ ಹರಿಸಿ ಗೆಲುವು ದಾಖಲಿಸಿತ್ತು. ಇದೀಗ ಆ ಸೋಲಿಗೆ ತವರಿನಲ್ಲಿ ಸೇಡು ತೀರಿಸುವ ಅವಕಾಶ ಪಂತ್ ಬಳಗದ ಮುಂದಿದೆ. ಡೆಲ್ಲಿ ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 4 ಗೆಲುವು, 5 ಸೋಲಿನ ಮಿಶ್ರ ಲಿತಾಂಶದೊಂದಿಗೆ 8 ಅಂಕ ಕಲೆಹಾಕಿದೆ. ಇತ್ತ ಮುಂಬೈ ಇಂಡಿಯನ್ಸ್ 8 ಪಂದ್ಯಗಳಲ್ಲಿ 3 ಗೆಲುವು, 5 ಸೋಲಿನೊಂದಿಗೆ 6 ಅಂಕ ಕಲೆಹಾಕಿದೆ. ಪ್ಲೇಆ್ ರೇಸ್‌ನಲ್ಲಿ ಉಳಿಯಲು ಮುಂಬೈ ಬಾಕಿಯಿರುವ 6 ಪಂದ್ಯಗಳಲ್ಲಿ 5 ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಅದಕ್ಕೂ ಮುನ್ನ ಬಲಿಷ್ಠ ಹನ್ನೊಂದರ ಬಳಗವನ್ನು ಕಂಡುಕೊಳ್ಳಬೇಕಿದೆ.
ಮುಂಬೈ ಹಾದಿ ಕಠಿಣ…: ಹಾಲಿ ಆವೃತ್ತಿಯಲ್ಲಿ ಸತತವಾಗಿ ಏಳು-ಬೀಳುಗಳನ್ನು ಕಂಡಿರುವ ಮುಂಬೈ, ಹಿಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು 9 ವಿಕೆಟ್‌ಗಳ ಹೀನಾಯ ಸೋಲುಂಡಿದೆ. ಮೈನಸ್ ರನ್‌ರೇಟ್ ಹೊಂದಿರುವ ಮುಂಬೈ ಮುಂದಿನ ಹಾದಿ ಕಠಿಣವೆನಿಸಿದೆ. ಗೆಲುವಿನ ಜತಗೆ ರನ್‌ರೇಟ್ ಸುಧಾರಿಸಿಕೊಳ್ಳುವ ಒತ್ತಡವೂ ಇದೆ. ಇಶಾನ್ ಕಿಶನ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟ್‌ನಿಂದ ರನ್‌ಗಳಿಸುವಲ್ಲಿ ಎಡವಿದ್ದಾರೆ. ರೋಹಿತ್, ಸೂರ್ಯ ಹಾಗೂ ತಿಲಕ್ ವರ್ಮ ತಂಡಕ್ಕೆ ಬ್ಯಾಟಿಂಗ್ ಆಧಾರ. ಬೌಲಿಂಗ್‌ನಲ್ಲಿ ಜಸ್‌ಪ್ರೀತ್ ಬುಮ್ರಾಗೆ ಇತರ ಆಟಗಾರರಿಂದ ಸೂಕ್ತ ಬೆಂಬಲ ದೊರೆತಿಲ್ಲ. ಗೆರಾಲ್ಡ್ ಕೋಟ್‌ಜೀ ದುಬಾರಿ ಜತೆಗೆ ಅನುಭವಿ ಸ್ಪಿನ್ನರ್‌ಗಳು ತಂಡದಲ್ಲಿ ಇಲ್ಲ್ಲದಿರುವುದು ಈ ಬಾರಿ ಮುಂಬೈಗೆ ದೊಡ್ಡ ಪೆಟ್ಟು ನೀಡಿದೆ.
್ರೇಸರ್-ಪಂತ್ ಶಕ್ತಿ
ಆರಂಭಿಕರ ಅಸ್ಥಿರತೆ ನಡುವೆಯೂ ಜೇಕ್ ್ರೇಸರ್, ರಿಷಭ್ ಪಂತ್ ಅವರನ್ನೆ ನೆಚ್ಚಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟಾನ್ಸ್ ಎದುರಿನ ರೋಚಕ ಗೆಲುವಿನೊಂದಿಗೆ ಜಯದ ಹಾದಿಗೆ ಮರಳಿದೆ. ಬಾಕಿ ಉಳಿದಿರುವ 5 ಪಂದ್ಯಗಳಲ್ಲಿ 4 ಗೆದ್ದರೂ ಡೆಲ್ಲಿ ಪ್ಲೇ ಆ್ಗೇರುವುದು ಇತರ ತಂಡಗಳ ಲಿತಾಂಶದ ಮೇಲೆ ಅವಲಂಬಿತ ಆಗಿರಲಿದೆ. ಸದ್ಯ 8 ಅಂಕ ಸಂಪಾದಿಸಿರುವ ಡೆಲ್ಲಿ 16 ಅಂಕಗಳಿಸಲು ಕನಿಷ್ಠ 4 ಪಂದ್ಯ ಜಯಿಸಬೇಕು. ಜತೆಗೆ ಉತ್ತಮ ರನ್‌ರೇಟ್ ಕಾಯ್ದುಕೊಳ್ಳಬೇಕಿದೆ. ಬೇರೆ ತಂಡಗಳು 16 ಅಂಕಗಳಿಸಿದರೆ ರನ್‌ರೇಟ್ ಪ್ರಮುಖ ಎನಿಸಲಿದೆ.
ಮುಖಾಮುಖಿ: 34
ಮುಂಬೈ: 19
ಡೆಲ್ಲಿ: 15
ಆರಂಭ: ಮಧ್ಯಾಹ್ನ 3.30