More

    ಭಾರತದ ಈ ಪುರುಷರಿಂದ ಗರ್ಭಧರಿಸಲು ಮಹಿಳೆಯರು ವಿದೇಶದಿಂದಲೂ ಬರ್ತಾರೆ! ನಂಬದಿದ್ರೂ ಇದೇ ಸತ್ಯ

    ನವದೆಹಲಿ: ಲಡಾಖ್ ತನ್ನ ನೈಸರ್ಗಿಕ ಸೌಂದರ್ಯದಿಂದಾಗಿ ಪ್ರತಿ ವರ್ಷ ಅರ್ಧ ಮಿಲಿಯನ್​ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಶಾಂತ ಸುಂದರ ಸರೋವರಗಳು, ವಿಶಾಲವಾದ ಶೀತ ಮರುಭೂಮಿ ಮತ್ತು ಪ್ರಾಚೀನ ಬೌದ್ಧ ಮಠಗಳು ಲಡಾಖ್‌ನ ಕೆಲವು ಆಕರ್ಷಕ ವೈಶಿಷ್ಟ್ಯಗಳಾಗಿವೆ. ಇದಿಷ್ಟೇ ಅಲ್ಲದೆ, ಲಡಾಖ್ ಮತ್ತೊಂದು ವಿಚಾರದಲ್ಲಿ ಎಲ್ಲರ ಗಮನ ಸೆಳೆಯುತ್ತದೆ. ಅದುವೇ ಪ್ರೆಗ್ನೆನ್ಸಿ ಪ್ರವಾಸೋದ್ಯಮ. ಇದನ್ನು ಕೇಳಿದರೆ ಇದ್ಯಾವ ಪ್ರವಾಸೋದ್ಯಮ ಎಂಬ ಕುತೂಹಲ ನಿಮ್ಮಲ್ಲಿ ಮೂಡುತ್ತದೆ. ಅದೇನೆಂದರೆ ಲಡಾನ್​ನ ಪುರುಷರಿಂದ ಗರ್ಭಿಣಿಯಾಗಲು ವಿವಿಧ ದೇಶದ ಮಹಿಳೆಯರು ಲಡಾಖ್​ಗೆ ಬರುತ್ತಾರೆ ಎಂಬ ವರದಿ ಇದೆ.

    ನೀವಿದನ್ನು ನಂಬದಿದ್ದರೂ ಇದೇ ಸತ್ಯ. ಈ ಪ್ರದೇಶದ ಪುರುಷರಿಂದ ಗರ್ಭಧರಿಸಲು ಮಹಿಳೆಯರು ಬಯಸುತ್ತಾರೆ. ಇದರ ಹಿಂದೆ ಒಂದು ಇತಿಹಾಸವೂ ಇದೆ. ಲಡಾಖ್‌ನ ಎತ್ತರದ ಪರ್ವತ ಶ್ರೇಣಿಗಳಲ್ಲಿ ಸಿಂಧೂ ನದಿಯ ದಡದಲ್ಲಿ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಕೆಲವು ಹಿಮಾಲಯನ್ ಹಳ್ಳಿಗಳಿವೆ. ಈ ಗ್ರಾಮಗಳನ್ನು ಬ್ರೋಕ್ಪಾ (Brokpa) ಬುಡಕಟ್ಟು ಜನಾಂಗದವರ ವಾಸಸ್ಥಾನವೆಂದು ಪರಿಗಣಿಸಲಾಗಿದೆ. ಈ ಬ್ರೋಕ್ಪಾ ಬುಡಕಟ್ಟಿಗೆ ಸೇರಿದ ಜನರು ನಿಜವಾಗಿಯೂ ಆರ್ಯನ್ ವಂಶಕ್ಕೆ ಸೇರಿದವರೆಂದು ನಂಬಲಾಗಿದೆ.

    ಬ್ರೋಕ್ಪಾ ಸಮುದಾಯವು ವಿಸ್ತಾರವಾದ ಹೂವಿನ ಶಿರಸ್ತ್ರಾಣಗಳಿಗೆ ಹೆಸರುವಾಸಿಯಾಗಿದೆ. ಬ್ರೋಕ್ಪಾ ಸಮುದಾಯದ ಪುರುಷರು ಎತ್ತರದ ಮತ್ತು ಗಟ್ಟಿಮುಟ್ಟಾಗಿದ್ದು, ಬಾದಾಮಿ ಆಕಾರದ ನೀಲಿ-ಹಸಿರು ಕಣ್ಣುಗಳನ್ನು ಹೊಂದಿರುತ್ತಾರೆ ಮತ್ತು ತಿಳಿ ಕಂದು ಬಣ್ಣದ ಕೂದಲು ಹಾಗೂ ಅತಿರಂಜಿತ ಬಟ್ಟೆಗಳನ್ನು ಧರಿಸುತ್ತಾರೆ. ಈ ಬ್ರೋಕ್ಪಾ ಬುಡಕಟ್ಟು ಲಡಾಖ್‌ನಲ್ಲಿ ಮಾತ್ರ ಕಂಡುಬರುತ್ತದೆ. ಚಕ್ರವರ್ತಿ ಅಲೆಕ್ಸಾಂಡರ್​ ಸೈನ್ಯದೊಂದಿಗೆ ಸಂಬಂಧ ಹೊಂದಿರುವ ಅವರನ್ನು ಸಾಮಾನ್ಯವಾಗಿ ಶುದ್ಧ-ರಕ್ತದ ಆರ್ಯರು ಎಂದು ಕರೆಯಲಾಗುತ್ತದೆ. ಅನೇಕ ಮಹಿಳೆಯರು ಇಲ್ಲಿನ ಪುರುಷರಿಂದ ಮಕ್ಕಳನ್ನು ಹೊಂದಲು ಪ್ರಪಂಚದ ವಿವಿಧ ಭಾಗಗಳಿಂದ ಬರುತ್ತಾರೆ. ಆರ್ಯರ ರಕ್ತ, ಚಾರಿತ್ರ್ಯ ಮತ್ತು ರೂಪವುಳ್ಳ ಮಕ್ಕಳನ್ನು ಪಡೆಯುವುದು ಮಹಿಳೆಯರು ಭೇಟಿ ನೀಡುವ ಏಕೈಕ ಉದ್ದೇಶವಾಗಿದೆ. ಇದು ಈ ಪ್ರದೇಶದಲ್ಲಿ ವ್ಯಾಪಾರವಾಗಿ ಬೆಳೆದಿದೆ.

    ಬ್ರೋಕ್ಪಾ ಸಮುದಾಯದವರು ಆರ್ಯರ ಎಲ್ಲ ಗುಣಲಕ್ಷಣಗಳನ್ನು ಮತ್ತು ನೋಟವನ್ನು ಹೊಂದಿದ್ದಾರೆ ಮತ್ತು ತಮ್ಮದೇ ಆದ ವಿಶೇಷ ಜೀವನ ವಿಧಾನವನ್ನು ಹೊಂದಿದ್ದಾರೆ. ಈ ಜಾತಿಗೆ ಸೇರಿದ ಮಹಿಳೆಯರು ಬೇರೆ ಸಮುದಾಯದವರನ್ನು ಮದುವೆಯಾಗುವಂತಿಲ್ಲ. ಅಥವಾ ಯಾವುದೇ ಮಹಿಳೆಯರು ಆರ್ಯೇತರರನ್ನು ಮದುವೆಯಾದರೆ, ಅವರನ್ನು ಆರ್ಯ ಸಮುದಾಯಕ್ಕೆ ಮರು ಸೇರಿಸಿಕೊಳ್ಳಲಾಗುವುದಿಲ್ಲ ಎಂದು ಹೇಳಲಾಗಿದೆ.

    ಆದರೆ, ಬ್ರೋಕ್ಪಾ ಸಮುದಾಯವು ಆರ್ಯರ ವಂಶಸ್ಥರೇ? ಮೌಖಿಕ ನಿರೂಪಣೆಗಳು, ಜಾನಪದ ಮತ್ತು ನೀತಿಕಥೆಗಳ ಸಮರ್ಥನೆಯನ್ನು ದೃಢೀಕರಿಸಲು ಯಾವುದೇ ಬಲವಾದ ಪುರಾವೆಗಳು ಇಲ್ಲ. ಬ್ರೋಕ್ಪಾ ಸಮುದಾಯದ ಹಕ್ಕುಗಳನ್ನು ದೃಢೀಕರಿಸಲು ಯಾವುದೇ ಡಿಎನ್‌ಎ ಅಥವಾ ಆನುವಂಶಿಕ ಪರೀಕ್ಷೆಯನ್ನು ಸಹ ಮಾಡಲಾಗಿಲ್ಲ. (ಏಜೆನ್ಸೀಸ್​)

    ಬುಕ್​​ ಮಾಡಿದ್ದು ಮೊಬೈಲ್​ ಆದ್ರೆ ಬಂದಿದ್ದು ಕಲ್ಲು! ಗ್ರಾಹಕನ ಆಕ್ರೋಶಕ್ಕೆ ಹೆದರಿದ ಫ್ಲಿಪ್​ಕಾರ್ಟ್ ಹೇಳಿದ್ದೇನು?

    ರೂ. 46 ಕೋಟಿ ಮೊತ್ತದ ಆದಾಯ ತೆರಿಗೆ ನೋಟಿಸ್​ ನೋಡಿ ಹೌಹಾರಿದ ವಿದ್ಯಾರ್ಥಿ: ನಿಮ್ಮ ಪ್ಯಾನ್​ ಕಾರ್ಡ್​ ದುರ್ಬಳಕೆ ಕಂಡುಹಿಡಿಯುವುದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts