More

    ಈಡನ್‌ನಲ್ಲಿ ನೈಟ್‌ರೈಡರ್ಸ್‌ಗೆ ಪಂಜಾಬ್ ಕಿಂಗ್ಸ್ ಸವಾಲು: ಮಿಚೆಲ್ ಸ್ಟಾರ್ಕ್ ಮೇಲೆ ಚಿತ್ತ

    ಕೋಲ್ಕತ: ಸತತ 4 ಪಂದ್ಯಗಳಲ್ಲಿ ಸೋಲು ಅನುಭವಿಸಿ ಪ್ಲೇಆ್ ರೇಸ್‌ನಿಂದ ಹೊರಬೀಳುವ ಭೀತಿ ಎದುರಿಸುತ್ತಿರುವ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್-17ರಲ್ಲಿ ಶುಕ್ರವಾರ ಈಡನ್ ಗಾರ್ಡನ್ಸ್‌ನಲ್ಲಿ ಆತಿಥೇಯ ಕೋಲ್ಕತ ನೈಟ್‌ರೈಡರ್ಸ್‌ ಎದುರು ಕಾದಾಟ ನಡೆಸಲಿದೆ. ಆರ್‌ಸಿಬಿ ಎದುರು 1 ರನ್‌ನಿಂದ ರೋಚಕ ಗೆಲುವು ದಾಖಲಿಸಿರುವ ಶ್ರೇಯಸ್ ಅಯ್ಯರ್ ಪಡೆ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ.
    ಹಾಲಿ ಟೂರ್ನಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಪಂಜಾಬ್ ಆಡಿರುವ 8 ಪಂದ್ಯಗಳಲ್ಲಿ 2 ಜಯ, 6 ಸೋಲಿನೊಂದಿಗೆ 4 ಅಂಕ ಕಲೆಹಾಕಿದೆ. ಪ್ಲೇಆ್ ರೇಸ್‌ನಲ್ಲಿ ಉಳಿಯಲು ಎಲ್ಲ 6 ಲೀಗ್ ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಪುಟಿದೇಳಬೇಕಿದೆ. ಇಲ್ಲದಿದ್ದರೆ ಸತತ 17ನೇ ವರ್ಷವೂ ಪ್ರಶಸ್ತಿಯಿಲ್ಲದ ಕೊರಗು ಕಾಡಲಿದೆ. ಮತ್ತೊಂದೆಡೆ ಹಾಲಿ ಟೂರ್ನಿಯಲ್ಲಿ ಎರಡನೇ ಯಶಸ್ವಿ ತಂಡ ಎನಿಸಿರುವ ಕೆಕೆಆರ್ ಹಿಂದಿನ ಪಂದ್ಯದಲ್ಲಿ ಸೋಲಿನಿಂದ ಪಾರಾಗಿದ್ದು, ಆಡಿರುವ 7 ಪಂದ್ಯಗಳಲ್ಲಿ 5 ಜಯ, 2 ಸೋಲು ಕಂಡು 10 ಅಂಕ ಸಂಪಾದಿಸಿದೆ. ಇದರಲ್ಲಿ 4 ಪಂದ್ಯಗಳಲ್ಲಿ 200 ಪ್ಲಸ್ ರನ್ ಕಲೆಹಾಕಿರುವ ಕೆಕೆಆರ್ ಗೆಲುವಿನ ನೆಚ್ಚಿನ ತಂಡ ಎನಿಸಿದೆ. ಹಾಲಿ ಟೂರ್ನಿಯಲ್ಲಿ ಉಭಯ ತಂಡಗಳ ಮೊದಲ ಮುಖಾಮುಖಿ ಇದಾಗಿದೆ.

    ಮಿಚೆಲ್ ಸ್ಟಾರ್ಕ್ ಮೇಲೆ ಚಿತ್ತ: ಟೂರ್ನಿಯಲ್ಲಿ ಬರೋಬ್ಬರಿ ₹24.75 ಕೋಟಿ ಸಂಭಾವನೆಯೊಂದಿಗೆ ದುಬಾರಿ ಆಟಗಾರ ಆಗಿರುವ ಮಿಚೆಲ್ ಸ್ಟಾರ್ಕ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಕಳೆದ ವರ್ಷದ ಏಕದಿನ ವಿಶ್ವಕಪ್ ಟೂರ್ನಿ ಪ್ರದರ್ಶನದ ಬಳಿಕ ಭಾರಿ ನಿರೀಕ್ಷೆ ಮೂಡಿಸಿದ್ದ ಸ್ಟಾರ್ಕ್, ಇದುವರೆಗೆ 6 ವಿಕೆಟ್ ಮಾತ್ರ ಪಡೆದಿದ್ದಾರೆ. ಜತೆಗೆ 11.48ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಆದರೆ ಕೆಕೆಆರ್‌ನ ದೇಶೀಯ ಬೌಲರ್‌ಗಳಾದ ಹರ್ಷಿತ್ ರಾಣಾ (9.25), ವೈಭವ್ ಆರೋರ 9.57) ಇಬ್ಬರು ವೇಗಿಗಳು ಸ್ಟಾರ್ಕ್‌ಗಿಂತ ಉತ್ತಮ ಬೌಲಿಂಗ್ ಸರಾಸರಿ ಹೊಂದಿದ್ದಾರೆ. ಬ್ಯಾಟಿಂಗ್‌ನಲ್ಲಿ ಪವರ್ ಹಿಟ್ಟರ್‌ಗಳನ್ನು ಹೊಂದಿರುವ ಕೆಕೆಆರ್‌ನಲ್ಲಿ ನಾಯಕ ಶ್ರೇಯಸ್ ಅಯ್ಯರ್ ಹೊರತುಪಡಿಸಿ ಇತರ ಬ್ಯಾಟರ್‌ಗಳು 150 ಪ್ಲಸ್ ಸ್ಟ್ರೈಕ್‌ರೇಟ್‌ನಲ್ಲಿ ರನ್ ಕಲೆಹಾಕಿದ್ದಾರೆ. ಸುನೀಲ್ ನಾರಾಯಣ್ (286), ಫಿಲ್ ಸಾಲ್ಟ್ (249) ಭರ್ಜರಿ ಲಯದಲ್ಲಿದ್ದಾರೆ. ವೆಂಕಟೇಶ್ ಅಯ್ಯರ್ ಾರ್ಮ್ ಮಾತ್ರ ತಂಡಕ್ಕೆ ಹಿನ್ನಡೆ ಎನಿಸಿದೆ.

    ಒತ್ತಡದಲ್ಲಿ ಕಿಂಗ್ಸ್: ಕಾಯಂ ನಾಯಕ ಶಿಖರ್ ಧವನ್ ಗೈರಿನಲ್ಲಿ ಪಂಜಾಬ್ ಬ್ಯಾಟಿಂಗ್ ವಿಭಾಗ ರನ್‌ಗಳಿಸುವುದನ್ನೇ ಮರೆತಿದೆ. ಶಶಾಂಕ್ ಸಿಂಗ್, ಆಶುತೋಷ್ ಶರ್ಮ ಹೊರತುಪಡಿಸಿ ಉಳಿದವರು ರನ್ ಬರ ಎದುರಿಸಿದ್ದಾರೆ. ಹಂಗಾಮಿ ನಾಯಕ ಸ್ಯಾಮ್ ಕರ‌್ರನ್ ಆರಂಭಿಕನಾಗಿ ಬಡ್ತಿ ಪಡೆದರೂ ಪಂಜಾಬ್‌ಗೆ ಯಶಸ್ಸು ದಕ್ಕಲಿಲ್ಲ. ಶಿಖರ್ ಧವನ್ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದ್ದು, ಮುಂದಿನ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ. ಪಂಜಾಬ್ ಟೂರ್ನಿಯ ಉಳಿದ ಪಂದ್ಯಗಳಲ್ಲಿ ಪುಟಿದೇಳುವ ನಿರೀಕ್ಷೆ ಇದೆ. ವಿದೇಶೀ ಆಟಗಾರರು ಮಿಂಚದಿರುವುದು ಪಂಜಾಬ್‌ಗೆ ಪ್ರಮುಖ ಹಿನ್ನಡೆ ತಂದಿದೆ.

    ಮುಖಾಮುಖಿ: 32
    ಕೆಕೆಆರ್: 21
    ಪಂಜಾಬ್: 11
    ಆರಂಭ: ರಾತ್ರಿ 7.30
    ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts